ಮೈಸೂರಿನಲ್ಲಿ ಮರ್ಯಾದೆ ಹತ್ಯೆ ಪ್ರಕರಣ; ನನ್ನ ಸಾವಿಗೆ ತಂದೆ-ತಾಯಿಯೇ ಕಾರಣ ಎಂದಿದ್ದ ಯುವತಿ

| Updated By: sandhya thejappa

Updated on: Jun 09, 2022 | 8:52 AM

ಬಹಿರಂಗವಾದ ಆಡಿಯೋದಲ್ಲಿ ಪ್ರಿಯಕರ ಮಂಜುನಾಥ್ ಜೊತೆ ಫೋನ್​ನಲ್ಲಿ ಮಾತನಾಡಿದ್ದ ಶಾಲಿನಿ, ನಾನು ಸತ್ತರೆ ಅದಕ್ಕೆ ನಮ್ಮ ಅಪ್ಪ-ಅಮ್ಮನೇ ಕಾರಣ ಎಂದಿದ್ದಾಳೆ.

ಮೈಸೂರಿನಲ್ಲಿ ಮರ್ಯಾದೆ ಹತ್ಯೆ ಪ್ರಕರಣ; ನನ್ನ ಸಾವಿಗೆ ತಂದೆ-ತಾಯಿಯೇ ಕಾರಣ ಎಂದಿದ್ದ ಯುವತಿ
ಕೊಲೆಯಾದ ಯುವತಿ ಶಾಲಿನಿ
Follow us on

ಮೈಸೂರು: ಜಿಲ್ಲೆಯಲ್ಲಿ ನಡೆದ ಮರ್ಯಾದೆ ಹತ್ಯೆ (Honor Killing) ಪ್ರಕರಣಕ್ಕೆ ಸಂಬಂಧಿಸಿ ಮೃತ ಯುವತಿ ಶಾಲಿನಿ ಸಾವಿಗೂ ಮುನ್ನಾ ಮಾತಾಡಿರುವ ಆಡಿಯೋ (Audio) ಬಹಿರಂಗವಾಗಿದೆ. ಬಹಿರಂಗವಾದ ಆಡಿಯೋದಲ್ಲಿ ಪ್ರಿಯಕರ ಮಂಜುನಾಥ್ ಜೊತೆ ಫೋನ್​ನಲ್ಲಿ ಮಾತನಾಡಿದ್ದ ಶಾಲಿನಿ, ‘ನಾನು ಸತ್ತರೆ ಅದಕ್ಕೆ ನಮ್ಮ ಅಪ್ಪ-ಅಮ್ಮನೇ ಕಾರಣ’. ‘ನನ್ನನ್ನು ಅಪಹರಣ ಮಾಡಿಸುವ ಪ್ಲ್ಯಾನ್ ಮಾಡಿದ್ದಾರೆ’ ಎಂದು ಯುವಕನಿಗೆ ತಿಳಿಸಿದ್ದಾಳೆ. ನನ್ನನ್ನು ತಂದೆ, ತಾಯಿ ಮನೆಗೆ ಕರೆದುಕೊಂಡು ಬಂದಿದ್ದಾರೆ. ಬಾಲ ಮಂದಿರದಲ್ಲಿ ನಿನ್ನ ಇಷ್ಟದಂತೆ ಇರುವಂತೆ ಹೇಳಿದ್ದಾರೆ. ನನ್ನನ್ನು ಪಾಂಡವಪುರದಲ್ಲಿ ಕೆಲಸಕ್ಕೆ ಕಳುಹಿಸುತ್ತಿದ್ದಾರೆ ಎಂದು ತಿಳಿಸಿದ್ದ ಯುವತಿ ನಾನು ಮಾತಾಡುವುದನ್ನು ರೆಕಾರ್ಡ್ ಮಾಡುವಂತೆ ಯುವಕನಿಗೆ ಹೇಳಿದ್ದಾಳೆ.

ನಾನು ಸತ್ತರೆ ಅದನ್ನು ನಿನ್ನ ಮೇಲೆ ಹಾಕಲು ಪ್ಲ್ಯಾನ್ ಮಾಡುತ್ತಿದ್ದಾರೆ. ನನ್ನ ಈ ಆಡಿಯೋವನ್ನ ಪಿರಿಯಾಪಟ್ಟಣ ಪೊಲೀಸರಿಗೆ ಕೊಡು ಅಂತ ಶಾಲಿನಿ ಪ್ರಿಯಕರ ಮಂಜುನಾಥ್​​ಗೆ ಹೇಳಿದ್ದಾಳೆ. ಇನ್ನು ಮಂಜುನಾಥ್ ನೀನು ಬಾಲಮಂದಿರದಿಂದ ಏಕೆ ಬಂದೆ? ಈ ವೇಳೆ ನಿನಗೆ ಏನೇ ಆದರೂ ನನಗೆ ಕಾಲ್ ಮಾಡು. 18 ವರ್ಷ ಆಗುವವರೆಗೂ ಹುಷಾರಾಗಿರು ಅಂತ ಮಂಜುನಾಥ್ ಶಾಲಿನಿಗೆ ಫೋನ್​ನಲ್ಲಿ ಹೇಳಿದ್ದ.

ಪ್ರಕರಣವೇನು?
ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ಗ್ರಾಮದಲ್ಲಿ ಅನ್ಯಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕೆ ಹೆತ್ತವರೇ ಅಪ್ರಾಪ್ತ ಮಗಳ ಕೊಲೆ ಮಾಡಿದ್ದಾರೆ. ಅಪ್ರಾಪ್ತ ವಯಸ್ಸಿನ ಮಗಳು ಅನ್ಯಜಾತಿಯ ಯುವಕನನ್ನು ಪ್ರೀತಿಸುತ್ತಿದ್ದುದ್ದಕ್ಕೆ ತಂದೆ ಮಗಳ ಕತ್ತು ಹಿಸುಕಿ ಕೊಂದು ಪೊಲೀಸರಿಗೆ ಶರಣಾಗಿದ್ದಾರೆ. ತಂದೆ ಸುರೇಶ್ ಹಾಗೂ ತಾಯಿ ಬೇಬಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ
Mumbai: ಮುಂಬೈನಲ್ಲಿ ಅಪಾರ್ಟ್​ಮೆಂಟ್ ಕಟ್ಟಡ ಕುಸಿತ; ಓರ್ವ ಸಾವು, 16 ಜನರಿಗೆ ಗಾಯ
PSI Recruitment Scam: ನೇಮಕಾತಿಯಲ್ಲಿ ದರ್ಶನ್ ಗೌಡ ಅಕ್ರಮವೆಸಗಿರುವುದು ದೃಢ, FSL ವರದಿಯಲ್ಲಿ ಸತ್ಯ ಬಹಿರಂಗ
ಸಿಂಹದೊಂದಿಗೆ ಹೀಗೂ ಅಡಬಹುದು, ಆದರೆ ವಿಡಿಯೋ ನೋಡಿ ಅಂಥ ಸಾಹಸಕ್ಕೆ ಕೈ ಹಾಕಬೇಡಿ ಮಾರಾಯ್ರೇ!
Friendship: ಸ್ನೇಹವು ಮನಸ್ಸಿನ ಮೇಲೆ ಹೇಗೆ ಸಕಾರಾತ್ಮಕ ಪರಿಣಾಮ ಬೀರಬಲ್ಲದು?

ಇದನ್ನೂ ಓದಿ: Mumbai: ಮುಂಬೈನಲ್ಲಿ ಅಪಾರ್ಟ್​ಮೆಂಟ್ ಕಟ್ಟಡ ಕುಸಿತ; ಓರ್ವ ಸಾವು, 16 ಜನರಿಗೆ ಗಾಯ

ಯುವಕನ ಕೊಲೆಗೆ 2 ಲಕ್ಷ ರೂಪಾಯಿಗೆ ಸುಪಾರಿ:
ಪೊಲೀಸರಿಗೆ ಮಾಹಿತಿ ನೀಡಿರುವ ಮಂಜುನಾಥ್​​, ನನ್ನನ್ನು ಕೊಲೆ ಮಾಡಿಸಲು ಶಾಲಿನಿ ತಂದೆ 2 ಲಕ್ಷ ರೂಪಾಯಿಗೆ ಸುಪಾರಿ ನೀಡಿದ್ದಾರೆ. ಸಾವಿಗೂ ಮುನ್ನ ಈ ಬಗ್ಗೆ ನನಗೆ ಶಾಲಿನಿ ಮಾಹಿತಿ ನೀಡಿದ್ದಳು. ನನ್ನ‌ ವಿರುದ್ಧ ಮೂರು ಬಾರಿ ಸುಳ್ಳು ದೂರು ದಾಖಲಿಸಿದ್ದಾರೆ. ಕಳೆದ 4 ತಿಂಗಳಿಂದ ನಾನು ಶಾಲಿನಿಯನ್ನು ಪ್ರೀತಿಸುತ್ತಿದೆ. 18 ವರ್ಷದ ಆದ ಬಳಿಕ ಮದುವೆಯಾಗುವ ಭರವಸೆ ನೀಡಿದ್ದೆ. ಅನ್ಯಜಾತಿ ಎಂಬ ಕಾರಣಕ್ಕೆ ಶಾಲಿನಿ ತಂದೆ ಮದುವೆಗೆ ಒಪ್ಪಿರಲಿಲ್ಲ. ನನಗೂ ಸಹ ಜೀವ ಬೆದರಿಕೆ ಇದೆ ಅಂತ ​ತಿಳಿಸಿದ್ದಾನೆ.

ಶಾಲಿನಿ ಬರೆದಿದ್ದಳು ಡೆತ್ ನೋಟ್:
ಕೊಲೆಯಾದ ಶಾಲಿನಿ ಪಿರಿಯಾಪಟ್ಟಣ ಪೊಲೀಸರಿಗೆ ಸುದೀರ್ಘ ಪತ್ರ ಬರೆದಿದ್ದಾಳೆ. ನನ್ನ ಸಾವಿಗೆ ನನ್ನ ಹುಡುಗ ಕಾರಣ ಅಲ್ಲ. ನನ್ನ ತಂದೆ- ತಾಯಿ,‌ ಚಿಕ್ಕಪ್ಪ- ಚಿಕ್ಕಮ್ಮ‌ ಕಾರಣ. ಜಾತಿ ಪಿಡುಗಿಗೆ ನಾನು ಬಲಿಯಾಗುತ್ತಿದ್ದೇನೆ. ನನ್ನ ಸಾವಿಗೆ ಯಾರಿಗೂ ಶಿಕ್ಷೆ ಕೊಡಬೇಡಿ. ನನ್ನ ತಂದೆ- ತಾಯಿಯನ್ನು ಕರೆದು ಬುದ್ದಿ ಹೇಳಿ. ನಾನು ಅನ್ಯ ಜಾತಿಯನ್ನು ಪ್ರೀತಿಸಿದೆ. ಅದೇ ಕಾರಣಕ್ಕೆ ನನ್ನ ತಂದೆ ತಾಯಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ನನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ನನ್ನ ತಂದೆ ತಾಯಿಗೆ ನನಗಿಂತ ಜಾತಿಯೇ ಮುಖ್ಯ. ಈ ಪತ್ರ ನಾನೇ ಸ್ವಯಂಪ್ರೇರಿತವಾಗಿ ಬರೆದಿದ್ದೇನೆ ಎಂದು ಬರೆದಿದ್ದಾಳೆ.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:35 am, Thu, 9 June 22