AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಸ್ತೆ ಬದಿ ಕಸದಲ್ಲಿ ಸಿಕ್ತು 19 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು: ಕಳ್ಳರು ಸಿಕ್ಕಿಬಿದ್ದಿದ್ದೇ ರೋಚಕ

ರೋಲ್ಡ್ ಗೋಲ್ಡ್​ ಎಂದಿದ್ದಕ್ಕೆ ಕದ್ದ 19 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ರಸ್ತೆ ಬದಿ ಎಸೆದಿದ್ದ ಕಳ್ಳರ ಗ್ಯಾಂಗ್​ನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ,

ರಸ್ತೆ ಬದಿ ಕಸದಲ್ಲಿ ಸಿಕ್ತು 19 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು: ಕಳ್ಳರು ಸಿಕ್ಕಿಬಿದ್ದಿದ್ದೇ ರೋಚಕ
ಕಳ್ಳರ ಗ್ಯಾಂಗ್
TV9 Web
| Edited By: |

Updated on: Jan 07, 2023 | 8:20 PM

Share

ಬೆಂಗಳೂರು: ನಗರದ ರಾಮಮೂರ್ತಿನಗರದ ಕುವೆಂಪು ಲೇಔಟ್​ನ ಮನೆಯೊಂದರ ಆವರಣದ ಸಿಸಿಟಿವಿ ತಿರುಗಿಸಿ ಎಂಟ್ರಿ ಕೊಟ್ಟ ಗ್ಯಾಂಗ್, ಮನೆಯೊಳಗಿನ ಸಿಸಿಟಿವಿ ಕ್ಯಾಮರಾಗೆ ಲಾಕ್​ ಆಗಿದೆ. ಅಸಲಿ ಚಿನ್ನವನ್ನು ರೋಲ್ಡ್ ಗೊಲ್ಡ್ ಎಂದು ತಿಪ್ಪೆಗೆ ಬಿಸಾಡಿದ್ದ ಕಳ್ಳರು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಈ ಕಳ್ಳರ ಗ್ಯಾಂಗ್​ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದೇ ಒಂದು ರೋಚಕ ಕಥೆ.

ಇದನ್ನೂ ಓದಿ: ಯುವತಿಯರ ವಯಸ್ಸು.. ಚೆಂದಕ್ಕೆ ತಕ್ಕಂತೆ ಕೋಡ್​ ವರ್ಡ್: ಗರ್ಲ್ಸ್ ಸಪ್ಲೈಗೆ ಇಟ್ಟಿದ್ದ ‘ಕಾರ್’ ಕೋಡ್‌ವರ್ಡ್​ಗಳು ಹೀಗಿವೆ

ಹೌದು…ರಾಮಮೂರ್ತಿನಗರದ ಪೊಲೀಸರು ರಾಜೇಶ್ ಅಲಿಯಾಸ್ ಕ್ರ್ಯಾಕ್ ಹಾಗೂ ರಾಜ್ ಕಿರಣ್ ಎಂಬುವವರನ್ನು ಕಳ್ಳತನದ ಆರೋಪದ ಮೇಲೆ ಬಂಧಿಸಿದ್ದಾರೆ. ಇವರು ಇತ್ತೀಚೆಗೆ ರಾಮಮೂರ್ತಿನಗರದ ಕುವೆಂಪು ಲೇಔಟ್ ನಲ್ಲಿ ಕಳ್ಳತನ ಮಾಡಿ ಹೊಸೂರಿನಲ್ಲಿ ಸಿಕ್ಕ ವಸ್ತುಗಳನ್ನು ಮಾರಾಟ ಮಾಡಲು ಹೋಗಿದ್ದರು. ಮನೆಗಳಲ್ಲಿ ಕದ್ದಿದ್ದ ಚಿನ್ನಾಭರಣಚವನ್ನು ಹೊಸೂರಿನಲ್ಲಿರುವ ಜ್ಯುವೆಲ್ಲರಿ ಶಾಪ್ ನಲ್ಲಿ ಮಾರಾಟ ಮಾಡಲು ಯತ್ನಿಸಿದ್ದಾರೆ. ಕದ್ದ ಮಾಲು ಎಂಬ ಅನುಮಾನ ಬಂದಿದ್ದರಿಂದ ಜ್ಯುವೆಲ್ಲರಿ ಶಾಪ್ ಮಾಲೀಕ ಆಭರಣಗಳನ್ನು ನೋಡಿ ನಕಲಿ ಚಿನ್ನ ಹೋಗಿ ಎಂದು ಹೇಳಿ ಕಳಿಸಿದ್ದ. ಇದರಿಂದ ಬೇಸರಗೊಂಡಿದ್ದ ಕಳ್ಳರು, ಹೊಸೂರಿನ ರಸ್ತೆ ಬದಿಯ ಕಸದಲ್ಲಿ ಆಭರಣಗಳನ್ನ ಬಿಸಾಡಿ ಹೋಗಿದ್ದರು.

ನಂತರ ಆಭರಣ ಕಳ್ಳತನ ಬಗ್ಗೆ ಮಾಲೀಕ ಮಂಜುನಾಥ್ ಎನ್ನುವರು ರಾಮಮೂರ್ತಿ ನಗರ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿ ತನಿಖೆ ನಡೆಸಿದ ರಾಮಮೂರ್ತಿ ನಗರ ಪೊಲೀಸರು, ಆರೋಪಿಗಳ ಜಾಡು ಬೆನ್ನತ್ತಿ ಹೊಸೂರಿಗೆ ತೆರಳಿದ್ದಾರೆ. ಆ ವೇಳೆ ರಸ್ತೆ ಬದಿಯ ಕಸದಲ್ಲಿ ಆಭರಣ ಎಸೆದ ಬಗ್ಗೆ ಮಾಹಿತಿ ಪಡೆದು ಶೋಧ ನಡೆಸಿದ್ದು, ಹೊಸೂರಿನ ರಸ್ತೆ ಬದಿಯ ಕಸದಲ್ಲಿ 19 ಲಕ್ಷ ಮೌಲ್ಯದ ಚಿನ್ನದ ಆಭರಣಗಳು ಸಿಕ್ಕಿವೆ.

ಬಳಿಕ ಆರೋಪಿಗಳ ಜಾಡನ್ನು ಹಿಡಿದು ತನಿಖೆ ಮಾಡುತ್ತಿದ್ದ ಪೊಲೀಸರಿಗೆ ಕಳ್ಳತನ ನಡೆದ ಮನೆಯ ಕುರಿತೂ ಮಾಹಿತಿ ಸಿಕ್ಕಿದೆ. ಅಲ್ಲಿ ತನಿಖೆ ಮಾಡುವಾಗ ಕಳ್ಳತನದ ವೇಳೆ ಮನೆ ಮುಂದೆ ಹಾಕಿದ್ದ ಸಿಸಿಟಿವಿಗಳನ್ನ ಬೇರೆಡೆ ಆರೋಪಿಗಳು ತಿರುಗಿಸಿರುವುದು ಕಂಡು ಬಂದಿದೆ. ಆದರೆ, ಇವರಿಂದ ಮನೆಯೊಳಗೆ ಇದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದಾರೆ. ಈ ಸಿಸಿಟಿವಿ ಆಧಾರದ ಮೇಲೆ ರಾಮಮೂರ್ತಿನಗರ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನಷ್ಟು ಕ್ರೈಂ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ