AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಣಕ್ಕಾಗಿ ಸ್ನೇಹಿತನ ಕೊಲೆ, ದೇಹವನ್ನು 3 ತುಂಡು ಮಾಡಿ ಕಾಲುವೆಗೆ ಎಸೆದ ಹಂತಕರ ಬಂಧನ

ಅಕ್ಟೋಬರ್ 6 ರಂದು ಅಂಕಿತ್ ಖೋಕರ್ ಅವರನ್ನು ಕತ್ತು ಹಿಸುಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಗರಗಸವನ್ನು ಬಳಸಿ ಅವರ ದೇಹವನ್ನು ಮೂರು ಭಾಗಗಳಾಗಿ ಕತ್ತರಿಸಿ, ಮತ್ತು ಅವುಗಳನ್ನು ಅಲ್ಯೂಮಿನಿಯಂ ಫಾಯಿಲ್‌ನಲ್ಲಿ ಪ್ಯಾಕ್ ಮಾಡಿದ್ದಾರೆ.

ಹಣಕ್ಕಾಗಿ ಸ್ನೇಹಿತನ ಕೊಲೆ, ದೇಹವನ್ನು 3 ತುಂಡು ಮಾಡಿ ಕಾಲುವೆಗೆ ಎಸೆದ ಹಂತಕರ ಬಂಧನ
ಅಂಕಿತ್ ಖೋಕರ್
TV9 Web
| Updated By: ಅಕ್ಷಯ್​ ಪಲ್ಲಮಜಲು​​|

Updated on: Dec 15, 2022 | 11:20 AM

Share

ಗಾಜಿಯಾಬಾದ್: ಎರಡು ತಿಂಗಳ ಹಿಂದೆ ಉತ್ತರ ಪ್ರದೇಶ (Uttar Pradesh) ಗಾಜಿಯಾಬಾದ್​​ನಲ್ಲಿ (Ghaziabad) ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ತನ್ನ ಮನೆಯ ಬಾಡಿಗೆದಾರ ಅಂಕಿತ್ ಖೋಕರ್‌ನನ್ನು ಕೊಂದು ಅವನ ದೇಹವನ್ನು ತುಂಡುಗಳಾಗಿ ಕತ್ತರಿಸಿ ಕಾಲುವೆಗೆ ಎಸೆದ ಆರೋಪದ ಮೇಲೆ ಯುಪಿಯ ಗಾಜಿಯಾಬಾದ್ ಜಿಲ್ಲೆಯ ಮೋದಿನಗರದಲ್ಲಿ ಉಮೇಶ್ ಶರ್ಮಾ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸಾವನ್ನಪ್ಪಿರುವ ವ್ಯಕ್ತಿಯು ಇತ್ತೀಚೆಗೆ ಬಾಗ್‌ಪತ್‌ನಲ್ಲಿರುವ ತನ್ನ ಪೂರ್ವಜರ ಜಮೀನನ್ನು ಮಾರಾಟ ಮಾಡಿದ್ದು, ಅದರಿಂದ 1 ಕೋಟಿ ರೂ. ಹಣ ಸಿಕ್ಕಿದೆ, ಈ ಹಣದ ಮೇಲೆ ಕೊಲೆಗಾರ ಕಣ್ಣಿಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಗಾರ ಪರ್ವೇಶ್ ಎಂದು ಗುರುತಿಸಲಾದ ಹಂತಕನ ಸ್ನೇಹಿತನನ್ನು ಸಹ ಬಂಧಿಸಲಾಗಿದೆ.

ಇದನ್ನು ಓದಿ: ದೆಹಲಿಯ ಚರಂಡಿಯಲ್ಲಿ ಮಹಿಳೆಯ ಕೊಳೆತ ಶವ ತುಂಬಿಟ್ಟ ಸೂಟ್​ಕೇಸ್​ ಪತ್ತೆ

ಅಂಕಿತ್ ಖೋಕರ್ ಅವರ ಪೋಷಕರು ಕೆಲವು ವರ್ಷಗಳ ಹಿಂದೆ ನಿಧನರಾದಾಗಿನಿಂದ ಒಬ್ಬಂಟಿಯಾಗಿ ವಾಸಿಸುತ್ತಿದ್ದರು ಮತ್ತು ಲಕ್ನೋದ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ವಿದ್ವಾಂಸರಾಗಿದ್ದರು. ಸ್ನೇಹಿತರು ಕರೆ ಮಾಡಿದ್ರು ಉತ್ತರಿಸಿದ ಅಂಕಿತ್ ಖೋಕರ್​ನ್ನು ಪೊಲೀಸರು ಹುಡುಕಲು ಪ್ರಾರಂಭಿಸಿದ್ದಾರೆ. ಅವರಿಗೆ ಫೋನ್ ಕಾಲ್ ಮಾಡಿದಾಗ ಬೇರೆ ಯಾರೋ ತೆಗೆಯುತ್ತಾರೆ. ಇದು ಅವರ ಧ್ವನಿಯಲ್ಲ ಎಂದು ಗೊತ್ತಾಗುತ್ತದೆ. ಮುಂದೆ ತನಿಖೆ ಪ್ರಾರಂಭಿಸುತ್ತಾರೆ.

ಈಗ ಬಂಧಿತ ಭೂಮಾಲೀಕರು ಅಂಕಿತ್ ಖೋಕರ್ ಅವರಿಗೆ 40 ಲಕ್ಷ ರೂ. ಸಾಲ ನೀಡಿದ್ದರು. ಈ ಬಗ್ಗೆ ಆತನ ಹೆಂಡತಿಯ ಬಳಿ ವಿಚಾರಿಸಿದಾಗ ಅವರು ಎಲ್ಲಿಗೆ ಹೋಗಿದ್ದಾರೆಂದು ತಿಳಿದಿಲ್ಲ ಎಂದು ಹೇಳಿದರು.

ಅಕ್ಟೋಬರ್ 6 ರಂದು ಅಂಕಿತ್ ಖೋಕರ್ ಅವರನ್ನು ಕತ್ತು ಹಿಸುಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಗರಗಸವನ್ನು ಬಳಸಿ ಅವರ ದೇಹವನ್ನು ಮೂರು ಭಾಗಗಳಾಗಿ ಕತ್ತರಿಸಿ, ಮತ್ತು ಅವುಗಳನ್ನು ಅಲ್ಯೂಮಿನಿಯಂ ಫಾಯಿಲ್‌ನಲ್ಲಿ ಪ್ಯಾಕ್ ಮಾಡಿ. ಆರೋಪಿಗಳು ಅವರ ದೇಹದ ಒಂದು ಭಾಗವನ್ನು ಮುಜಾಫರ್‌ನಗರದ ಖತೌಲಿಯಲ್ಲಿ ಕಾಲುವೆಯಲ್ಲಿ, ಇನ್ನೊಂದು ಭಾಗವನ್ನು ಮಸ್ಸೂರಿ ಕಾಲುವೆಯಲ್ಲಿ ಮತ್ತು ಮತ್ತೊಂದು ಭಾಗವನ್ನು ಎಕ್ಸ್‌ಪ್ರೆಸ್‌ವೇನಲ್ಲಿ ಎಸೆದಿದ್ದಾರೆ ಎಂದು ಹೇಳಲಾಗಿದೆ. ಇನ್ನೂ ದೇಹದ ಭಾಗಗಳು ಪತ್ತೆಯಾಗಬೇಕಿದೆ.

ತನ್ನ ಎಟಿಎಂ ಕಾರ್ಡ್ ಬಳಸಿ ಅಂಕಿತ್ ಖೋಕರ್ ಖಾತೆಯಿಂದ ಬ್ಯಾಚ್‌ಗಳಲ್ಲಿ 20 ಲಕ್ಷ ರೂ. ವಿತ್ ಡ್ರಾ ಮಾಡಿದ್ದಾನೆ. ಇನ್ನೂ ಸ್ವಲ್ಪ ಹಣಕ್ಕಾಗಿ ಕಾರ್ಡ್ ಅನ್ನು ತನ್ನ ಸ್ನೇಹಿತ ಪರ್ವೇಶ್​​ಗೆ ನೀಡಿ ಉತ್ತರಾಖಂಡ್‌ನಲ್ಲಿ ಹಣ ಡ್ರಾ ಮಾಡುವಂತೆ ಹೇಳಿದ್ದಾನೆ. ಅಂಕಿತ್ ಖೋಕರ್ ಮೊಬೈಲ್ ಫೋನ್ ಕೂಡ ಆತನ ಜತೆಗೆ ತೆಗೆದುಕೊಂಡು ಹೋಗುವಂತೆ ಹೇಳಿದ್ದಾನೆ. ಆತ ನಾಪತ್ತೆಯಾಗಿದ್ದಾನೆ ಎಂದು ವರದಿಯಾದರೆ ತನಿಖೆಯನ್ನು ತಪ್ಪುದಾರಿಗೆ ಎಳೆಯಬಹುದು ಎಂಬ ಪ್ಲಾನ್ ಹಾಕಿಕೊಂಡಿದ್ದರು ಎಂದು ಗ್ರಾಮಾಂತರದ ಉಪ ಪೊಲೀಸ್ ಆಯುಕ್ತ ಇರಾಜ್ ರಾಜಾ ಹೇಳಿದ್ದಾರೆ.

ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ