AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ತನ್ನ ಗುರುತು ಗೊತ್ತಾಗಬಾರದೆಂದು ಮುಖಕ್ಕೆ ಮಹಿಳೆಯ ಅಂಡರ್​ವೇರ್ ಹಾಕಿಕೊಂಡು ಬಂದ ಕಳ್ಳ!

ಪ್ಯಾಕೇಜ್ ಅನ್ನು ಕದ್ದ ಆರೋಪದ ಮೇಲೆ ಬಂಧಿಸಲಾದ ಕಳ್ಳ ಮಹಿಳೆಯರ ಒಳಉಡುಪನ್ನು ಮಾಸ್ಕ್ ಆಗಿ ಧರಿಸಿ ತನ್ನ ಗುರುತನ್ನು ಮರೆಮಾಚಲು ಪ್ರಯತ್ನಿಸಿದ್ದ.

Viral News: ತನ್ನ ಗುರುತು ಗೊತ್ತಾಗಬಾರದೆಂದು ಮುಖಕ್ಕೆ ಮಹಿಳೆಯ ಅಂಡರ್​ವೇರ್ ಹಾಕಿಕೊಂಡು ಬಂದ ಕಳ್ಳ!
ಮಹಿಳೆಯ ಅಂಡರ್​ವೇರ್ ಅನ್ನು ಮಾಸ್ಕ್ ಆಗಿ ಧರಿಸಿದ ಕಳ್ಳImage Credit source: times now
TV9 Web
| Edited By: |

Updated on: Jan 09, 2023 | 3:58 PM

Share

ಕಳ್ಳತನಕ್ಕೆ ಬಂದಿದ್ದ ಕಳ್ಳನೊಬ್ಬ ತಾನು ಯಾರೆಂದು ಯಾರಿಗೂ ಗೊತ್ತಾಗಬಾರದು, ಸಿಸಿಟಿವಿಯಲ್ಲಿ ತನ್ನ ಮುಖ ಕಾಣಬಾರದು ಎಂದು ಮುಖಕ್ಕೆ ಮಹಿಳೆಯ ಅಂಡರ್​ವೇರ್ (Underwear) ಅನ್ನೇ ಮಾಸ್ಕ್ ರೀತಿ ಹಾಕಿಕೊಂಡು ಬಂದಿದ್ದ! ಕಳ್ಳನ ಈ ವಿಚಿತ್ರ ವೇಷವನ್ನು ಸಿಸಿಟಿವಿಯಲ್ಲಿ (CCTV Footage) ನೋಡಿ ಪೊಲೀಸರೂ ಶಾಕ್ ಆಗಿದ್ದರು. ಕೊನೆಗೂ ಆತನನ್ನು ಹಿಡಿಯಲು ಪೊಲೀಸರು ಯಶಸ್ವಿಯಾಗಿದ್ದಾರೆ. ಅಮೆರಿಕಾದಲ್ಲಿ (United States) ಈ ಘಟನೆ ನಡೆದಿದೆ.

ಪ್ಯಾಕೇಜ್ ಅನ್ನು ಕದ್ದ ಆರೋಪದ ಮೇಲೆ ಬಂಧಿಸಲಾದ ಕಳ್ಳ ಮಹಿಳೆಯರ ಒಳಉಡುಪನ್ನು ಮಾಸ್ಕ್ ಆಗಿ ಧರಿಸಿ ತನ್ನ ಗುರುತನ್ನು ಮರೆಮಾಚಲು ಪ್ರಯತ್ನಿಸಿದ್ದ ಎಂದು ಯುಎಸ್ಎ ಒಕ್ಲಹೋಮಾದಲ್ಲಿ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ರಸ್ತೆ ಬದಿ ಕಸದಲ್ಲಿ ಸಿಕ್ತು 19 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು: ಕಳ್ಳರು ಸಿಕ್ಕಿಬಿದ್ದಿದ್ದೇ ರೋಚಕ

ಶಂಕಿತನ ಚಟುವಟಿಕೆಯ ಬಗ್ಗೆ ಪೊಲೀಸರಿಗೆ ತಿಳಿಸಲಾಯಿತು. ಬಳಿಕ ಪೊಲೀಸರು ಆತನ ಚಲನವಲನದ ಆಧಾರದ ಮೇಲೆ ಆತನನ್ನು ಬಂಧಿಸಿದ್ದಾರೆ. ಫ್ಲಾಕ್ ಸೇಫ್ಟಿ ಸಿಸ್ಟಮ್‌ನ ಸಾಕ್ಷಿಗಳು ಪೋರ್ಚ್ ಕಡಲುಗಳ್ಳರ ವಾಹನವನ್ನು ಗುರುತಿಸಲು ಪೊಲೀಸರಿಗೆ ಸಹಾಯ ಮಾಡಿತು.

ಆತನ ವಿಳಾಸವನ್ನು ಪತ್ತೆ ಮಾಡಿದ ನಂತರ ಅವರು ತುಲ್ಸಾದಲ್ಲಿರುವ ಕಳ್ಳನ ಮನೆಗೆ ಹೋಗಿ ಬಾಗಿಲು ತಟ್ಟಿದರು. ಆತ ತಾನೇ ಕದ್ದಿದ್ದೆಂದು ಒಪ್ಪಿಕೊಳ್ಳಲು ಮೊದಲು ನಿರಾಕರಿಸಿದನು. ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಲು ಕೂಡ ನಿರಾಕರಿಸಿದನು. ಸರ್ಚ್ ವಾರೆಂಟ್ ಇದ್ದರೆ ಮಾತ್ರ ನೀವು ನಮ್ಮನ್ನು ಪ್ರಶ್ನೆ ಮಾಡಬಹುದು ಎಂದರು.

ಇದನ್ನೂ ಓದಿ: Shivamogga: ಸಂಬಂಧಿಯಿಂದಲೇ ಕಳ್ಳತನ; ಬೆಚ್ಚಿಬಿದ್ದ ಕುಟುಂಬಸ್ಥರು

ತುಲ್ಸಾ ಕೌಂಟಿ ಆನ್‌ಲೈನ್ ಬುಕಿಂಗ್ ದಾಖಲೆಗಳ ಪ್ರಕಾರ, ಆರೋಪಿ ಗೌಗ್ಲರ್‌ನನ್ನು ಶುಕ್ರವಾರ ಬಂಧಿಸಲಾಯಿತು. ಶನಿವಾರ 17,000 ಡಾಲರ್ ನೀಡಿ ಆತ ಜಾಮೀನು ಪಡೆದು ಬಿಡುಗಡೆಯಾದನು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಗೂಡಂಗಡಿಗಳು ನೆಲಸಮ
ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಗೂಡಂಗಡಿಗಳು ನೆಲಸಮ
ಚಳಿ ಎಂದು ಕ್ಯಾಬ್ ಚಾಲಕ ಕಾರಿನೊಳಗೆ ಮಾಡಿದ ಈ ತಪ್ಪಿನಿಂದ ಪ್ರಾಣವೇ ಹೋಯ್ತು
ಚಳಿ ಎಂದು ಕ್ಯಾಬ್ ಚಾಲಕ ಕಾರಿನೊಳಗೆ ಮಾಡಿದ ಈ ತಪ್ಪಿನಿಂದ ಪ್ರಾಣವೇ ಹೋಯ್ತು
ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ
ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ
ಮಾಳು ಎಲಿಮಿನೇಟ್ ಆಗಲು ರಕ್ಷಿತಾ ಕಾರಣ; ಕೇಳಿ ಬಂತು ಹೊಸ ಆರೋಪ
ಮಾಳು ಎಲಿಮಿನೇಟ್ ಆಗಲು ರಕ್ಷಿತಾ ಕಾರಣ; ಕೇಳಿ ಬಂತು ಹೊಸ ಆರೋಪ
ಬೆಂಗಳೂರಿನ ತಿರುಮಲ ತಿರುಪತಿ ದೇವಾಲಯಕ್ಕೆ ಹರಿದುಬಂತು ಭಕ್ತರ ದಂಡು!
ಬೆಂಗಳೂರಿನ ತಿರುಮಲ ತಿರುಪತಿ ದೇವಾಲಯಕ್ಕೆ ಹರಿದುಬಂತು ಭಕ್ತರ ದಂಡು!
ಹಳ್ಳಿಯಲ್ಲಿ ವ್ಯಕ್ತಿಯ ಮೇಲೆ ದಾಳಿ ಮಾಡಿ, ಮಂಚದ ಮೇಲೆ ಮಲಗಿದ ಹುಲಿ
ಹಳ್ಳಿಯಲ್ಲಿ ವ್ಯಕ್ತಿಯ ಮೇಲೆ ದಾಳಿ ಮಾಡಿ, ಮಂಚದ ಮೇಲೆ ಮಲಗಿದ ಹುಲಿ