AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

PUBG: ಪಬ್​ಜಿ ಆಟದಲ್ಲಿ ಸೋತಿದ್ದಕ್ಕೆ ಗೇಲಿ ಮಾಡಿದ ಗೆಳೆಯರು; ಬೇಸರದಿಂದ 15 ವರ್ಷದ ಬಾಲಕ ಆತ್ಮಹತ್ಯೆ

ಜೂನ್ 11ರ ರಾತ್ರಿ 15 ವರ್ಷದ ಬಾಲಕ ಸೋದರಸಂಬಂಧಿಗಳೊಂದಿಗೆ PUBG ಆಡುತ್ತಿದ್ದ. ಆಟದಲ್ಲಿ ಸೋತಿದ್ದಕ್ಕೆ ಬೇರೆ ಹುಡುಗರು ಚುಡಾಯಿಸಿದ ನಂತರ ಆತನ ತಂದೆ ಅವರಿಗೆ ಪಬ್​ಜಿ ಆಡದಂತೆ ಗದರಿದ್ದರು. ಅದರಿಂದ ಬೇಜಾರಾಗಿದ್ದ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

PUBG: ಪಬ್​ಜಿ ಆಟದಲ್ಲಿ ಸೋತಿದ್ದಕ್ಕೆ ಗೇಲಿ ಮಾಡಿದ ಗೆಳೆಯರು; ಬೇಸರದಿಂದ 15 ವರ್ಷದ ಬಾಲಕ ಆತ್ಮಹತ್ಯೆ
ಪಬ್​ಜಿImage Credit source: India Today
TV9 Web
| Edited By: |

Updated on:Jun 13, 2022 | 7:16 PM

Share

ಹೈದರಾಬಾದ್: ಆಂಧ್ರಪ್ರದೇಶದ ಮಚಿಲಿಪಟ್ಟಣಂ ಪಟ್ಟಣದ 15 ವರ್ಷದ ಬಾಲಕನೊಬ್ಬ ಪಬ್​ಜಿ (PUBG) ಮೊಬೈಲ್ ಗೇಮಿಂಗ್​ನಲ್ಲಿ ಸೋತಿದ್ದಕ್ಕೆ ಗೆಳೆಯರಿಂದ ಅಪಹಾಸ್ಯಕ್ಕೆ ಒಳಗಾಗಿ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾನೆ. ಈ ಬಾಲಕ ತನ್ನ ತಂದೆ ಮತ್ತು ಕುಟುಂಬದ ಸದಸ್ಯರೊಂದಿಗೆ ಬೇಸಿಗೆ ರಜಾ ದಿನಗಳನ್ನು ಕಳೆಯುತ್ತಿದ್ದ. ಅಲ್ಲಿ ಅವನು PUBG ಆಟದ ರೌಂಡ್​ನಲ್ಲಿ ಸೋತಿದ್ದಕ್ಕೆ ಆತನ ಜೊತೆಗಿದ್ದವರು ಲೇವಡಿ ಮಾಡಿದ್ದರು. ಈ ಸಾವಿನ ಬಗ್ಗೆ ಆ ಬಾಲಕನ ಮನೆಯವರು ಅನುಮಾನ ವ್ಯಕ್ತಪಡಿಸಿದ್ದು, ಸಿಆರ್‌ಪಿಸಿ (ಅಪರಾಧ ಪ್ರಕ್ರಿಯಾ ಸಂಹಿತೆ) ಸೆಕ್ಷನ್ 174ರ ಅಡಿಯಲ್ಲಿ ಅನುಮಾನಾಸ್ಪದ ಸಾವಿನ ಪ್ರಕರಣ ದಾಖಲಿಸಿದ್ದಾರೆ.

ಲಕ್ನೋದಲ್ಲಿ ಕೆಲವು ದಿನಗಳ ಹಿಂದೆ ಇದೇ ರೀತಿಯ ಪಬ್​ಜಿ ಆಟಕ್ಕೋಸ್ಕರ ಬಾಲಕನೊಬ್ಬ ತಾಯಿಯನ್ನೇ ಕೊಲೆ ಮಾಡಿದ್ದ. ಅದರ ಬೆನ್ನಲ್ಲೇ ಈ ಪ್ರಕರಣ ಬೆಳಕಿಗೆ ಬಂದಿದೆ. ಪಬ್​ಜಿ ಆಡಿದ್ದಕ್ಕೆ ಬೈದ ಅಮ್ಮನನ್ನು 16 ವರ್ಷದ ಬಾಲಕ ಗುಂಡಿಕ್ಕಿ ಕೊಂದಿದ್ದ. ಸೆಪ್ಟೆಂಬರ್ 2020ರಿಂದ ಭದ್ರತಾ ಕಾರಣಗಳಿಗಾಗಿ ಪಬ್​ಜಿ ಆಟವನ್ನು ಭಾರತದಲ್ಲಿ ನಿಷೇಧಿಸಲಾಗಿದೆ.

ಜೂನ್ 11ರ ರಾತ್ರಿ 15 ವರ್ಷದ ಬಾಲಕ ಸೋದರಸಂಬಂಧಿಗಳೊಂದಿಗೆ PUBG ಆಡುತ್ತಿದ್ದ. ಆಟದಲ್ಲಿ ಸೋತಿದ್ದಕ್ಕೆ ಬೇರೆ ಹುಡುಗರು ಚುಡಾಯಿಸಿದ ನಂತರ ಆತನ ತಂದೆ ಅವರಿಗೆ ಪಬ್​ಜಿ ಆಡದಂತೆ ಗದರಿದ್ದರು. ಇದರಿಂದ ಆ ಹುಡುಗ ಇನ್ನಷ್ಟು ಬೇಸರ ಮಾಡಿಕೊಂಡಿದ್ದ. ರಾತ್ರಿ ಊಟವಾದ ನಂತರ ರೂಮಿನಲ್ಲೇ ಒಬ್ಬನೇ ಮಲಗಿದ್ದಾಗ ಇದೇ ಬೇಸರದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ: Shocking News: ಪಬ್​ಜಿ ಆಡಬೇಡ ಎಂದ ಅಮ್ಮನನ್ನು ಕೊಂದ ಬಾಲಕ; ರೂಂ ಫ್ರೆಷನರ್​​ ಹಾಕಿ 2 ದಿನ ಶವ ಮುಚ್ಚಿಟ್ಟ!

ಹುಡುಗ ಹೆಚ್ಚಾಗಿ ಮೊಬೈಲ್ ಫೋನ್‌ನಲ್ಲಿ ಯಾವಾಗಲೂ ಆಟವಾಡುತ್ತಿದ್ದ. ಮನೆಯವರು ಗೇಲಿ ಮಾಡಿದ್ದರಿಂದ ಖಿನ್ನತೆಗೆ ಒಳಗಾಗಿದ್ದ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಆಟದಲ್ಲಿ ಸೋತಿದ್ದಕ್ಕೆ ಬೈದಿದ್ದ ಆತನ ತಂದೆ ಮರುದಿನ ಬೆಳಗ್ಗೆ ಮಗನ ರೂಮಿನ ಬಾಗಿಲು ಬಡಿದಾಗ ಬಾಗಿಲು ತೆರೆಯಲಿಲ್ಲ. ಕೊನೆಗೆ ಮನೆಯವರೆಲ್ಲ ಸೇರಿ ಬಾಗಿಲು ಒಡೆದು ನೋಡಿದಾಗ ಬಾಲಕ ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದು ಗೊತ್ತಾಗಿದೆ.

ಲಕ್ನೋದಲ್ಲಿ ಇದೇ ರೀತಿಯ ಘಟನೆಯೊಂದು ನಡೆದಿತ್ತು. 16 ವರ್ಷದ ಬಾಲಕ ಸದಾ ಪಬ್​ಜಿ ಆಡುತ್ತಿದ್ದ. ಮೊಬೈಲ್ ಗೇಮ್​ಗೆ ಅಡಿಕ್ಟ್​ ಆಗಿದ್ದ ಆತನಿಂದ ಅಮ್ಮ ಬೇಸತ್ತಿದ್ದಳು. ಹೀಗಾಗಿ, ಆತನಿಗೆ ಆಗಾಗ ಬೈಯುತ್ತಿದ್ದಳು. ತನ್ನ ತಾಯಿ PUBG ಆಟವಾಡುವುದನ್ನು ವಿರೋಧಿಸಿದ್ದಕ್ಕಾಗಿ ಅಪ್ಪನ ರಿವಾಲ್ವರ್​ನಿಂದ ಬಾಲಕ ಗುಂಡು ಹಾರಿಸಿದ್ದಾನೆ. ಅಮ್ಮನಿಗೆ ಶೂಟ್ ಮಾಡಿ ಕೊಂದ ಬಳಿಕ ಭಯಗೊಂಡ ಆ ಬಾಲಕ ಆ ಹೆಣವನ್ನು ಮನೆಯಲ್ಲೇ ಮುಚ್ಚಿಟ್ಟಿದ್ದಾನೆ. ಮರುದಿನ ಹೆಣದ ವಾಸನೆ ಮನೆಯಲ್ಲಿ ಹರಡಿದ ಬಳಿಕ ಆತ ಮನೆಗೆ ಏರ್​ ಫ್ರೆಷನರ್ ಹೊಡೆದು ವಾಸನೆ ಹರಡದಂತೆ ಪ್ಲಾನ್ ಮಾಡಿದ್ದಾನೆ. 16 ವರ್ಷದ ಯುವಕ ಭಾನುವಾರ ಮುಂಜಾನೆ ತನ್ನ ತಂದೆಯ ಲೈಸೆನ್ಸ್​ ಇರುವ ರಿವಾಲ್ವರ್‌ನಿಂದ ತನ್ನ ತಾಯಿಯನ್ನು ಶೂಟ್ ಮಾಡಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತಲೆಗೆ ಗುಂಡು ತಗುಲಿದ ಮಹಿಳೆ ಸ್ವಲ್ಪ ಸಮಯದ ನಂತರ ಸಾವನ್ನಪ್ಪಿದ್ದಾರೆ.

ಆ ಮನೆಯಲ್ಲಿ ಆತನ 9 ವರ್ಷದ ತಂಗಿ ಕೂಡ ಇದ್ದಳು. ಆದರೆ, ಆಕೆಗೆ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ನಿನ್ನನ್ನೂ ಕೊಲ್ಲುವುದಾಗಿ ಹೆದರಿಸಿ, ಅಮ್ಮನ ಹೆಣವನ್ನು ರೂಮೊಂದರಲ್ಲಿ ಇರಿಸಿ, ಮನೆಗೆ ರೂಮ್​ ಫ್ರೆಷನರ್ ಸಿಂಪಡಿಸಿದ್ದಾನೆ. ಕೆಲಸದ ನಿಮಿತ್ತ ಬೇರೆ ಊರಿನಲ್ಲಿದ್ದ ಆತನ ತಂದೆ 2 ದಿನಗಳ ಬಳಿಕ ಮನೆಗೆ ಬಂದಾಗ ಈ ವಿಷಯ ಗೊತ್ತಾಗಿದೆ. ಅಪ್ಪನ ಬಳಿ ಸುಳ್ಳು ಕತೆ ಕಟ್ಟಿದ ಬಾಲಕ ರಿಪೇರಿ ಕೆಲಸಕ್ಕೆಂದು ಮನೆಗೆ ಬಂದಿದ್ದ ಎಲೆಕ್ಟ್ರಿಷಿಯನ್ ತನ್ನ ತಾಯಿಯನ್ನು ಗುಂಡಿಕ್ಕಿ ಕೊಂದಿದ್ದಾನೆ ಎಂದು ಹೇಳಿದ್ದ. ಬಳಿಕ ವಿಚಾರಣೆ ವೇಳೆ ಆತನೇ ಕೊಲೆ ಮಾಡಿರುವ ವಿಚಾರ ಗೊತ್ತಾಗಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:11 pm, Mon, 13 June 22

Follow Us
TV9 Web
TV9 Web

TV9 Kannada

Read More
ಸರ್ಕಾರಿ ಶಾಲಾ ಮಕ್ಕಳಿಗೆ ಇನ್ಮುಂದೆ ಹೊಸ ವಿನ್ಯಾಸದ ಸಮವಸ್ತ್ರ?
ಸರ್ಕಾರಿ ಶಾಲಾ ಮಕ್ಕಳಿಗೆ ಇನ್ಮುಂದೆ ಹೊಸ ವಿನ್ಯಾಸದ ಸಮವಸ್ತ್ರ?
ಶಿವರಾಜ್ ಕೆಆರ್ ಪೇಟೆ ಹೊಸ ಸಿನಿಮಾ ‘ಹವಾಮಾನ ವರದಿ’ ಶುರುವಾಗಿದ್ದು ಹೀಗೆ..
ಶಿವರಾಜ್ ಕೆಆರ್ ಪೇಟೆ ಹೊಸ ಸಿನಿಮಾ ‘ಹವಾಮಾನ ವರದಿ’ ಶುರುವಾಗಿದ್ದು ಹೀಗೆ..
ಬೆಂಗಳೂರಿನ ಮನಮೋಹಕ ತಾಣ ನಲ್ಲಿಗುಡ್ಡೆ ಅಭಿವೃದ್ಧಿಗೆ ಸರ್ಕಾರದ ಒತ್ತು
ಬೆಂಗಳೂರಿನ ಮನಮೋಹಕ ತಾಣ ನಲ್ಲಿಗುಡ್ಡೆ ಅಭಿವೃದ್ಧಿಗೆ ಸರ್ಕಾರದ ಒತ್ತು
‘ಹವಾಮಾನ ವರದಿ’ ಸಿನಿಮಾ ಬಗ್ಗೆ ನಾಯಕಿ ನಿರೀಕ್ಷಾ ರಾವ್ ಮಾತು: ವಿಡಿಯೋ
‘ಹವಾಮಾನ ವರದಿ’ ಸಿನಿಮಾ ಬಗ್ಗೆ ನಾಯಕಿ ನಿರೀಕ್ಷಾ ರಾವ್ ಮಾತು: ವಿಡಿಯೋ
'ಮೈಲೇಜ್ ಕುಸಿತಕ್ಕೆ ಎಥೆನಾಲ್ ಅಲ್ಲ, ಗುಂಡಿ ಬಿದ್ದ ರಸ್ತೆಗಳೇ ಕಾರಣ': ಅಶೋಕ್
'ಮೈಲೇಜ್ ಕುಸಿತಕ್ಕೆ ಎಥೆನಾಲ್ ಅಲ್ಲ, ಗುಂಡಿ ಬಿದ್ದ ರಸ್ತೆಗಳೇ ಕಾರಣ': ಅಶೋಕ್
ವಾಯುವ್ಯ ಕರ್ನಾಟಕ ಸಾರಿಗೆ ಹೆಸರು ಬದಲಾವಣೆಗೆ ಸರ್ಕಾರ ಆದೇಶ
ವಾಯುವ್ಯ ಕರ್ನಾಟಕ ಸಾರಿಗೆ ಹೆಸರು ಬದಲಾವಣೆಗೆ ಸರ್ಕಾರ ಆದೇಶ
‘ವರ್ಷ 70 ಆದರೂ ನಾನು ತಾಯಿ ರೀತಿ ಕಾಣಲ್ಲ’; ಅನು ಪ್ರಭಾಕರ್
‘ವರ್ಷ 70 ಆದರೂ ನಾನು ತಾಯಿ ರೀತಿ ಕಾಣಲ್ಲ’; ಅನು ಪ್ರಭಾಕರ್
ಯಶಸ್ ವಿರುದ್ಧ ತಿರುಗಿ ಬಿದ್ದ ಆಸಿಯಾ: ಸ್ನೇಹ ಅಂತ್ಯ, ಪೈಪೋಟಿ ಶುರು
ಯಶಸ್ ವಿರುದ್ಧ ತಿರುಗಿ ಬಿದ್ದ ಆಸಿಯಾ: ಸ್ನೇಹ ಅಂತ್ಯ, ಪೈಪೋಟಿ ಶುರು
ಸಚಿವರ ಭಾಷಣಕ್ಕೆ ಕೋಕ್​​: ಕೃಷ್ಣ ಭೈರೇಗೌಡ ಅಸಮಾಧಾನ
ಸಚಿವರ ಭಾಷಣಕ್ಕೆ ಕೋಕ್​​: ಕೃಷ್ಣ ಭೈರೇಗೌಡ ಅಸಮಾಧಾನ
ನಾಳೆ ಪಿಎಂ ಮೋದಿ ಉದ್ಘಾಟಿಸಲಿರೋ ಟಿಲ್ಟೆಡ್ ಎಲ್​ಇಡಿ ಡೋಮ್ ತಾರಾಲಯ ಹೇಗಿದೆ
ನಾಳೆ ಪಿಎಂ ಮೋದಿ ಉದ್ಘಾಟಿಸಲಿರೋ ಟಿಲ್ಟೆಡ್ ಎಲ್​ಇಡಿ ಡೋಮ್ ತಾರಾಲಯ ಹೇಗಿದೆ