ಮುಂಬೈ: ಹಿಂದಿ ಟಿವಿ ಧಾರಾವಾಹಿಗಳಲ್ಲಿ ನಟಿಸುವ ಕಲಾವಿದೆಯರು ಮತ್ತು ಮಾಡೆಲ್ಗಳನ್ನೊಳಗೊಂಡ ಸೆಕ್ಸ್ ರ‍್ಯಾಕೆಟ್ ನಡೆಸುತ್ತಿದ್ದ ಅರೋಪದಲ್ಲಿ 32-ವರ್ಷ ವಯಸ್ಸಿನ ಮಾಡೆಲ್ ಒಬ್ಬಳನ್ನು ಮುಂಬೈ ಕ್ರೈಮ್ ಬ್ರ್ಯಾಂಚ್ ಅಧಿಕಾರಿಗಳು ಬುಧವಾರ ಸಾಯಂಕಾಲ ಬಂಧಿಸಿರುವುದು ತಡವಾಗಿ ವರದಿಯಾಗಿದೆ. ಈಕೆಯನ್ನು ಮುಂಬೈ ಮಹಾನಗರದ ಉಪನಗರ ಜುಹುನಲ್ಲಿರುವ ಒಂದು ಐಷಾರಾಮಿ ಹೋಟೆಲ್ನಲ್ಲಿ ಬಂಧಿಸಲಾಗಿದೆ ಎಂದು ಕ್ರೈಮ್ ಬ್ರ್ಯಾಂಚ್ ಪೊಲೀಸ್ ಮೂಲಗಳು ತಿಳಿಸಿವೆ.
ಬುಧವಾರದಂದು ನಡೆದ ದಾಳಿಯಲ್ಲಿ ಟಿವಿ ಧಾರಾವಾಹಿಗಳಲ್ಲಿ ನಟಿಸುವ ಒಬ್ಬ ನಟಿ ಮತ್ತು ಒಂದು ಪ್ರಮುಖ ಎಂಟರ್ಟೇನ್ಮೆಂಟ್ ಚ್ಯಾನೆಲ್ ನಲ್ಲಿ ಕೆಲಸ ಮಾಡಿರುವ ಮತ್ತು ಒಂದು ಜನಪ್ರಿಯ ಬ್ರ್ಯಾಂಡ್ ಸಾಬೂನಿನ ಜಾಹೀರಾತಿನಲ್ಲಿ ಭಾಗಿಯಾಗಿರುವ ಒಬ್ಬ ರೂಪದರ್ಶಿಯನ್ನು ರಕ್ಷಿಸಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ನಟಿ ಮತ್ತು ಮಾಡೆಲ್ ಒಂದಿಗೆ ರೂ 4 ಲಕ್ಷಗಳಿಗೆ ಡೀಲ್ ಕುದುರಿಸಿದ್ದ ಆರೋಪಿತೆ ಒಂದು ನಿರ್ದಿಷ್ಟ ಸುಳಿವಿನ ನಂತರ ಬಂಧಿಸಲಾಯಿತು. ಪೊಲೀಸರು ಮಾರು ವೇಷದಲ್ಲಿ ಹೋಟೆಲ್ ಗೆ ಹೋಗಿ ಆಕೆಯನ್ನು ಬಂಧಿಸಿದರೆಂದು ತಿಳಿದು ಬಂದಿದೆ.
ಆರೋಪಿತಳನ್ನು ಅನೈತಿಕ ಚಟುವಟಿಕೆಗಳು (ತಡೆ) ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿದೆ. ತನಿಖೆ ಜಾರಿಯಲ್ಲಿದೆ ಎಂದು ಮುಂಬೈ ಕ್ರೈಮ್ ಬ್ರ್ಯಾಂಚ್ ಮೂಲಗಳು ತಿಳಿಸಿವೆ.