Dakshina Kannada: ಬಿಜೆಪಿ ಪ್ರಚಾರ ವಾಹನ ಹಾಗೂ ಬೈಕ್ ನಡುವೆ ಅಪಘಾತ: ಬೈಕ್ ಸವಾರ ಸಾವು
ಬಿಜೆಪಿ ಪ್ರಚಾರ ವಾಹನ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ನರಹರಿ ಪರ್ವತದ ಬಳಿ ನಡೆದಿದೆ.
ದಕ್ಷಿಣ ಕನ್ನಡ: ಬಿಜೆಪಿ ಪ್ರಚಾರ ವಾಹನ ಹಾಗೂ ಬೈಕ್ ನಡುವೆ ಅಪಘಾತ (accident) ಸಂಭವಿಸಿದ್ದು, ಬೈಕ್ ಸವಾರ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ನರಹರಿ ಪರ್ವತದ ಬಳಿ ನಡೆದಿದೆ. ವಿಜಿತ್(35) ಮೃತ ಬೈಕ್ ಸವಾರ. ಅಪಘಾತದ ವೇಳೆ ಗಾಯಗೊಂಡಿದ್ದ ವಿಜಿತ್ನನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಬಂಟ್ವಾಳ ಬಿಜೆಪಿ ಶಾಸಕ ರಾಜೇಶ್ ಚುನಾವಣಾ ಪ್ರಚಾರದ ವಾಹನ ಕಲ್ಲಡ್ಕ ಕಡೆಗೆ ತೆರಳುತ್ತಿತ್ತು. ಕಲ್ಲಡ್ಕದಿಂದ ಮೆಲ್ಕಾರ್ ಕಡೆಗೆ ಬೈಕ್ ಸವಾರ ವಿಜಿತ್ ತೆರಳುತ್ತಿದ್ದು, ಈ ವೇಳೆ ಅಪಘಾತ ಸಂಭವಿಸಿದೆ. ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಬ್ಬರು ದ್ವಿಚಕ್ರವಾಹನ ಕಳ್ಳರ ಬಂಧನ
ಬೆಂಗಳೂರು: ದ್ವಿಚಕ್ರವಾಹನ ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಬಾಣಸವಾಡಿ ಪೊಲೀಸರು ಕಾರ್ಯಾಚರಣೆ ಮಾಡಿ ಬಂಧಿಸಿದ್ದಾರೆ. ಅನ್ಬು (29), ಹಾಗೂ ರಾಜು (22) ಬಂಧಿತ ಆರೋಪಿಗಳು. ಸದ್ಯ ಬಂಧಿತರಿಂದ 2.5 ಲಕ್ಷ ಮೌಲ್ಯದ ನಾಲ್ಕು ದ್ವಿಚಕ್ರ ವಾಹನ ವಶಕ್ಕೆ ಪಡೆದಿದ್ದಾರೆ. ಬಾಣಸವಾಡಿ ಕೆಎಸ್ಎಸ್ಸಿ ಲೇಔಟ್ನಲ್ಲಿ ಹಾಡುಹಗಲ್ಲೆ ಆರೋಪಿಗಳು ಕೃತ್ಯವೆಸಗಿದ್ದರು. ಈ ಹಿಂದೆ ಪುಲಿಕೇಶಿ ನಗರ, ಹೆಣ್ಣೂರು, ಕೆಜಿ ಹಳ್ಳಿ ಠಾಣಾ ವ್ಯಾಪ್ತಿಯಲ್ಲೂ ಕೃತ್ಯವೆಸಗಿದ್ದರು. ಜೈಲಿಗೆ ಹೋಗಿ ಬಂದ್ರು ಆರೋಪಿಗಳು ಬುದ್ದಿ ಕಲಿಯದೆ ಮತ್ತೆ ತಮ್ಮ ಕೈಚಳಕ ತೋರಿಸಿದ್ದರು. ಪ್ರಕರಣ ದಾಖಲಿಸಿ ಆರೋಪಿಗಳನ್ನ ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.
ನಟೋರಿಯಸ್ ಸುಲುಗೆಕೋರರು ಅರೆಸ್ಟ್
ಬೆಂಗಳೂರು: ತಲೆನೋವಾಗಿದ್ದ ನಟೋರಿಯಸ್ ಸುಲುಗೆಕೋರರು ಅರೆಸ್ಟ್ ಆಗಿದ್ದಾರೆ. 77 ಪ್ರಕರಣದಲ್ಲಿ ಬೇಕಾಗಿದ್ದ ಅಬ್ರಹಾರ್ ಹಾಗೂ ಅಫ್ತಾಬ್ ಎಂಬ ಆರೋಪಿಗಳನ್ನು ಬೆಂಗಳೂರಿನ ರಾಜಗೋಪಾಲನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅಬ್ರಹಾರ್ ಟೀಂ ಹಾಡಹಗಲೇ ಲಾಂಗ್ ಹಿಡಿದು ಸುಲಿಗೆ ಮಾಡ್ತಿದ್ದರು. ಬಿಟಿಎಂ ಲೇಔಟ್ ನಲ್ಲಿ ರಸ್ತೆಯಲ್ಲೇ ಮಚ್ಚೆತ್ತಿ ಸುಲಿಗೆ ಮಾಡಿದ್ದರು. ರಾಜಗೋಪಲನಗರ,ಕಾಮಾಕ್ಷಿಪಾಳ್ಯ ಭಾಗದಲ್ಲೂ ರೋಡ್ ರಾಬರಿ ಮಾಡಿದ್ದರು. ಶಿವಾಜಿನಗರದ ಉದ್ಯಮಿಯೊಬ್ಬರನ್ನೂ ಸುಲಿಗೆ ಮಾಡಿದ್ದರು. ಪಲ್ಸರ್ ಬೈಕ್ ನಲ್ಲಿ ಬಂದು ಕೃತ್ಯವೆಸಗ್ತಿದ್ದ ಅಬ್ರಹಾರ್ ಟೀಂ ಅನ್ನು ಪೊಲೀಸರು ಬಂಧಿಸಿದ್ದು ರಾಜಗೋಪಾಲನಗರ ಪೊಲೀಸರಿಂದ ತನಿಖೆ ಮುಂದುವರೆದಿದೆ.
ಇದನ್ನೂ ಓದಿ: Santro Ravi: ಸಾಲ ತೀರಿಸಲಾಗದೆ ಸುಳ್ಳು ದೂರು ದಾಖಲಿಸಿದ್ದಾರೆ, ಸ್ಯಾಂಟ್ರೋ ರವಿ ತಪ್ಪು ಮಾಡಿಲ್ಲ: ವಕೀಲ ಹರೀಶ್
ಕೆಎಸ್ಆರ್ಟಿಸಿ ಬ್ಯಾಟರಿ ಕದ್ದ ಖದೀಮರು
ಮೈಸೂರು: ನಗರದಲ್ಲಿ ರಾತ್ರಿ ತಂಗಿದ್ದ ಕೆಎಸ್ಆರ್ಟಿಸಿ ಬಸ್ ನ ಬ್ಯಾಟರಿ ಕದ್ದು ಖದೀಮರು ಪಾರಾರಿಯಾಗಿದ್ದಾರೆ. ಚಾಮರಾಜನಗರ ಘಟಕದ ವಾಹನ ಸಂಖ್ಯೆ KA -57 F-1799 ವಾಹನದಲ್ಲಿ ಕಳವಾಗಿದೆ. ಬಸ್ನ ಕಂಡಕ್ಟರ್ ಹಾಗೂ ಡ್ರೈವರ್ ರೂಟ್ ಡ್ಯೂಟಿ ಮುಗಿಸಿ ಮೈಸೂರಿನಲ್ಲಿ ಬಸ್ ನಿಲ್ಲಿಸಿ ಹೋಗಿದ್ದರು. ಈ ವೇಳೆ ಟೂ ವಿಲ್ಲರ್ ನಲ್ಲಿ ಬಂದು ಬಸ್ ಬ್ಯಾಟರಿ ಕದ್ದು ಕಳ್ಳರು ಪರಾರಿಯಾಗಿದ್ದಾರೆ. ಬ್ಯಾಟರಿ ಕಳುವಾಗಿರೋ ದೃಶ್ಯಗಳು ಸುದರ್ಶನ್ ಸಿಲ್ಕ್ ಅಂಡ್ ಸ್ಯಾರೀಸ್ ಕಟ್ಟಡದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:19 pm, Mon, 16 January 23