ನರ್ಸ್ ಅಂತ ಬಂದು ಸಿಕ್ಕಿದ್ದನೆಲ್ಲಾ ಕದಿತಾಳೆ, ಡಾಕ್ಟರ್ ಅಂತಾ ಬಂದು ರೋಗಿಯ ಮೈಮೇಲಿದ್ದ ಚಿನ್ನಾಭರಣವೇ ಗಾಯಬ್; ಬೆಂಗಳೂರಿನಲ್ಲಿ ಖತರ್ನಾಕ್ ಕಳ್ಳಿ
Bengaluru Crime: ಆರೋಗ್ಯ ಪರಿಶೀಲನೆ ಮಾಡಬೇಕು ಆಚೆ ಹೋಗಿ ಎಂದು ರಮೇಶ್ರನ್ನು ಆಚೆ ಕಳಿಸಿದ್ದಾಳೆ. ಬಳಿಕ ರಮೇಶ್ ತಾಯಿಯವರ ಕೈನಲ್ಲಿದ್ದ ಉಂಗುರ ಮತ್ತು ಕತ್ತಿನಲ್ಲಿದ್ದ ಸರ ಕದ್ದು ಎಸ್ಕೇಪ್ ಆಗಿದ್ದಾಳೆ.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಖತರ್ನಾಕ್ ಕಳ್ಳಿಯೊಬ್ಬಳ ಆಟ ಬಯಲಾಗಿದೆ. ನಗರದ ಆಸ್ಪತ್ರೆಗಳನ್ನೇ ಟಾರ್ಗೆಟ್ ಮಾಡಿ ನರ್ಸ್ ಎಂದು ಹೇಳಿ ಆಸ್ಪತ್ರೆಗಳಲ್ಲಿ ಸಿಕ್ಕಿದ್ದನೆಲ್ಲಾ ಕದ್ದು ಎಸ್ಕೇಪ್ ಆಗ್ತಿದ್ದ ಕಳ್ಳಿಯ ಕೈ ಚಳಕ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಲ್ಲದೆ ಡಾಕ್ಟರ್ ಎಂದು ಬಂದು ರೋಗಿಯ ಮೈಮೇಲಿದ್ದ ಚಿನ್ನಾಭರಣ ಕದ್ದು ಎಸ್ಕೇಪ್ ಆಗಿದ್ದಾಳೆ. ಸದ್ಯ ಕಳ್ಳಿಯ ಕೈಚಳಕಕ್ಕೆ ಶಾಕ್ ಆದ ಆಸ್ಪತ್ರೆ ಆಡಳಿತ ಮಂಡಳಿ ಕಳ್ಳಿಯ ವಿರುದ್ಧ ದೂರು ದಾಖಲಿಸಿದೆ.
ಜನವರಿ 14ರ ಮಧ್ಯಾಹ್ನ 2.45ರ ಸುಮಾರಿಗೆ ಅಶೋಕ ನಗರದಲ್ಲಿನ ಸೆಂಟ್ ಫಿಲೋಮಿನಾ ಆಸ್ಪತ್ರೆಗೆ ರಮೇಶ್ ಎಂಬುವವರು ಅವರ ತಾಯಿಯನ್ನು ಆಸ್ಪತ್ರೆಗೆ ಸೇರಿಸಿದ್ದರು. ಅನಾರೋಗ್ಯ ಹಿನ್ನಲೆ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿದ್ದರು. ಇದೇ ಶನಿವಾರ ಮಧ್ಯಾಹ್ನ ಆಸ್ಪತ್ರೆಗೆ ನುಗ್ಗಿದ ಈ ಕಳ್ಳಿ ರಮೇಶ್ ಅವರ ತಾಯಿಯ ಆರೋಗ್ಯ ಪರಿಶೀಲನೆ ಮಾಡಬೇಕು ಆಚೆ ಹೋಗಿ ಎಂದು ರಮೇಶ್ರನ್ನು ಆಚೆ ಕಳಿಸಿದ್ದಾಳೆ. ಬಳಿಕ ರಮೇಶ್ ತಾಯಿಯವರ ಕೈನಲ್ಲಿದ್ದ ಉಂಗುರ ಮತ್ತು ಕತ್ತಿನಲ್ಲಿದ್ದ ಸರ ಕದ್ದು ಎಸ್ಕೇಪ್ ಆಗಿದ್ದಾಳೆ. ಅಸಲಿ ಸರದ ಬದಲು ನಕಲಿ ಸರ ಹಾಕಿ ಖತರ್ನಾಕ್ ಕಳ್ಳಿ ನಾಪತ್ತೆಯಾಗಿದ್ದಾಳೆ. ರಮೇಶ್ ರವರ ತಾಯಿಯ ಚಿನ್ನಾಭರಣ ಅಷ್ಟೇ ಅಲ್ಲದೇ ಬೇರೆ ಬೇರೆ ಪೇಶೆಂಟ್ಗಳ ಚಿನ್ನಾಭರಣ ಸಹ ಈ ಕಳ್ಳಿ ಕದ್ದಿದ್ದಾಳೆ. ಅದೇ ಆಸ್ಪತ್ರೆಯಲ್ಲಿ ಇದೇ ರೀತಿಯಾಗಿ ಕೋಮಲಾ ಎಂಬಾ ಪೇಶೆಂಟ್ ಗು ಸಹ ಇದೇ ರೀತಿಯಾಗಿ ವಂಚನೆ ಆಗಿದೆ. ಸದ್ಯ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಳ್ಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ: ಉಡುಪಿ: ಬುದ್ದಿವಂತರ ಜಿಲ್ಲೆಯಲ್ಲಿಯೇ ಶಿಕ್ಷಕರ ಕೊರತೆ; ಬಾಗಿಲು ಮುಚ್ಚಿವೆ ಅನೇಕ ಶಾಲೆಗಳು
ನಟೋರಿಯಸ್ ಸುಲುಗೆಕೋರರು ಅರೆಸ್ಟ್
ಇಡೀ ಬೆಂಗಳೂರಿಗೆ ತಲೆನೋವಾಗಿದ್ದ ನಟೋರಿಯಸ್ ಸುಲುಗೆಕೋರರು ಅರೆಸ್ಟ್ ಆಗಿದ್ದಾರೆ. 77 ಪ್ರಕರಣದಲ್ಲಿ ಬೇಕಾಗಿದ್ದ ಅಬ್ರಹಾರ್ ಹಾಗೂ ಅಫ್ತಾಬ್ ಎಂಬ ಆರೋಪಿಗಳನ್ನು ಬೆಂಗಳೂರಿನ ರಾಜಗೋಪಾಲನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅಬ್ರಹಾರ್ ಟೀಂ ಹಾಡಹಗಲೇ ಲಾಂಗ್ ಹಿಡಿದು ಸುಲಿಗೆ ಮಾಡ್ತಿದ್ದರು. ಬಿಟಿಎಂ ಲೇಔಟ್ ನಲ್ಲಿ ರಸ್ತೆಯಲ್ಲೇ ಮಚ್ಚೆತ್ತಿ ಸುಲಿಗೆ ಮಾಡಿದ್ದರು. ರಾಜಗೋಪಲನಗರ,ಕಾಮಾಕ್ಷಿಪಾಳ್ಯ ಭಾಗದಲ್ಲೂ ರೋಡ್ ರಾಬರಿ ಮಾಡಿದ್ದರು. ಶಿವಾಜಿನಗರದ ಉದ್ಯಮಿಯೊಬ್ಬರನ್ನೂ ಸುಲಿಗೆ ಮಾಡಿದ್ದರು. ಪಲ್ಸರ್ ಬೈಕ್ ನಲ್ಲಿ ಬಂದು ಕೃತ್ಯವೆಸಗ್ತಿದ್ದ ಅಬ್ರಹಾರ್ ಟೀಂ ಅನ್ನು ಪೊಲೀಸರು ಬಂಧಿಸಿದ್ದು ರಾಜಗೋಪಾಲನಗರ ಪೊಲೀಸರಿಂದ ತನಿಖೆ ಮುಂದುವರೆದಿದೆ.
ಕೆಎಸ್ಆರ್ಟಿಸಿ ಬ್ಯಾಟರಿ ಕದ್ದ ಖದೀಮರು
ಮೈಸೂರಿನಲ್ಲಿ ರಾತ್ರಿ ತಂಗಿದ್ದ ಕೆಎಸ್ಆರ್ಟಿಸಿ ಬಸ್ ನ ಬ್ಯಾಟರಿ ಕದ್ದು ಖದೀಮರು ಪಾರಾರಿಯಾಗಿದ್ದಾರೆ. ಚಾಮರಾಜನಗರ ಘಟಕದ ವಾಹನ ಸಂಖ್ಯೆ KA -57 F-1799 ವಾಹನದಲ್ಲಿ ಕಳವಾಗಿದೆ. ಬಸ್ನ ಕಂಡಕ್ಟರ್ ಹಾಗೂ ಡ್ರೈವರ್ ರೂಟ್ ಡ್ಯೂಟಿ ಮುಗಿಸಿ ಮೈಸೂರಿನಲ್ಲಿ ಬಸ್ ನಿಲ್ಲಿಸಿ ಹೋಗಿದ್ದರು. ಈ ವೇಳೆ ಟೂ ವಿಲ್ಲರ್ ನಲ್ಲಿ ಬಂದು ಬಸ್ ಬ್ಯಾಟರಿ ಕದ್ದು ಕಳ್ಳರು ಪರಾರಿಯಾಗಿದ್ದಾರೆ. ಬ್ಯಾಟರಿ ಕಳುವಾಗಿರೋ ದೃಶ್ಯಗಳು ಸುದರ್ಶನ್ ಸಿಲ್ಕ್ ಅಂಡ್ ಸ್ಯಾರೀಸ್ ಕಟ್ಟಡದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ