ನಿಲ್ಲಿಸಿದ್ದ ಕಾರಿಗೆ ಬೆಂಕಿ ಹಚ್ಚಿದ ಬುರ್ಖಾಧಾರಿ ಮಹಿಳೆ, ಎಚ್ಚರಿಸಿದ ಮಕ್ಕಳು, ತಪ್ಪಿದ ಅನಾಹುತ!

| Updated By: Rakesh Nayak Manchi

Updated on: Jun 13, 2022 | 5:10 PM

ನಿಲ್ಲಿಸಿದ್ದ ಕಾರಿಗೆ ಬುರ್ಖಾಧಾರಿ ಮಹಿಳೆಯೊಬ್ಬಳು ಬೆಂಕಿ ಹಚ್ಚಿ ಪರಾರಿಯಾದ ಘಟನೆ ಉತ್ತರಪ್ರದೇಶ ಗೋರಕ್​ಪುರದಲ್ಲಿ ನಡೆದಿದೆ. ರಾಜ್ಯದಲ್ಲಿ ಅಶಾಂತಿ ಸೃಷ್ಟಿಸಲು ಸಂಚು ರೂಪಿಸಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನಿಲ್ಲಿಸಿದ್ದ ಕಾರಿಗೆ ಬೆಂಕಿ ಹಚ್ಚಿದ ಬುರ್ಖಾಧಾರಿ ಮಹಿಳೆ, ಎಚ್ಚರಿಸಿದ ಮಕ್ಕಳು, ತಪ್ಪಿದ ಅನಾಹುತ!
ಕಾರಿಗೆ ಬೆಂಕಿ ಹಚ್ಚಿದ ಮಹಿಳೆ
Follow us on

ನಿಲ್ಲಿಸಿದ್ದ ಕಾರಿಗೆ ಬುರ್ಖಾಧಾರಿ ಮಹಿಳೆಯೊಬ್ಬಳು ಬೆಂಕಿ ಹಚ್ಚಿ ಪರಾರಿಯಾದ ಘಟನೆ ಉತ್ತರಪ್ರದೇಶದ ಗೋರಕ್​ಪುರದಲ್ಲಿ ನಡೆದಿದೆ. ಕಾರಿಗೆ ಬೆಂಕಿ ಹತ್ತಿಕೊಂಡಿದ್ದನ್ನು ಗಮನಿಸಿದ ಮಕ್ಕಳು, ಕೂಡಲೇ ಎಚ್ಚರಿಸಿದ್ದು, ಸ್ಥಳೀಯರು ಬೆಂಕಿ ನಂದಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದರು. ಇದೇ ವೇಳೆ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು ಪ್ರಕರಣ ದಾಖಲಿಸಿ ಮಹಿಳೆಯ ಬಂಧನಕ್ಕೆ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: Viral: ಒಂದು ಕಾಂಡೋಮ್ ಪ್ಯಾಕ್ ಬೆಲೆ 60,000 ರೂಪಾಯಿ! ಎಲ್ಲಿ ಗೊತ್ತಾ?

ಮಾಹಿತಿಯ ಪ್ರಕಾರ, ಜತೇಪುರ್ ಉತ್ತರ ಲೋಹಿಯಾ ನಗರದ ನಿವಾಸಿ ಅಜಯ್ ಕುಮಾರ್ ಶ್ರೀವಾಸ್ತವ ಅವರು ಶುಕ್ರವಾರ ತಮ್ಮ ಪತ್ನಿಯನ್ನು ತೋರಿಸಲು ಡಾ. ಅಂಜು ಜೈಸ್ವಾಲ್ ಅವರ ಕ್ಲಿನಿಕ್‌ಗೆ ಹೋಗಿದ್ದರು. ಈ ವೇಳೆ ಅವರ ಕಾರನ್ನು ಮಜೌಲಿ ಕಾಂಪೌಂಡ್ ಆವರಣದಲ್ಲಿ ನಿಲ್ಲಿಸಿದ್ದರು. ಈ ವೇಳೆ ಬುರ್ಖಾ ಧರಿಸಿದ್ದ ಮಹಿಳೆಯೊಬ್ಬಳು ಬಾಟಲಿಯಲ್ಲಿ ಸುಡುವ ತಂದು ಟೈರ್ ಬಳಿ ಬೆಂಕಿ ಹಚ್ಚಲು ಪ್ರಯತ್ನಿಸಿದ್ದಾರೆ. ಬೆಂಕಿ ಹಚ್ಚಲು ಹಲವು ಬಾರಿ ಯತ್ನ ನಡೆಸಿದ್ದಾಳೆ. ಕೊನೆಯಲ್ಲಿ ಚಕ್ರಕ್ಕೆ ಬೆಂಕಿ ಹತ್ತಿಕೊಂಡಿದ್ದು, ಕೂಡಲೇ ಮಹಿಳೆ ಅಲ್ಲಿಂದ ಪರಾರಿಯಾಗಿದ್ದಾಳೆ.

ಕಾರಿನ ಪಕ್ಕದಲ್ಲಿ ಆಡುತ್ತಿದ್ದ ಮಕ್ಕಳು ಇದನ್ನು ಗಮನಿಸಿದ್ದು, ಕೂಡಲೇ ಸ್ಥಳೀಯರನ್ನು ಎಚ್ಚರಿಸಿದ್ದಾರೆ. ಕೂಡಲೇ ಸ್ಥಳೀಯರು ಹತ್ತಿಕೊಂಡ ಬೆಂಕಿಯನ್ನು ನಂದಿಸಿದರು. ಮಕ್ಕಳು ಅನುಮಾನಾಸ್ಪದ ಮಹಿಳೆಯ ಬಗ್ಗೆ ಮಾಹಿತಿ ನೀಡಿದ್ದು, ಸಿಸಿಟಿವಿ ಪರಿಶೀಲನೆ ವೇಳೆ ಬುರ್ಖಾ ಧರಿಸಿದ ಮಹಿಳೆ ಕಾಣಿಸಿಕೊಂಡಿದ್ದಾಳೆ.

ಇದನ್ನೂ ಓದಿ: Viral Video: ರಸ್ತೆ ದಾಟುವ ಹುಲಿಗಳ ಹಿಂಡಿನ ಅಪರೂಪದ ದೃಶ್ಯಾವಳಿ ಸೆರೆ ಹಿಡಿದ ಪ್ರವಾಸಿಗರು

ಈ ಘಟನೆಯ ನಂತರ ಅಜಯ್ ಕುಮಾರ್ ಶ್ರೀವಾಸ್ತವ ಅವರು 112ಕ್ಕೆ ಕರೆ ಮಾಡಿ ಮಾಹಿತಿ ನೀಡಿದರು. ಕ್ಯಾಂಟ್ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ. ಸಿಸಿ ಫೂಟೇಜ್ ಆಧಾರದ ಮೇಲೆ ಕ್ಯಾಂಟ್ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಎಸ್‌ಎಸ್‌ಪಿ ಡಾ.ವಿಪಿನ್ ತಾಡಾ ತಿಳಿಸಿದ್ದಾರೆ. ಶೀಘ್ರದಲ್ಲೇ ಮಹಿಳೆಯನ್ನು ಬಂಧಿಸಲಾಗುವುದು, ನಂತರವಷ್ಟೇ ಕೃತ್ಯಕ್ಕೆ ಕಾರಣ ತಿಳಿದುಬರಲಿದೆ ಎಂದಿದ್ದಾರೆ.

ನಿನ್ನೆ ತಡರಾತ್ರಿ ಎಸ್‌ಎಸ್‌ಪಿ ಗಮನಕ್ಕೆ ವಿಷಯ ಬಂದಿದ್ದು, ಕಾರ್ಯಾಚರಣೆಗಿಳಿದ ಕ್ಯಾಂಟ್‌ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮತ್ತೊಂದೆಡೆ, ವಾಹನ ಮಾಲೀಕರು ಅಪರಿಚಿತ ಬುರ್ಖಾ ಧರಿಸಿದ್ದ ಮಹಿಳೆ ವಿರುದ್ಧ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದು, ರಾಜ್ಯದಲ್ಲಿ ಅಶಾಂತಿ ಸೃಷ್ಟಿಸಲು ಸಂಚು ರೂಪಿಸಿರುವ ಶಂಕೆ ವ್ಯಕ್ತವಾಗಿದೆ.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:09 pm, Mon, 13 June 22