Viral News: ದುಬಾರಿ ಗಿಫ್ಟ್​ ಕೊಡಲಿಲ್ಲವೆಂದು ಹೆಂಡತಿ ಮಾನಸಿಕ ಹಿಂಸೆ ನೀಡುತ್ತಾಳೆ; ಪೊಲೀಸರಿಗೆ ಗಂಡನಿಂದ ದೂರು

ಜಿತೇಂದ್ರ ಸಿಂಗ್ ಅವರು ತಮ್ಮ ಪತ್ನಿ ಸೋನಮ್ ಬೇಡಿಕೆಗಳನ್ನು ಎಲ್ಲಾ ಸಮಯದಲ್ಲೂ ಪೂರೈಸಲು ಪ್ರಯತ್ನಿಸಿದ್ದರು. ಆದರೆ ಈಗ ಆಕೆಯ ಬೇಡಿಕೆಗಳು ಹೆಚ್ಚುತ್ತಲೇ ಇವೆ. ಇದರಿಂದ ಜಿತೇಂದ್ರ ಸಿಂಗ್ ಅವರಿಗೆ ಮಾನಸಿಕ ಒತ್ತಡ ಉಂಟಾಗಿದೆ.

Viral News: ದುಬಾರಿ ಗಿಫ್ಟ್​ ಕೊಡಲಿಲ್ಲವೆಂದು ಹೆಂಡತಿ ಮಾನಸಿಕ ಹಿಂಸೆ ನೀಡುತ್ತಾಳೆ; ಪೊಲೀಸರಿಗೆ ಗಂಡನಿಂದ ದೂರು
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Jan 17, 2023 | 1:49 PM

ಲಕ್ನೋ: ನನ್ನ ಹೆಂಡತಿ ಯಾವಾಗಲೂ ನನ್ನಿಂದ ಬೆಲೆಬಾಳುವ ಉಡುಗೊರೆಗಳನ್ನು ಬಯಸುತ್ತಾಳೆ. ಅವಳ ಆಸೆಗಳನ್ನು ಈಡೇರಿಸಿ ನನಗೆ ಸಾಕಾಗಿದೆ. ಆಕೆಯ ಬೇಡಿಕೆ ಈಡೇರದಿದ್ದರೆ ನನಗೆ ಮಾನಸಿಕ ಹಿಂಸೆ ನೀಡುತ್ತಾಳೆ ಎಂದು ಗಂಡನೊಬ್ಬ ತನ್ನ ಹೆಂಡತಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವ ವಿಚಿತ್ರವಾದ ಘಟನೆ ಉತ್ತರ ಪ್ರದೇಶದ (Uttar Pradesh) ಲಕ್ನೋದಲ್ಲಿ ನಡೆದಿದೆ.

ಆಶಿಯಾನಾದ ನಿವಾಸಿ ಜಿತೇಂದ್ರ ಸಿಂಗ್ ಅವರು ತಮ್ಮ ಪತ್ನಿ ಸೋನಮ್ ಬೇಡಿಕೆಗಳನ್ನು ಎಲ್ಲಾ ಸಮಯದಲ್ಲೂ ಪೂರೈಸಲು ಪ್ರಯತ್ನಿಸಿದ್ದರು. ಆದರೆ ಈಗ ಆಕೆಯ ಬೇಡಿಕೆಗಳು ಹೆಚ್ಚುತ್ತಲೇ ಇವೆ. ಇದರಿಂದ ಜಿತೇಂದ್ರ ಸಿಂಗ್ ಅವರಿಗೆ ಮಾನಸಿಕ ಒತ್ತಡ ಉಂಟಾಗಿದೆ. ಹೀಗಾಗಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ತಾನು ಮತ್ತು ಸೋನಮ್ ಫೇಸ್‌ಬುಕ್‌ನಲ್ಲಿ ಪರಿಚಯವಾಗಿ 2021ರಲ್ಲಿ ಮದುವೆಯಾಗಿದ್ದೇವೆ. ಅಲ್ಲಿಂದಲೂ ನನಗೆ ಈ ಮಾನಸಿಕ ಹಿಂಸೆ ಶುರುವಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Viral News: ತನ್ನ ಗುರುತು ಗೊತ್ತಾಗಬಾರದೆಂದು ಮುಖಕ್ಕೆ ಮಹಿಳೆಯ ಅಂಡರ್​ವೇರ್ ಹಾಕಿಕೊಂಡು ಬಂದ ಕಳ್ಳ!

ಮದುವೆಯಾದ ನಂತರ ಅವರಿಬ್ಬರೂ ಆಶಿಯಾನಾದ ರಜನಿಕಾಂಡ್ ಬಳಿಯ ಜಿತೇಂದ್ರನ ಮನೆಗೆ ತೆರಳಿದರು. ಆದರೆ, ಸೋನಮ್ ತನ್ನ ಅತ್ತೆಯೊಂದಿಗೆ ವಾಸಿಸಲು ಸಾಧ್ಯವಿಲ್ಲ ಎಂದು ಹಠ ಹಿಡಿದಳು. ಆದ್ದರಿಂದ ಜಿತೇಂದ್ರ ತನ್ನ ಹೆಂಡತಿಯ ಜೊತೆ ಬೇರೆ ಮಾಡಲು ನಿರ್ಧರಿಸಿದರು. ಅದಾದ ಸ್ವಲ್ಪ ಸಮಯದ ನಂತರ, ಸೋನಮ್ ತನಗೆ ಬೆಲೆಬಾಳುವ ಉಡುಗೊರೆಗಳು ಬೇಕೆಂದು ಕೇಳಲು ಪ್ರಾರಂಭಿಸಿದರು.

ಇದನ್ನೂ ಓದಿ: Viral News: ಅಂಗಡಿಯಿಂದ ದಿಢೀರನೆ ಸಿಸಿಟಿವಿ ಕ್ಯಾಮೆರಾಗಳು ನಾಪತ್ತೆ; ಕೊನೆಗೂ ಬಯಲಾಯ್ತು ಕಪಿ ಚೇಷ್ಟೆ!

ಆರಂಭದಲ್ಲಿ ಜಿತೇಂದ್ರ ತನ್ನ ಹೆಂಡತಿಯ ಕೋರಿಕೆಯನ್ನು ಈಡೇರಿಸಿದರು. ಆದರೆ ಸಮಯ ಕಳೆದಂತೆ ಅವಳ ಬೇಡಿಕೆಗಳು ಹೆಚ್ಚಾಗತೊಡಗಿದವು. “ನನ್ನ ಪತ್ನಿ ಸೋನಮ್ ಆಗಾಗ ಹಣ ಕೇಳುತ್ತಾಳೆ, ಐಷಾರಾಮಿ ಕಾರು ಖರೀದಿಸಲು ಒತ್ತಾಯಿಸುತ್ತಾಳೆ. ಆಕೆ ನನ್ನ ತಾಯಿಯ ಮನೆಯನ್ನು ನಮ್ಮ ಹೆಸರಿಗೆ ಬರೆಸಿಕೊಳ್ಳಬೇಕು ಎಂದು ಹಠ ಹಿಡಿದಾಗ ನಾನು ಒಪ್ಪಲಿಲ್ಲ. ಅದಾದ ಮೇಲೆ ಆಕೆ ನನ್ನನ್ನು ಮಾನಸಿಕವಾಗಿ ಹಿಂಸಿಸಲು ಪ್ರಾರಂಭಿಸಿದಳು. ನನ್ನಿಂದ ವಿಚ್ಛೇದನ ಪಡೆಯುವುದಾಗಿ ಬೆದರಿಕೆ ಹಾಕಿದಳು ಎಂದು ಜಿತೇಂದ್ರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ