ಬೆಂಗಳೂರು: ಪ್ರೀತಿಸಿದ ಹುಡುಗಿ ಮೇಲೆ ಕಣ್ಣಾಕಿದ ಟಿಟಿ ವಾಹನದ ಮಾಲೀಕನನ್ನ ಪ್ರಿಯಕರನೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಬನ್ನೇರುಘಟ್ಟದ ಕೋಳಿ ಫಾರಂ ಬಳಿ ನಡೆದಿದೆ.
ರವಿಕುಮಾರ್ ಕೊಲೆಯಾದ ಟಿಟಿ ವಾಹನದ ಮಾಲೀಕನಾಗಿದ್ದು, ಖಾಸಗಿ ಕಂಪನಿ ಜೊತೆ ಟೈ ಅಪ್ ಆಗಿ ಕೆಲಸ ಮಾಡ್ತಿದ್ದ ಎಂಬುದು ತಿಳಿದುಬಂದಿದೆ. ಈ ವೇಳೆ ಲೋಕೇಶ್ ಎಂಬ ವ್ಯಕ್ತಿ ರವಿಕುಮಾರ್ ಜತೆ ಸೇರಿಕೊಂಡಿದ್ದ ನಂತರ ಲೋಕೇಶ್, ರವಿಕುಮಾರ್ ಒಡೆತನದ ಟಿಟಿ ವಾಹನವನ್ನು ಓಡಿಸಲು ಕೆಲಸಕ್ಕೆ ಸೇರಿಕೊಂಡಿದ್ದ. ಈ ವೇಳೆ ರವಿಕುಮಾರ್ ಮೂಲಕವೇ ಲೋಕೇಶ್ಗೆ ಹುಡುಗಿಯೊಬ್ಬಳು ಪರಿಚಯವಾಗಿದ್ದಳು. ಕೆಲ ದಿನಗಳ ನಂತರ ಪರಿಚಯ ಪ್ರೇಮವಾಗಿ ಬದಲಾಗಿದೆ. ಇದಾದ ಬಳಿಕ ರವಿಕುಮಾರ್ ಕೂಡ ಹುಡುಗಿ ಬಳಿ ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ.
ರವಿಕುಮಾರ್ನನ್ನು ಲೋಕೇಶ್ ಅಲ್ಲಿಂದ ಕಿಡ್ನ್ಯಾಪ್ ಮಾಡಿಸಿದ್ದ..
ಈ ವೇಳೆ ಆ ಯುವತಿ ಲೋಕೇಶ್ಗೆ ಗೊತ್ತಾಗದಂತೆ ಇಬ್ಬರೊಂದಿಗೂ ಸ್ನೇಹ ಬೆಳೆಸಿದ್ದಳು. ಸ್ವಲ್ಪ ದಿನಗಳ ನಂತರ ಲೋಕೇಶ್ಗೆ ಈ ಮಾಹಿತಿ ಗೊತ್ತಾಗಿದೆ. ಇದರಿಂದ ಕೋಪಗೊಂಡ ಲೋಕೇಶ್ ಇದೇ ತಿಂಗಳು 20 ರಂದು ರವಿಕುಮಾರ್ ಒಡಿಸುತ್ತಿದ್ದ ಟಿಟಿ ವಾಹನವನ್ನು ಅಡ್ಡ ಹಾಕಿದ್ದಾನೆ.
ತದ ನಂತರ ತನ್ನ ಮೂವರು ಸ್ನೇಹಿತರನ್ನ ಕರೆಸಿ ರವಿಕುಮಾರ್ನನ್ನು ಲೋಕೇಶ್ ಅಲ್ಲಿಂದ ಕಿಡ್ನ್ಯಾಪ್ ಮಾಡಿಸಿದ್ದ. ಬಳಿಕ ರವಿಕುಮಾರ್ನನ್ನು ಬನ್ನೇರುಘಟ್ಟದ ಕೋಳಿ ಫಾರಂ ಬಳಿ ಕರೆದೊಯ್ದಿದ್ದ. ಈ ವೇಳೆ ಮಾತನಾಡಿಸಿ ತನ್ನ ಹುಡುಗಿಯನ್ನ ಬಿಡಲು ಹೇಳಿದ್ದ. ಆದರೆ ರವಿಕುಮಾರ್ ಯಾವುದೇ ಕಾರಣಕ್ಕೂ ಬಿಡಲ್ಲ ಎಂದು ಜಗಳವಾಡಿದ್ದಾನೆ.
ಹೀಗಾಗಿ ಕೋಪಗೊಂಡ ಲೋಕೇಶ್, ರವಿಕುಮಾರ್ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ. ನಂತರ ಯಾರಿಗೂ ಗೊತ್ತಾಗದಂತೆ ಬನ್ನೇರುಘಟ್ಟದ ಗುಡ್ಡದ ಒಂದರ ಪೊದೆಯಲ್ಲಿ ಶವ ಎಸೆದು ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ರವಿಕುಮಾರ್ ಕಾಣದದಾಗ ಆತನ ಮನೆಯವರು ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ನೀಡಿದ್ದರು.
ಅದೇ ದಿನ ಕೊಲೆಯಾದವನ ಮನೆಯಲ್ಲೇ ಊಟ ಮಾಡಿದ್ದಾರೆ..
ಈ ವೇಳೆ ಬೈಯ್ಯಪ್ಪನಹಳ್ಳಿ ಪೊಲೀಸರು ತನಿಖೆಗಿಳಿದಿದ್ದಾರೆ. ತನಿಖೆ ವೇಳೆ ಪ್ರಕರಣದ ಅಸಲಿಯತ್ತು ಹೊಬಂದಿದ್ದು, ರವಿಕುಮಾರ್ ಶವ ಪತ್ತೆಯಾಗಿದೆ. ಕೊಂದ ಬಳಿಕ ಕೊಲೆಯಾದವನ ಮನೆಗೆ ಬಂದಿದ್ದ ಹಂತಕರ ಟೀಂ, ಹುಡುಕಾಡುವ ಹೈಡ್ರಾಮ ನಡೆಸಿ. ಅದೇ ದಿನ ಕೊಲೆಯಾದವನ ಮನೆಯಲ್ಲೇ ಊಟ ಮಾಡಿದ್ದಾರೆ. ಅಂತಿಮವಾಗಿ ಆರೋಪಿಗಳಾದ ಲೋಕೇಶ್, ಸಚಿನ್,ರಂಜಿತ್ನನ್ನು ಬೈಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದಾರೆ.