Murder: ದೃಶ್ಯ ಸಿನಿಮಾ ರೀತಿಯಲ್ಲೇ ಕೊಲೆ; ಗಂಡನನ್ನು ಕೊಂದು, ಶವದ ಮೇಲೆ ಟ್ಯಾಂಕ್ ಕಟ್ಟಿದ ಹೆಂಡತಿ!

| Updated By: ಸುಷ್ಮಾ ಚಕ್ರೆ

Updated on: Jan 16, 2023 | 6:31 PM

ಮಹಿಳೆಯೊಬ್ಬಳು ತನ್ನ ಪ್ರಿಯಕರ ಮತ್ತು ಇನ್ನೊಬ್ಬ ಸ್ನೇಹಿತನ ಸಹಾಯದಿಂದ ಪತಿಯನ್ನು ಕೊಂದಿದ್ದಾಳೆ. ನಂತರ ಆ ಶವವನ್ನು ನಿರ್ಮಾಣ ಹಂತದಲ್ಲಿದ್ದ ಪ್ಲಾಟ್‌ನಲ್ಲಿ ಹೂತಿದ್ದಾಳೆ.

Murder: ದೃಶ್ಯ ಸಿನಿಮಾ ರೀತಿಯಲ್ಲೇ ಕೊಲೆ; ಗಂಡನನ್ನು ಕೊಂದು, ಶವದ ಮೇಲೆ ಟ್ಯಾಂಕ್ ಕಟ್ಟಿದ ಹೆಂಡತಿ!
ಸಾಂದರ್ಭಿಕ ಚಿತ್ರ
Follow us on

ಘಾಜಿಯಾಬಾದ್: ಮಲಯಾಳಂನಲ್ಲಿ ಬಂದ ದೃಶ್ಯಂ ಸಿನಿಮಾ (Drishyam Movie) ಸಿನಿಪ್ರಿಯರನ್ನು ಕುರ್ಚಿಯ ತುದಿಯಲ್ಲಿ ಕೂರುವಂತೆ ಮಾಡಿತ್ತು. ಕೊನೆಗೆ ಈ ಸಿನಿಮಾ ಕನ್ನಡ, ಹಿಂದಿ ಸೇರಿದಂತೆ ಹಲವು ಭಾಷೆಗಳಿಗೆ ರೀಮೇಕ್ ಕೂಡ ಆಗಿತ್ತು. ಬಳಿಕ ದೃಶ್ಯಂ 2 ಸಿನಿಮಾ ಕೂಡ ಬಂದಿತ್ತು. ಈ ಸಿನಿಮಾದ ಕತೆಯನ್ನೇ ಹೋಲುವ ರೀತಿಯಲ್ಲಿ ನಡೆದ ಕೊಲೆಯೊಂದು ಘಾಜಿಯಾಬಾದ್​ನಲ್ಲಿ (Ghaziabad) ಬಯಲಾಗಿದೆ. ಪ್ರೇಮಿ ಮತ್ತು ಇನ್ನೋರ್ವ ಗೆಳೆಯನ ಸಹಾಯದಿಂದ ತನ್ನ ಗಂಡನನ್ನು ಕೊಂದಿದ್ದ ಹೆಂಡತಿ ಕೊನೆಗೂ ಸಿಕ್ಕಿಬಿದ್ದಿದ್ದಾಳೆ.

ಘಾಜಿಯಾಬಾದ್​​ನಲ್ಲಿ ದೃಶ್ಯ ಸಿನಿಮಾವನ್ನು ಹೋಲುವ ರೀತಿಯ ಕೊಲೆ ರಹಸ್ಯವನ್ನು ಗಾಜಿಯಾಬಾದ್ ಪೊಲೀಸರು ಶನಿವಾರ ಭೇದಿಸಿದ್ದಾರೆ. ಪೊಲೀಸರ ಪ್ರಕಾರ, ಮಹಿಳೆಯೊಬ್ಬಳು ತನ್ನ ಪ್ರಿಯಕರ ಮತ್ತು ಇನ್ನೊಬ್ಬ ಸ್ನೇಹಿತನ ಸಹಾಯದಿಂದ ಪತಿಯನ್ನು ಕೊಂದಿದ್ದಾಳೆ. ನಂತರ ಆ ಶವವನ್ನು ನಿರ್ಮಾಣ ಹಂತದಲ್ಲಿದ್ದ ಪ್ಲಾಟ್‌ನಲ್ಲಿ ಹೂತಿದ್ದಾಳೆ. ಕೊನೆಗೆ ತಮ್ಮ ಅಪರಾಧವನ್ನು ಮುಚ್ಚಿಹಾಕಲು ಅದರ ಮೇಲೆ ಸೆಪ್ಟಿಕ್ ಟ್ಯಾಂಕ್ ನಿರ್ಮಿಸಿದ್ದಾರೆ.

ಈ ಪ್ರಕರಣದಲ್ಲಿ ಆರೋಪಿ ನೀತು ಮತ್ತು ಆಕೆಯ ಪ್ರಿಯಕರ ಹರ್ಪಾಲ್ ಅವರನ್ನು ಶನಿವಾರ ಬಂಧಿಸಲಾಗಿದ್ದು, ನೀತುವಿನ ಗಂಡ ಸತೀಶನ ಶವವನ್ನು ಬಿಸ್ರಖ್‌ನ ನಿರ್ಮಾಣ ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಮೂರನೇ ಆರೋಪಿ ಗೌರವ್ ಎಂಬ ಮೇಸ್ತ್ರಿಗಾಗಿ ಹುಡುಕುತ್ತಿದ್ದಾರೆ.

ಇದನ್ನೂ ಓದಿ: ಮಂಗಳೂರಿನಲ್ಲೊಂದು ದೃಶ್ಯಂ 3 ಕಥೆ! ಕದ್ದ ಹಣವನ್ನ ಪೊಲೀಸ್​ ಠಾಣೆ ಪಕ್ಕದಲ್ಲಿಯೇ ಬಚ್ಚಿಟ್ಟ ಖತರ್ನಾಕ್​ ಕಳ್ಳ

ಜನವರಿ 10ರಂದು ಮೃತನ ಸಹೋದರ ಛೋಟೇಲಾಲ್ ಪೊಲೀಸರಿಗೆ ತನ್ನ ಅಣ್ಣ ಸತೀಶ್ ನಾಪತ್ತೆಯಾದ ಬಗ್ಗೆ ದೂರು ನೀಡಿದ್ದ. ಬಳಿಕ ಪೊಲೀಸರು ಈ ಬಗ್ಗೆ ತನಿಖೆ ಪ್ರಾರಂಭಿಸಿದ್ದರು. ಛೋಟೇಲಾಲ್ ಅವರ ಸಹೋದರ 1 ವಾರದಿಂದ ನಾಪತ್ತೆಯಾಗಿದ್ದರು. ನಂತರ ಪೊಲೀಸರು ಮೃತನ ಪತ್ನಿ ನೀತು ಅವರನ್ನು ವಿಚಾರಣೆಗೆ ಒಳಪಡಿಸಿದ್ದರು. ಆಕೆಯ ಪತಿ 7 ದಿನಗಳಿಂದ ನಾಪತ್ತೆಯಾಗಿದ್ದರೂ ಆಕೆ ಇನ್ನೂ ಯಾವುದೇ ದೂರು ದಾಖಲಿಸದಿದ್ದುದು ಪೊಲೀಸರಿಗೆ ಅನುಮಾನ ಉಂಟುಮಾಡಿತ್ತು. ಆದರೆ ತನಿಖಾಧಿಕಾರಿಗಳಿಗೆ ಆಕೆಯ ವಿರುದ್ಧ ಯಾವುದೇ ಸುಳಿವು ಸಿಗಲಿಲ್ಲ.

ನಂತರ ಪೊಲೀಸರು ಗೌರ್ ನಗರದ ನಿವಾಸಿ ಹರ್ಪಾಲ್ ಎಂಬಾತನನ್ನು ಹಿಂಬಾಲಿಸಲು ಪ್ರಾರಂಭಿಸಿದರು. ಆತ ಆಗಾಗ ನೀತು ಮತ್ತು ಸತೀಶ್​ನನ್ನು ಭೇಟಿಯಾಗುತ್ತಿದ್ದ. ಈ ಕುರಿತು ವಿಚಾರಣೆಯ ನಂತರ, ಹರ್ಪಾಲ್ ನೀತು ಮತ್ತು ಗೌರವ್ ಸಹಾಯದಿಂದ ಸತೀಶ್​ನನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ನೀತು ಮತ್ತು ಹರ್ಪಾಲ್ ಪರಸ್ಪರ ಪ್ರೀತಿಸುತ್ತಿದ್ದರು, ಅವರಿಬ್ಬರೂ ಮದುವೆಯಾಗಲು ಬಯಸಿದ್ದರು.

ಇದನ್ನೂ ಓದಿ: Murder: ಹೆಂಡತಿಯನ್ನು ಕೊಂದು ಮನೆಯಲ್ಲೇ ಹೂತಿಟ್ಟ ಗಂಡ; 18 ತಿಂಗಳ ಬಳಿಕ ಕೊಲೆ ರಹಸ್ಯ ಬಯಲು

ವೃತ್ತಿಯಲ್ಲಿ ಮೇಸ್ತ್ರಿಯಾಗಿದ್ದ ಹರ್ಪಾಲ್, ನೀತು ಸಹಾಯದಿಂದ ಸತೀಶ್‌ನನ್ನು ಕೊಂದು ಶವವನ್ನು ಪಕ್ಕದ ಮನೆಯ ಜಮೀನಿನಲ್ಲಿ ಹೂಳಲು ಯೋಜಿಸಿದ್ದ. ಜನವರಿ 2ರಂದು ನೀತು ತನ್ನ ಗಂಡ ಸತೀಶ್‌ಗೆ ವಿಷ ಕುಡಿಸಿ ನಂತರ ಕತ್ತು ಹಿಸುಕಿ ಕೊಲೆ ಮಾಡಿದ್ದಳು. ನಂತರ ತನ್ನ ಪ್ರೇಮಿ ಹರ್ಪಾಲ್ ಸಹಾಯದಿಂದ ಗಂಡನ ಶವವನ್ನು ಆತ ಕೆಲಸ ಮಾಡುತ್ತಿದ್ದ ಜಾಗದಲ್ಲಿ ಹೂತುಹಾಕಿ ನಂತರ ಅಪರಾಧವನ್ನು ಮುಚ್ಚಿಹಾಕಲು ಅದರ ಮೇಲೆ ಸೆಪ್ಟಿಕ್ ಟ್ಯಾಂಕ್ ನಿರ್ಮಿಸಿದ್ದರು. ಕೊನೆಗೂ ಅವರಿಬ್ಬರೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ