ಲಂಡನ್ ಮೆಟ್ರೋಪಾಲಿಟನ್ ವ್ಯವಸ್ಥೆಯಲ್ಲಿ ಹಿರಿಯ ಅಧಿಕಾರಿಯಾಗಿದ್ದ ಡೇವಿಡ್ ಕ್ಯಾರಿಕ್ ವಿರುದ್ಧ 45ಕ್ಕೂ ಹೆಚ್ಚು ಲೈಂಗಿಕ ಅತ್ಯಾಚಾರದ ಪ್ರಕರಣಗಳು!
2004ರಲ್ಲಿ ನಡೆಸಿದ ಒಂದು ರೇಪ್, 2003 ರಿಂದ 2009 ರ ನಡುವೆ ನಡೆದ ಎರಡು ರೇಪ್ ಆರೋಪಗಳು ಸಹ ಕ್ಯಾರಿಕ್ ಮೇಲಿವೆ.
ಲಂಡನ್ ಮಹಾನಗರದಲ್ಲಿ ಅವನೊಬ್ಬ ಗೌರವಾನ್ವಿತ ಉನ್ನತ ದರ್ಜೆಯ ಪೊಲೀಸ ಅಧಿಕಾರಿಯಾಗಿದ್ದ. ಅದರೆ, ಒಂದು ಡಜನ್ ಕ್ಕಿಂತ ಹೆಚ್ಚು ಮಹಿಳೆಯರ ಮೇಲೆ ಸಮಾರು 45ಕ್ಕಿಂತ ಬಾರಿ ಲೈಂಗಿಕ ಅಪರಾಧಗಳನ್ನು ನಡೆಸಿ ಜೈಲುಪಾಲಾಗಿದ್ದಾನೆ. 47-ವರ್ಷ-ವಯಸ್ಸಿನ ಪಿಸಿ ಡೇವಿಡ್ ಕ್ಯಾರಿಕ್ (PC David Carrick) ನಡೆಸಿದ ಅಪರಾಧಗಳು ಬೆಳಕಿಗೆ ಬಂದಿವೆ ಮತ್ತು ನ್ಯಾಯಾಲಯದಲ್ಲಿ ಸಾಬೀತಾಗುತ್ತಿವೆ. 2021 ಅಕ್ಟೋಬರ್ ನಲ್ಲಿ ಅವನು ಟಿಂಡರ್ ನಲ್ಲಿ ಪರಿಚಯವಾದ ಮಹಿಳೆಯೊಬ್ಬಳನ್ನು ಹರ್ಟ್ ಫೋರ್ಡ್ ಶೈರ್ (Hertfordshire) ನಲ್ಲಿರುವ ಸೆಂಟ್ ಅಲ್ಬಾನ್ಸ್ (Saint Albans) ಹೆಸರಿನ ಪಬ್ ಗೆ ಕರೆಸಿ ನಂತರ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ. ಆ ಮಹಿಳೆ ದೂರು ಸಲ್ಲಿಸಿದ್ದ ಕೂಡಲೇ ಅವನನ್ನು ಲಂಡನ್ ಪೊಲೀಸ್ ವ್ಯವಸ್ಥೆಯಿಂದ ವಜಾ ಮಾಡಲಾಗಿತ್ತು. ಸೆಪ್ಟೆಂಬರ್ ತಿಂಗಳಲ್ಲೇ ಅವನು ಹೊಟೆಲೊಂದರಲ್ಲಿ ರೂಮ್ ಬುಕ್ ಮಾಡಿಕೊಂಡಿದ್ದ ಮತ್ತು ತನ್ನನ್ನು ಅಲ್ಲಿಗೆ ಕರೆದೊಯ್ದ್ದು ಮೃಗೀಯ ರೀತಿಯಲ್ಲಿ ಅತ್ಯಾಚಾರ ನಡೆಸಿದ್ದ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದರು.
ಒಂದೇ, ಎರಡೇ? ಹಲವಾರು ಅಪರಾಧಗಳು
ನಂತರ ನವೆಂಬರ್ ನಲ್ಲಿ ಮೂವರು ಮಹಿಳೆಯರು ಕ್ಯಾರಿಕ್ ತಮ್ಮ ಮೇಲೂ ಅತ್ಯಾವಾರ ನಡೆಸಿದ್ದಾನೆ ಅಂತ ದೂರು ದಾಖಲಿಸಿದ ಬಳಿಕ ಅವನ ವಿರುದ್ಧ 13 ಹೊಸ ಪ್ರಕರಣಗಳು ದಾಖಲಾಗಿದ್ದವು. ಅವನ ವಿಚಾರಣೆ ನಡೆಯುವ ಸಂದರ್ಭದಲ್ಲಿ 2009 ಮತ್ತು 2018 ನಡುವೆ ಅವನು ಇನ್ನೂ ನಾಲ್ವರು ಮಹಿಳೆಯರ ಮೇಲೆ ಅತ್ಯಾಚಾರ, ಬಲವಂತವಾಗಿ ಮಹಿಳೆಯೊಬ್ಬಳನ್ನು ಹಿಡಿದಿಟ್ಟುಕೊಂಡಿದ್ದ ಮತ್ತು ಅತ್ಯಾಚಾರಕ್ಕೆ ಪ್ರಯತ್ನಿಸಿದ್ದು ಬೆಳಕಿಗೆ ಬಂತು. ಒಟ್ಟಿನಲ್ಲಿ 2009 ರಿಂದ 2020 ರ ನಡುವೆ ಅವನು 8 ಮಹಿಳೆಯರ ಮೇಲೆ 13 ಬಾರಿ ದೌರ್ಜನ್ಯ ನಡೆಸಿದ ಪ್ರಕರಣಗಳು ದಾಖಲಾಗಿವೆ.
ಇದನ್ನೂ ಓದಿ: Bone broth for skin: ಚರ್ಮದ ಆರೋಗ್ಯಕ್ಕೆ ಉತ್ತಮ ಮೂಳೆಸಾರು, ಇಲ್ಲಿದೆ ಸಾರು ಮಾಡುವ ವಿಧಾನ
ಇವುಗಳ ಹೊರತಾಗಿ, ವಿನಾಕಾರಣ ಹೆದರಿಸಿದ, ನಿರಪರಾಧಿಗಳನ್ನು ತಂದು ಜೈಲ್ಲಲ್ಲಿಟ್ಟಿದ್ದ ಮತ್ತು ಒಂದು ರೇಪ್ ಯತ್ನ, ಒಂದು ರೇಪ್, ಮತ್ತು ಮಹಿಳೆಯ ಒಪ್ಪಿಗೆಯಿಲ್ಲದೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ ಪ್ರಕರಣಗಳು ದಾಖಲಾಗಿವೆ. ಅವನ ವಿರುದ್ಧ ದಾಖಲಾಗಿರುವ ಹೆಚುವರಿ ಪ್ರಕರಣಗಳ ವಿಚಾರಣೆಗಾಗಿ ಕ್ಯಾರಿಕ್ 21 ರದು ವೆಸ್ಟ್ ಮಿನ್ಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ವಿಡಿಯೋ ಲಿಂಕ್ ಮೂಲಕ ಹಾಜರಾಗಲಿದ್ದಾನೆ.
‘ಪ್ರಸ್ತುತವಾಗಿ ಬೆಡ್ ಫೋರ್ಡ್ ಶೈರ್, ಕೇಂಬ್ರಿಜ್ ಶೈರ್ ಮತ್ತು ಹರ್ಟ್ ಫೋರ್ಡ್ ಶೈರ್ ಗಳ ಮೇಜರ್ ಕ್ರೈಮ್ ಯನಿಟ್ ಗಳು ನಡೆಸುತ್ತಿರುವ ತನಿಖೆಯ ಪ್ರಕಾರ ಕ್ಯಾರಿಕ್ ವಿರುದ್ಧ ಮಾರ್ಚ್ 12 ರಂದು ನಡೆಸಿದ ಒಂದು ರೇಪ್ ಸೇರಿದಂತೆ 12 ಅಪರಾಧಗಳು ದಾಖಲಾಗಿವೆ,’ ಎಂದು ಹರ್ಟ್ಸ್ ಪೊಲೀಸ್ ಬಾತ್ಮೀದಾರರೊಬ್ಬರು ಹೇಳಿದ್ದಾರೆ.
‘ಅವುಗಳಲ್ಲಿ 7 ಅಪರಾಧಗಳು ಈಗಾಗಲೇ ತನಿಖೆಯ ಭಾಗವಾಗಿರುವ ಒಬ್ಬ ಸಂತ್ರಸ್ತೆಯ ಮೇಲೆ ನಡೆದಿದ್ದರೆ ಉಳಿದ 5 ಅಪರಾಧಗಳು ಮೂವರು ಹೊಸ ಸಂತ್ರಸ್ತೆಯರ ಮೇಲೆ ನಡೆದಿವೆ. 12 ಸಂತ್ರಸ್ತೆಯರಿಗೆ ಸಂಬಂಧಿಸಿದಂತೆ ಒಟ್ಟು 47 ಅಪರಾಧಗಳು ಕ್ಯಾರಿಕ್ ವಿರುದ್ಧ ದಾಖಲಾಗಿವೆ,’ ಎಂದು ಅವರು ಹೇಳಿದ್ದಾರೆ.
2004ರಲ್ಲಿ ನಡೆಸಿದ ಒಂದು ರೇಪ್, 2003 ರಿಂದ 2009 ರ ನಡುವೆ ನಡೆದ ಎರಡು ರೇಪ್ ಆರೋಪಗಳು ಸಹ ಕ್ಯಾರಿಕ್ ಮೇಲಿವೆ.
2021 ರಲ್ಲೇ ಅರೆಸ್ಟಾಗಿದ್ದಾನೆ
‘ಸಂಸದೀಯ ಮತ್ತು ರಾಜತಾಂತ್ರಿಕ ಭದ್ರತೆ ಕಮಾಂಡ್ ನಲ್ಲಿ ಒಬ್ಬ ಜವಾಬ್ದಾರಿಯುತ ಅಧಿಕಾರಿಯಾಗಿದ್ದ ಕ್ಯಾರಿಕ್ ನನ್ನು ಸ್ಟಿವನೇಜ್ ನಲ್ಲಿರುವ ಅವನ ಮನೆಯಿಂದ ಹರ್ಟ್ ಫೋರ್ಡ್ ಶೈರ್ ಪೊಲೀಸರು ಅಕ್ಟೋಬರ್ 2, 2021 ರಂದು ಅರೆಸ್ಟ್ ಮಾಡಲಾಗಿತ್ತು. ‘ಅವರು ಪೊಲೀಸ್ ಕಸ್ಟಡಿಯಲ್ಲಿದ್ದು ಮೆಟ್ರೊಪಾಲಿಟನ್ ಪೊಲೀಸ್ ಸೇವೆಯಿಂದ ಅವರನ್ನು ಅಮಾನತುಗೊಳಿಸಲಾಗಿದೆ,’ ಎಂದು ಪೊಲೀಸ್ ಬಾತ್ಮೀದಾರ ಹೇಳಿದ್ದಾರೆ.
ಕ್ಯಾರಿಕ್ ವೆಸ್ಟ್ ಮಿಂಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಮಾರ್ಚ್ 21 ರಂದು ವಿಡಿಯೋ ಲಿಂಕ್ ಮೂಲಕ ಹಾಜರಾಗಲಿದ್ದಾರೆ. ಸಂಸದೀಯ ಮತ್ತು ರಾಜತಾಂತ್ರಿಕ ಭದ್ರತೆ ಕಮಾಂಡ್ ವೆಸ್ಟ್ ಮಿಂಸ್ಟರ್ ನಲ್ಲಿ ನೆಲೆಗೊಂಡಿರುವ ಒಂದು ಸಶಸ್ತ್ರ ಪಡೆಯಾಗಿದ್ದು ಡೌನಿಂಗ್ ಸ್ಟ್ರೀಟ್ ನಂಥ ಸೂಕ್ಷ್ಮ ಪ್ರದೇಶಗಳ ಭದ್ರತೆ ಅದರೆ ಜವಾಬ್ದಾರಿ ಅದರ ಮೇಲಿರುತ್ತದೆ.
ಇದನ್ನೂ ಓದಿ: ಯಾರ ಒತ್ತಡಕ್ಕೂ ಭಾರತ ಮಣಿಯುವುದಿಲ್ಲ: ಚೀನಾಗೆ ತಿರುಗೇಟು ಕೊಟ್ಟ ವಿದೇಶಾಂಗ ಸಚಿವ ಜೈಶಂಕರ್
‘ಕ್ಯಾರಿಕ್ ವಿರುದ್ಧ ದಾಖಲಾಗಿರುವ ಆರೋಪಗಳ ಹಿನ್ನೆಲೆಯಿಂದ ಹೇಳುವುದಾದರೆ ಅವು ಬಹಳ ಗಂಭೀರ ಸ್ವರೂಪದ ಪ್ರಕರಣಗಳಾಗಿವೆ. ತನಿಖೆ ಜಾರಿಯಲ್ಲಿರುವಂತೆಯೇ, ಪೊಲೀಸ್ ನಡತೆಯ ಸ್ವತಂತ್ರ ಕಚೇರಿಗೆ ಕ್ಯಾರಿಕ್ ಭಾಗಿಯಾಗಿರುವ ಪ್ರಕರಣಗಳ ಬಗ್ಗೆ ಮಾಹಿತಿ ರವಾನಿಸಲಾಗಿದೆ,’ ಎಂದು ಮೆಟ್ ಪೊಲೀಸ್ ಬಾತ್ಮೀದಾರ ಹೇಳಿದ್ದಾರೆ.
‘ಮೆಟ್ ಪೊಲೀಸ್ ವೃತ್ತಿಪರ ಪರಿಮಾಣಗಳ ನಿರ್ದೇಶಾನಲಯ ಎಲ್ಲ ಬೆಳವಣಿಗೆಗಳನ್ನು ಹತ್ತಿರದಿಂದ ಗಮನಿಸುತ್ತಿದೆ ಮತ್ತು ಹರ್ಟ್ ಫೋರ್ ಶೈರ್ ಅಧಿಕಾರಿಗಳಿಗೆ ಅಗತ್ಯವಿರುವ ಎಲ್ಲ ಸಹಕಾರವನ್ನು ಒದಗಿಸುತ್ತದೆ, ಎಂದು ಬಾತ್ಮೀದಾರ ಹೇಳಿದ್ದಾರೆ.
ಮತ್ತಷ್ಟು ಕ್ರೈಮ್ ಕತೆಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ