Crime News: ಸಿಂಧೂರ ಹಚ್ಚಿದಕ್ಕೆ ಮಗಳನ್ನು ಕೊಂದ ತಾಯಿ

TV9 Digital Desk

| Edited By: Zahir Yusuf

Updated on: Sep 02, 2021 | 10:34 PM

Crime News in Kannada: ನಿರ್ಮಲಾ ದೇವಿಯನ್ನು ವಶಕ್ಕೆ ತೆಗೆದುಕೊಂಡು ಮತ್ತಷ್ಟು ವಿಚಾರಣೆಗೊಳಪಡಿಸಿದಾಗ ಕೊಲೆಯ ಹಿಂದಿನ ಅಸಲಿ ಕಾರಣ ಬಾಯಿಬಿಟ್ಟಿದ್ದಾಳೆ.

Crime News: ಸಿಂಧೂರ ಹಚ್ಚಿದಕ್ಕೆ ಮಗಳನ್ನು ಕೊಂದ ತಾಯಿ
ಸಾಂದರ್ಭಿಕ ಚಿತ್ರ

ನೀವು ಅಪರಾಧ ಲೋಕದಲ್ಲಿ ಪ್ರೀತಿ ಪ್ರೇಮದ ಹೆಸರಲ್ಲಿ ನಡೆದ ಹಲವು ಹತ್ಯೆಗಳ ಬಗ್ಗೆ ಓದಿರುತ್ತೀರಿ. ಆದರೆ ಇಲ್ಲೊಂದು ಕೊಲೆ ನಡೆದಿದೆ. ಅದು ಕೂಡ ಪ್ರೀತಿಯ ಹೆಸರಿನಲ್ಲಿಯೇ. ಆದರೆ ಅದನ್ನು ಮಾಡಿರೋದು ಸ್ವಂತ ತಾಯಿ. ಈ ಕೊಲೆಯ ಕಾರಣ ಕೂಡ ವಿಚಿತ್ರ. ಹೌದು, ಇಂತಹದೊಂದು ಹೃದಯ ಕಲಕುವ ಘಟನೆ ನಡೆದಿರುವುದು ಉತ್ತರ ಪ್ರದೇಶದ ಇಟವಾ ಪ್ರದೇಶದಲ್ಲಿ.

ಆರೋಪಿ ಮಹಿಳೆಯ ಮಗಳು ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಪ್ರೇಮದ ವಿಚಾರ ಮನೆಯಲ್ಲಿ ಗೊತ್ತಾದ ಬಳಿಕ ಹಲವು ಬಾರಿ ತಾಯಿ ಮಗಳ ನಡುವೆ ಜಗಳವಾಗಿತ್ತು. ಆದರೆ ತಾಯಿಯ ಮಾತು ಕೇಳಲು ಮಗಳು ಸಿದ್ದಳಿರಲಿಲ್ಲ. ಹೀಗೆ ಕೆಲ ದಿನಗಳ ಹಿಂದೆ ತನ್ನ ಪ್ರಿಯಕರನನ್ನು ಮದುವೆಯಾಗುವ ಬಗ್ಗೆ ತಾಯಿಗೆ ಹೇಳಿದಳು. ಈ ವಿಚಾರವಾಗಿ ಇಬ್ಬರ ನಡುವೆ ಸಾಕಷ್ಟು ಜಗಳವಾಗಿದೆ.

ಇದೇ ಕೋಪದಲ್ಲಿ, ತಾಯಿ ಮಗಳ ಕುತ್ತಿಗೆಯನ್ನು ಕತ್ತು ಕೊಯ್ದಿದ್ದಾಳೆ. ಆ ಬಳಿಕ ಈ ಘಟನೆಯನ್ನು ಮುಚ್ಚಿಟ್ಟ ಮಹಿಳೆಯ ಕುಟುಂಬಸ್ಥರು ಮಗಳ ಪ್ರಿಯಕರ ರಾಜಕುಮಾರ್ ಮತ್ತು ಆತನ ಇಬ್ಬರು ಸ್ನೇಹಿತರ ವಿರುದ್ಧ ಪ್ರಕರಣ ದಾಖಲಿಸಿತ್ತು. ಇತ್ತ ಪ್ರಕರಣ ದಾಖಲಾಗುತ್ತಿದ್ದಂತೆ ಯುವಕರ ತಂಡ ಕೂಡ ಪರಾರಿಯಾಗಿತ್ತು. ಹೀಗಾಗಿ ಪ್ರಿಯಕರನೇ ಯುವತಿಯನ್ನು ಕೊಲೆ ಮಾಡಿದ್ದಾಳೆ ಎಂಬ ಗುಲ್ಲೆದ್ದಿತ್ತು.

ಇದಾಗ್ಯೂ ಪೊಲೀಸರು ಹಲವು ರೀತಿಯಲ್ಲಿ ತನಿಖೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಮಗಳ ಕೊಲೆಗೆ ಸಂಬಂಧಿಸಿದಂತೆ ಆಕೆಯ ತಾಯಿ ನಿರ್ಮಲಾ ದೇವಿಯನ್ನು ವಿಚಾರಿಸಿದ್ದಾರೆ. ಈ ವೇಳೆ ಮಗಳ ಹಣೆಗೆ ರಾಜಕುಮಾರ್ ಸಿಂಧೂರ ಹಚ್ಚಿದ್ದಾನೆ ಎಂಬ ಮಾಹಿತಿಯೊಂದನ್ನು ನಿರ್ಮಲಾ ದೇವಿ ಬಾಯಿಬಿಟ್ಟಿದ್ದಾಳೆ. ಈ ಎಳೆಯನ್ನು ಆಧರಿಸಿ ತನಿಖೆ ನಡೆಸಿದಾಗ, ಸಿಂಧೂರದ ವಿಚಾರ ಆಕೆಯ ಮನೆಯ ಬಾಗಿಲಿಗೆ ಬಂದು ನಿಂತಿದೆ.

ನಿರ್ಮಲಾ ದೇವಿಯನ್ನು ವಶಕ್ಕೆ ತೆಗೆದುಕೊಂಡು ಮತ್ತಷ್ಟು ವಿಚಾರಣೆಗೊಳಪಡಿಸಿದಾಗ ಕೊಲೆಯ ಹಿಂದಿನ ಅಸಲಿ ಕಾರಣ ಬಾಯಿಬಿಟ್ಟಿದ್ದಾಳೆ. ಹೌದು, ಪ್ರಿಯಕರನ ಜೊತೆ ಮದುವೆಯನ್ನು ವಿರೋಧಿಸಿದಕ್ಕೆ ಮಗಳು ಸಿಂಧೂರ ಹಚ್ಚುತ್ತಿದ್ದಳು. ಅದು ಕೂಡ ರಾಜಕುಮಾರ್ ಹೆಸರಿನಲ್ಲಿ. ಆತನೇ ನನ್ನ ಗಂಡ ಎಂದು ಆಕೆ ಸಿಂಧೂರ ಹಚ್ಚಿಕೊಳ್ಳುತ್ತಿದ್ದಳು. ಇದರಿಂದ ಕುಪಿತಗೊಂಡಿದ್ದ ನಿರ್ಮಲಾ ದೇವಿ ಮಗಳೊಂದಿಗೆ ಜಗಳವಾಡಿದ್ದಾಳೆ. ಜಗಳ ತಾರಕ್ಕೇರಿ ಕೈಗೆ ಸಿಕ್ಕ ಕತ್ತಿಯಿಂದ ಮಗಳ ಕತ್ತನ್ನು ಕೊಯ್ದಿರುವುದನ್ನು ಒಪ್ಪಿಕೊಂಡಿದ್ದಾಳೆ. ಇದೀಗ ಇಟವಾ ಪೊಲೀಸರು ನಿರ್ಮಲಾ ದೇವಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

ಇದನ್ನೂ ಓದಿ: ರಾಹುಲ್ ದ್ರಾವಿಡ್ ಗರಡಿ ಹುಡುಗನ ಆರ್ಭಟ: ಎದುರಾಳಿ ತಂಡ 69 ರನ್​ಗೆ ಆಲೌಟ್

ಇದನ್ನೂ ಓದಿ: Shane Warne: ಸಾರ್ವಕಾಲಿಕ ಟಾಪ್ 10 ವೇಗಿಗಳನ್ನು ಹೆಸರಿಸಿದ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್​

ಇದನ್ನೂ ಓದಿ: Crime News: ಬಾಲಕನನ್ನು ಮದುವೆಯಾಗಿ ಜೈಲು ಸೇರಿದ ಯುವತಿ

(mother murder daughter because of applying sindoor name of boyfriend)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada