ನೆಲಮಂಗಲ, ಡಿಸೆಂಬರ್ 06: ಬರ್ತ್ಡೇ ದಿನವೇ 8ನೇ ತರಗತಿ ವಿದ್ಯಾರ್ಥಿನಿ (student) ಮೇಲೆ ಅತ್ಯಾಚಾರವೆಸಗಿದ್ದು, 8 ತಿಂಗಳ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದೆ. ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ಕಂಡುಬಂದಿದೆ. 13 ವರ್ಷದ ಬಾಲಕಿ ಮೇಲೆ ಪಕ್ಕದ ಮನೆಯ 43 ವರ್ಷದ ವ್ಯಕ್ತಿಯಿಂದ ಅತ್ಯಾಚಾರವೆಸಗಿದ್ದ ಆರೋಪ ಮಾಡಲಾಗಿದೆ. ಬಾಲಕಿ ಹೊಟ್ಟೆ ನೋವೆಂದು ಆಸ್ಪತ್ರೆಗೆ ತೆರಳಿದ್ದಾಗ ವಿಷಯ ಬೆಳಕಿಗೆ ಬಂದಿದೆ. ಪ್ರಕರಣದ ಆರೋಪಿಗೆ ಮದುವೆಯಾಗಿ 2 ವರ್ಷದ ಮಗಳಿದ್ದಾಳೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲು ಮಾಡಲಾಗಿದೆ.
ಬೆಂಗಳೂರು: 10ಕ್ಕೂ ಹೆಚ್ಚು ದುಷ್ಕರ್ಮಿಗಳಿಂದ ಮಾರಕಾಸ್ತ್ರಗಳಿಂದ ಕೊಚ್ಚಿ ಆಟೋಚಾಲಕನ ಬರ್ಬರ ಹತ್ಯೆ ಮಾಡಿರುವಂತಹ ಘಟನೆ ಟಿಂಬರ್ಲೇಔಟ್ನಲ್ಲಿ ನಿನ್ನೆ ರಾತ್ರಿ 9.30ರ ಸುಮಾರಿಗೆ ನಡೆದಿದೆ.
ಇದನ್ನೂ ಓದಿ: ಬೆಳಗಾವಿ ಬಿಜೆಪಿ ಮುಖಂಡ ಪೃಥ್ವಿ ಸಿಂಗ್ಗೆ ಚಾಕು ಇರಿತ: ಕಾಂಗ್ರೆಸ್ ಎಂಎಲ್‌ಸಿ ಸೇರಿ ಐವರ ವಿರುದ್ಧ ಎಫ್ಐಆರ್
ಅರುಣ್(24) ಹತ್ಯೆಯಾದ ಆಟೋಚಾಲಕ. ಕೊಲೆಯಾದ ಅರುಣ್ಗೆ ಮುಂದಿನ ತಿಂಗಳು ಮದುವೆ ಫಿಕ್ಸ್ ಆಗಿತ್ತು. ಘಟನಾ ಸ್ಥಳಕ್ಕೆ ಬ್ಯಾಟರಾಯನಪುರ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಬಳ್ಳಾರಿ: ಕ್ಷುಲ್ಲಕ ಕಾರಣಕ್ಕೆ ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವಂತಹ ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಬಲಕುಂದಿ ಗ್ರಾಮದಲ್ಲಿ ನಿನ್ನೆ ನಡೆದಿದೆ. ರಸೂಲ್ ಸಾಬ್ ಎಂಬ ವ್ಯಕ್ತಿಯು ತನಗೆ ಎರಡು ಕಿಡ್ನಿ ವೈಫಲ್ಯ ಆಗಿದೆ ನನ್ನ ಹೆಂಡತಿ ಮೈಬುನಾ ಬಿ. (35) ನನಗೆ ಸರಿಯಾಗಿ ಆರೈಕೆ ಮಾಡುತ್ತಿಲ್ಲ, ನಾನು ದುಡಿಯುವಾಗ ಎಲ್ಲಾ ಚೆನ್ನಾಗಿತ್ತು.
ಇದನ್ನೂ ಓದಿ: ಗಂಡ-ಹೆಂಡತಿ ಜಗಳದಲ್ಲಿ RDX ಸ್ಫೋಟಿಸುವುದಾಗಿ ಬೆದರಿಕೆ ಮೆಸೇಜ್ ರವಾನೆ ಮಾಡಿದ್ದು ಯಾರು ಗೊತ್ತಾ?
ಈಗ ನಾನು ಮೂಲೆ ಗುಂಪ್ಪಾದ್ದು, ನನ್ನ ಆರೈಕೆ ಮಾಡುತ್ತಿಲ್ಲ ಅಂತಾ ಕೋಪು ಗೊಂಡು ಆಕೆ ಮಲಗಿದ್ದಾಗ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಬಳಿಕ ತನ್ನ ಎರಡು ಮಕ್ಕಳನ್ನ ಕರೆದುಕೊಂಡು ತೆಕ್ಕಲಕೋಟೆ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ.
ಧಾರವಾಡ: ಶಾರ್ಟ್ಸರ್ಕ್ಯೂಟ್ನಿಂದ ಗ್ಯಾರೇಜ್ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ವಸ್ತುಗಳು ಸುಟ್ಟು ಭಸ್ಮವಾಗಿರುವಂತಹ ಘಟನೆ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ನೂಲ್ವಿ ಕ್ರಾಸ್ನಲ್ಲಿ ನಡೆದಿದೆ. ದಾವಲಸಾಬ್ ದೊಡ್ಡಮನಿ ಎಂಬುವರಿಗೆ ಸೇರಿದ ಗ್ಯಾರೇಜ್ ಭಸ್ಮವಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗಾಹುತಿ ಆಗಿದೆ. ಸೂಕ್ತ ಪರಿಹಾರ ನೀಡುವಂತೆ ದಾವಲಸಾಬ್ ದೊಡ್ಡಮನಿ ಮನವಿ ಮಾಡಿದ್ದಾರೆ. ಹುಬ್ಬಳ್ಳಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.