ಮುಂಬೈ: ಆಸ್ಪತ್ರೆಯ ಶೌಚಾಲಯದ ತ್ಯಾಜ್ಯದಲ್ಲಿ ನವಜಾತ ಶವ ಪತ್ತೆ
ಮುಂಬೈ ಸಯಾನ್ ಆಸ್ಪತ್ರೆಯ ಶೌಚಾಲಯದ ತ್ಯಾಜ್ಯದಲ್ಲಿ ನವಜಾತ ಹೆಣ್ಣು ಮಗುವಿನ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ನೀಡಿದ ವರದಿ ಪ್ರಕಾರ ನವಜಾತ ಶಿಶು ಜನಿಸಿದ ನಂತರ ಸಾವನ್ನಪ್ಪಿದೆ ಎಂದು ಗುರುವಾರ 8ರಂದು ಅಲ್ಲಿ ವೈದ್ಯ ವರದಿ ನೀಡಿದ್ದಾರೆ.
ಮುಂಬೈ, ಡಿ.9: ಮಹಾರಾಷ್ಟ್ರದ ಮುಂಬೈಲ್ಲಿ(Mumbai) ಅವಮಾನೀಯ ಕೃತ್ಯ ನಡೆದಿದೆ. ಮುಂಬೈ ಸಯಾನ್ ಆಸ್ಪತ್ರೆಯ ಶೌಚಾಲಯದ ತ್ಯಾಜ್ಯದಲ್ಲಿ ನವಜಾತ ಹೆಣ್ಣು ಮಗುವಿನ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ನೀಡಿದ ವರದಿ ಪ್ರಕಾರ ನವಜಾತ ಶಿಶು ಜನಿಸಿದ ನಂತರ ಸಾವನ್ನಪ್ಪಿದೆ ಎಂದು ಗುರುವಾರ 8ರಂದು ಅಲ್ಲಿ ವೈದ್ಯ ವರದಿ ನೀಡಿದ್ದಾರೆ. ಈ ಬಗ್ಗೆ ಪ್ರಾಥಮಿಕ ತನಿಖೆ ವರದಿ ಪ್ರಕಾರ ಆ ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿಯೊಬ್ಬರು ಈ ನವಜಾತ ಶಿಶುವಿನ ಮೃತದೇಹವನ್ನು ಪತ್ತೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಪೋಲೀಸರ ಪ್ರಕಾರ, ಸ್ವಚ್ಛತಾ ಸಿಬ್ಬಂದಿಯು ಪ್ರತಿದಿನ ಈ ಆಸ್ಪತ್ರೆಯ ಅಪಘಾತ ವಿಭಾಗದಲ್ಲಿರುವ ಕಸದ ಚೀಲವನ್ನು ವಿಲೇವಾರಿ ಮಾಡುತ್ತಾರೆ. ಆದರೆ ಅಲ್ಲಿನ ಕಸ ಚೀಲ ಅಷ್ಟೊಂದು ಭಾರವಾಗಿರಲ್ಲ, ಆದರೆ ಅಂದು ಸ್ವಚ್ಛತಾ ಸಿಬ್ಬಂದಿಗೆ ಈ ಕಸದ ಚೀಲ ತುಂಬಾ ಭಾರವಾಗಿದ್ದ ಕಾರಣ ಚೀಲದ ಒಳಗೆ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ನವಜಾತ ಶಿಶುವಿನ ಶವದ ಜೊತೆ ಕಪ್ಪು ಬ್ಯಾಗ್ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ನೀನು ಮಟನ್ ತಿಂದಿದ್ದರಿಂದ ಭಾರತ ಸೋತಿತು ಎಂದ ತಮ್ಮನನ್ನೇ ಕೊಂದ ಅಣ್ಣ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಆರಂಭಿಸಿದ್ದಾರೆ. ಇದೇ ರೀತಿಯ ಘಟನೆಯೊಂದು ಸೆಪ್ಟೆಂಬರ್‌ನಲ್ಲಿ ಮಹಾರಾಷ್ಟ್ರದ ನವಿ ಮುಂಬೈನ ಆಸ್ಪತ್ರೆಯಲ್ಲೂ ನಡೆದಿತ್ತು. ಆಸ್ಪತ್ರೆಯ ಹೊರಗೆ ನವಜಾತ ಹೆಣ್ಣು ಮಗು ಕಸದ ಚೀಲದಲ್ಲಿ ಪತ್ತೆಯಾಗಿತ್ತು. ಆದರೆ ಈ ಶಿಶು ಮಾತ್ರ ಜೀವಂತವಾಗಿತ್ತು. ಶಿಶುವನ್ನು ಪರಿಚಿತ ಮಹಿಳೆ ಲಕ್ಷ್ಮೀ ಎಂಬುವವರು ಬಿಟ್ಟು ಹೋಗಿದ್ದಾರೆ ಎಂದು ಪೊಲೀಸರ ವರದಿಯಲ್ಲಿ ತಿಳಿಸಲಾಗಿದೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ