ಅಡುಗೆ ಅನಿಲದ ಬೆಲೆ ಏರಿಕೆ; ಇದು ಕೇಂದ್ರ ಸರ್ಕಾರದ ಹೊಸ ವರುಷದ ಉಡುಗೊರೆ ಎಂದು ಟೀಕಿಸಿದ ಕಾಂಗ್ರೆಸ್
ಬಿಜೆಪಿ ನೇತೃತ್ವದ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ಇದು ಜನರಿಗೆ ಸರ್ಕಾರದ "ಹೊಸ ವರ್ಷದ ಉಡುಗೊರೆ" ಎಂದು ಟೀಕಿಸಿದ್ದು"ಇದು ಕೇವಲ ಆರಂಭ" ಎಂದು ಹೇಳಿದೆ.
ದೆಹಲಿ: ವಾಣಿಜ್ಯ ಅಡುಗೆ ಅನಿಲದ ಬೆಲೆ (commercial cooking gas) ಏರಿಕೆಗೆ ಸಂಬಂಧಿಸಿದಂತೆ ಬಿಜೆಪಿ ನೇತೃತ್ವದ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ (Congress), ಇದು ಜನರಿಗೆ ಸರ್ಕಾರದ “ಹೊಸ ವರ್ಷದ ಉಡುಗೊರೆ” ಎಂದು ಟೀಕಿಸಿದ್ದು”ಇದು ಕೇವಲ ಆರಂಭ” ಎಂದು ಹೇಳಿದೆ. ಹೊಸ ವರ್ಷದ ಮೊದಲ ಉಡುಗೊರೆ, ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್ ಈಗ ₹ 25 ದುಬಾರಿಯಾಗಿದೆ. ಇದು ಪ್ರಾರಂಭವಷ್ಟೇ” ಎಂದು ಕಾಂಗ್ರೆಸ್ ಹಿಂದಿಯಲ್ಲಿ ಟ್ವೀಟ್ ಮಾಡಿದೆ. ವಾಣಿಜ್ಯ ಅಡುಗೆ ಸಿಲಿಂಡರ್ ಬಳಸುವ ಗ್ರಾಹಕರು 19 ಕೆಜಿ ಅಡುಗೆ ಅನಿಲ ಸಿಲಿಂಡರ್ಗೆ 25 ರೂ ಹೆಚ್ಚಿಗೆ ಪಾವತಿ ಮಾಡಬೇಕಾಗುತ್ತದೆ. ಇತರ ಗ್ರಾಹಕರು ಖರೀದಿಸುವ ಸಿಲಿಂಡರ್ ದರವು ಬದಲಾಗದೆ ಉಳಿದಿದೆ. ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್‌ಗಳ ದರದಲ್ಲಿ ಹೆಚ್ಚಳವು ರೆಸ್ಟೋರೆಂಟ್‌ಗಳ ಮೇಲೆ ಬರೆ ಎಳೆದಂತಾಗಿದೆ. ಹಾಗಾಗಿ ವ್ಯಾಪಾರಿಗಳು ಅದನ್ನು ಗ್ರಾಹಕರಿಗೆ ವರ್ಗಾ ಯಿಸಬಹುದು. ಇದರ ಪರಿಣಾಮ ಊಟದ ಬೆಲೆಯೂ ಏರಿಕೆ ಆಗಬಹುದು. ಬೆಲೆ ಏರಿಕೆಯ ನಂತರ, ಅಡುಗೆ ಅನಿಲದ ವಾಣಿಜ್ಯ ಸಿಲಿಂಡರ್ ದೆಹಲಿಯಲ್ಲಿ ₹ 1,768, ಮುಂಬೈನಲ್ಲಿ ₹ 1,721, ಕೋಲ್ಕತ್ತಾದಲ್ಲಿ ₹ 1,870 ಮತ್ತು ಚೆನ್ನೈನಲ್ಲಿ ₹ 1,917 ಆಗಿದೆ.
नए साल का पहला गिफ्ट ??
कॉमर्शियल गैस सिलेंडर 25 रुपए महंगा हो गया।
अभी तो ये शुरुआत है…#HappyNewYear
— Congress (@INCIndia) January 1, 2023
ದೇಶದಲ್ಲಿ ಅಡುಗೆ ಅನಿಲದ ಬೆಲೆಗಳು ಕಳೆದೆರಡು ವರ್ಷಗಳಲ್ಲಿ ಏರಿಕೆ ಕಂಡಿದ್ದು, ವಿಪಕ್ಷ ತೀವ್ರ ಟೀಕೆ ಮಾಡಿದೆ.
2014ರಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಗೃಹಬಳಕೆದಾರರ ಬೆಲೆ ₹ 410 ರಿಂದ ₹ 1,000 ಕ್ಕೆ ಏರಿದೆ. ಇಂಧನ ಬೆಲೆಗಳಲ್ಲಿ ತ್ವರಿತ ಏರಿಕೆಯೊಂದಿಗೆ, ಅಗತ್ಯ ವಸ್ತುಗಳ ದರವನ್ನು ಹೆಚ್ಚಳಕ್ಕೂ ಇದು ಕಾರಣವಾಯಿತು. ಇಂಧನ ಬೆಲೆ ಏರಿಕೆಯ ಬಗ್ಗೆ ಪ್ರಶ್ನಿಸಿದಾಗ ಸರ್ಕಾರವು ಹಲವಾರು ಸಂದರ್ಭಗಳಲ್ಲಿ ಕಚ್ಚಾ ತೈಲದ ಅಂತರರಾಷ್ಟ್ರೀಯ ದರಗಳನ್ನು ಎತ್ತಿ ತೋರಿಸಿದೆ. ಈಗ ಅಂತರಾಷ್ಟ್ರೀಯ ದರಗಳು ಇಳಿದಿದ್ದರೂ ದರವನ್ನು ಏಕೆ ಕಡಿತಗೊಳಿಸಿಲ್ಲ ಎಂದು ಪ್ರತಿಪಕ್ಷಗಳು ಪ್ರಶ್ನಿಸುತ್ತಿವೆ.
ಇದನ್ನೂ ಓದಿ: LPG Price Hike: ಹೊಸ ವರ್ಷದ ಮೊದಲ ದಿನವೇ ಸಿಲಿಂಡರ್ ಬೆಲೆ ಏರಿಕೆಯ ಶಾಕ್, ನಿಮ್ಮ ನಗರದ ದರ ಪರಿಶೀಲಿಸಿ
ವಾಣಿಜ್ಯ LPG ಸಿಲಿಂಡರ್ ಬೆಲೆಗಳು OMC ಗಳು ಜನವರಿ 1, 2023 ರಿಂದ ವಾಣಿಜ್ಯ ಸಿಲಿಂಡರ್‌ಗಳ ದರವನ್ನು 25 ರೂ.ವರೆಗೆ ಹೆಚ್ಚಿಸುವ ಮೂಲಕ ದರವನ್ನು ಬದಲಾಯಿಸಿವೆ. ಈ ಕ್ರಮವು ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು ಇತ್ಯಾದಿಗಳಿಗೆ ಹೊಡೆತ ಎಂದೇ ಹೇಳಬಹುದು. ಆದಾಗ್ಯೂ, ಇದು ಸಾಮಾನ್ಯ ಜನರ ಬಜೆಟ್‌ನ ಬೆಲೆಗಳ ಮೇಲೆ ಪರಿಣಾಮ ಬೀರುವುದಿಲ್ಲ. ದೇಶೀಯ LPG ಸಿಲಿಂಡರ್ ಬೆಲೆ ಬದಲಾಗದೆ ಹಾಗೆ ಉಳಿಯುತ್ತದೆ.
ನಾಲ್ಕು ಮಹಾನಗರಗಳಲ್ಲಿ ಗೃಹಬಳಕೆಯ LPG ಸಿಲಿಂಡರ್ ದರಗಳನ್ನು ಪರಿಶೀಲಿಸಿ: ದೆಹಲಿ – 1053 ರೂ ಮುಂಬೈ – 1052.5 ರೂ
ಕೋಲ್ಕತ್ತಾ – 1079 ರೂ
ಚೆನ್ನೈ – 1068.5 ರೂ
ಪಾಟ್ನಾ-1151
ಶಿಮ್ಲಾ – 1097.50
ಇಂದೋರ್ – 1081
ಅಹಮದಾಬಾದ್ – 1060
ಭೋಪಾಲ್ – 1058.50
ಜೈಪುರ – 1056. 50
ಬೆಂಗಳೂರು – 1055.50
OMC ಗಳು ಕಳೆದ ಬಾರಿ ಜುಲೈ 6 2022 ರಲ್ಲಿ ದೇಶೀಯ ಸಿಲಿಂಡರ್‌ಗಳ ಬೆಲೆಯನ್ನು ಹೆಚ್ಚಿಸಿವೆ. ನಾಲ್ಕು ಬಾರಿ ಬೆಲೆ ಏರಿಕೆಯಾಗಿದೆ. OMC ಗಳು ಮೊದಲು ಮಾರ್ಚ್ 2022 ರಲ್ಲಿ 50 ರೂ. ಹೆಚ್ಚಿಸಿದ್ದವು, ನಂತರ ಅದು ಮತ್ತೆ 50ರೂ ಮತ್ತು 3.50 ರೂ. ಅನ್ನು ಮೇ ತಿಂಗಳಲ್ಲಿ ಹೆಚ್ಚಿಸಿತ್ತು. ಅಂತಿಮವಾಗಿ, ಕಳೆದ ವರ್ಷ ಜುಲೈನಲ್ಲಿ ದೇಶೀಯ ಸಿಲಿಂಡರ್ ಬೆಲೆಯನ್ನು 50 ರೂ.ಗಳಿಗೆ ಹೆಚ್ಚಿಸಿತ್ತು.
Published On - 3:31 pm, Sun, 1 January 23