AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಪೊಲೀಸ್ ಪಬ್ಲಿಕ್ ಐ ಅಪ್ಲಿಕೇಶನ್ ದುರುಪಯೋಗವಾಗ್ತಿದೆ, ಸಾರ್ವಜನಿಕರು ಎಚ್ಚರವಹಿಸಿ!

Bangalore Police Public Eye Violation: ಕನಕಪುರದ ಕೆರಳಾಳು ಸಂದ್ರದಲ್ಲಿ ಲೋಕೇಶ್ ಎಂಬ ಸಾರ್ವಜನಿಕ ಪಾತ್ರಧಾರಿಯಿಂದ 5 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಗ್ರಾಮಸ್ಥರು ಹೆಲ್ಮೆಟ್ ಇಲ್ಲದೇ ತಿರುಗಾಡುವ ದೃಶ್ಯಗಳನ್ನು ತನ್ನ ಮನೆಗೆ ಹಾಕಿಸಿರುವ ಸಿಸಿಟಿವಿ ಮೂಲಕ ಸೆರೆ ಹಿಡಿದು ಅದನ್ನೇ ಪೊಲೀಸ್ ಪಬ್ಲಿಕ್ ಐ ಅಪ್ಲಿಕೇಶನ್ ಗೆ ಅಪ್ಲೋಡ್ ಮಾಡುವುದು ಈತನ ಕಾಯಕವಾಗಿದೆ. 

ಬೆಂಗಳೂರು ಪೊಲೀಸ್ ಪಬ್ಲಿಕ್ ಐ ಅಪ್ಲಿಕೇಶನ್ ದುರುಪಯೋಗವಾಗ್ತಿದೆ, ಸಾರ್ವಜನಿಕರು ಎಚ್ಚರವಹಿಸಿ!
ಗ್ರಾಮದ ಯುವಕ ಲೋಕೇಶ್ - ಪೊಲೀಸ್ ಪಬ್ಲಿಕ್ ಐ ಅಪ್ಲಿಕೇಶನ್ ದುರುಪಯೋಗ
ಸೈಯ್ಯದ್​ ನಿಜಾಮುದ್ದೀನ್​, ರಾಮನಗರ
| Edited By: |

Updated on: Dec 05, 2023 | 1:10 PM

Share

ರಾಮನಗರ: ಪೊಲೀಸ್ ಪಬ್ಲಿಕ್ ಐ ಅಪ್ಲಿಕೇಶನ್ ಜಾರಿಗೆ ತಂದಾಗ ಜನ ಅದರಲ್ಲೂ ವಾಹನ ಸವಾರರು ಅದರ ಬಗ್ಗೆ ತುಸು ಜಾಗ್ರತೆ ವಹಿಸಿದರು. ಆದರೆ ಈಗ ಆ ಪೊಲೀಸ್ ಪಬ್ಲಿಕ್ ಐ ಗೆ ದೃಷ್ಟಿ ತಾಕಿದೆ. ಖುದ್ದು ಆ ಅಪ್ಲಿಕೇಶನ್ ದುರುಪಯೋಗವಾಗ್ತಿದೆ. ಹಾಗಾಗಿ ಜನ ಈಗ ಅದರ ಬಗ್ಗೆ ಎಚ್ಚರವಹಿಸುತ್ತಿದ್ದಾರೆ. ಅದೇನು ಮಾಡುತ್ತಿದೆ ಎಂದು ಅದರ ಮೇಲೆಯೇ ಒಂದು ಕಣ್ ಇಡುವಂತೆ ಆಗಿದೆ. ಅಂದಹಾಗೆ, ಟ್ರಾಫಿಕ್ ವಯಲೇಷನ್ (Traffic Violation) ತಪ್ಪಿಸಲು ಸಾರ್ವಜನಿಕರೇ ದಂಡ ಹಾಕುವ ಅಸ್ತ್ರವೇ ಪಬ್ಲಿಕ್ ಐ ಆ್ಯಪ್ (Bangalore Police Public Eye app). ಊರಿನವರ ದ್ವೇಷ ಭುಗಿಲೆದ್ದಿದ್ದು ಜನೋಪಯೋಗಿ ಪೊಲೀಸ್ ಪಬ್ಲಿಕ್ ಐ ಸಾಧನದಿಂದ ಸಿಕ್ಕ ಸಿಕ್ಕವರ ಮೇಲೆ ದಂಡ ಪ್ರಯೋಗ ಆಗುತ್ತಿದೆ. ಊರಿಗೆ ನೀರು ಬಿಡುವವನಿಗೆ 45 ಸಾವಿರ ಬಿಲ್ ಹಾಕಲಾಗಿದೆ. ರಾಮನಗರ ಜಿಲ್ಲೆ ಕನಕಪುರ ತಾಲೂಕಿನ (Kanakapura Police) ಕೆರಳಾಳು ಸಂದ್ರದಲ್ಲಿ ಈ ಘಟನೆ ನಡೆದಿದೆ. ಲೋಕೇಶ್ ಎಂಬುವವನಿಂದ 5 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಗ್ರಾಮಸ್ಥರು ಹೆಲ್ಮೆಟ್ ಇಲ್ಲದೇ ತಿರುಗಾಡುವ ದೃಶ್ಯ ಸೆರೆ ಹಿಡಿದು ಅದನ್ನು ಪೊಲೀಸ್ ಪಬ್ಲಿಕ್ ಐ ಅಪ್ಲಿಕೇಶನ್ ಗೆ ಅಪ್ಲೋಡ್ ಮಾಡುವುದು. ಕೇವಲ ನಾಲ್ಕೇ ತಿಂಗಳಲ್ಲಿ ಬರೊಬ್ಬರಿ ಐದು ಲಕ್ಷ ರೂಪಾಯಿಯಷ್ಟು ‌ದಂಡ ಹಾಕಿದ್ದಾನೆ ಭೂಪ ಲೋಕೇಶ್.

ವಾಹನದ ಮೇಲೆ ಕುಳಿತು ಮೊಬೈಲ್ ಮಾತನಾಡಿದ್ದಕ್ಕೂ ದಂಡ ಹಾಕಲಾಗಿದೆ. ಶಾಲಾ ಮಕ್ಕಳು ತಂದೆಯೊಂದಿಗೆ ವಾಹನದಲ್ಲಿ ಎಲ್ಲ ಎಚ್ಚರಿಕೆ ವಹಿಸಿ ಶಾಲೆಗೆ ಹೋಗುತ್ತಿದ್ದರೂ ದಂಡ ಪ್ರಯೋಗ ಮಾಡಲಾಗಿದೆ.

ಇನ್ನು ಗ್ರಾಮಸ್ಥರು ತಮ್ಮ ಹೆಸರಿಗೆ ಬಿಲ್ ಬಂದಾಗ ಶಾಕ್ ಆಗಿದ್ದಾರೆ. ತಾವು ಯಾವತ್ತೂ ಸಿಟಿಗೆ ಹೋಗೇ ಇಲ್ಲ, ಟ್ರಾಫಿಕ್ ರೂಲ್ಸ್ ಮುರಿದೇ‌ ಇಲ್ಲ ಅಂತ ಗ್ರಾಮಸ್ಥರು ಆಕ್ರೋಶಭರಿತರಾಗಿ ವಾದ ಮಂಡಿಸುತ್ತಿದ್ದಾರೆ. ಹೇಗೆ ದಂಡ‌‌ ಬಿತ್ತು ಅಂತ ನೋಡಿದಾಗ ಲೊಕೇಶನ್​​ ಲೊಕೇಶನ ಕಡೆಗೆ ಸಾಗಿದೆ. ಅವನ ಕುತಂತ್ರ ಬೆಳಕಿಗೆ ಬಂದಿದೆ. ಮನೆ ಮುಂದೆ ಸಿಸಿಟಿವಿ ಹಾಕಿಸಿರುವ ಲೊಕೇಶ, ಮನೆ ಮುಂದಿನಿಂದ ತೆರಳವು ಗ್ರಾಮಸ್ಥರಿಗೆ ದಂಡ ನಿರಂತರವಾಗಿ ದಂಡ ಹಾಕುವುದದನ್ನೆ ಕಾಯಕವಾಗಿಸಿಕೊಂಡಿದ್ದಾನೆ.

ಬೈಕ್, ಕಾರು, ಆಟೋದಲ್ಲಿ ತೆರಳಿದರೂ ಟ್ರಾಫಿಕ್ ವಯಲೇಷನ್ ಅಂತ ಫೊಟೊ ಅಪ್ಲೋಡ್ ಮಾಡಿಬಿಡುತ್ತಿದ್ದಾನೆ ಈ ಆಸಾಮಿ. ವಾಹನವೇ 20 ಸಾವಿರ ರೂಪಾಯಿ ಬಾಳಲ್ಲ, ಅದಕ್ಕೂ 40‌ ಸಾವಿರ ದಂಡ ಅಂದ್ರೆ ಹೇಗೆ ಎಂದು ಜನ ತಮ್ಮ ತಲೆ ಮೇಲೆ ಕೈ ಹೊತ್ತು ಕುಳಿತುಬಿಟ್ಟಿದ್ದಾರೆ. ಕೊನೆಗೆ ಎಚ್ಚೆತ್ತು ಲೊಕೇಶನ ವಿರುದ್ದ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯ ಮಾಡುತ್ತಿದ್ದಾರೆ. ಇದೆ ವೇಳೆ ಪಬ್ಲಿಕ್ ಐ ಆ್ಯಪ್ ಅನ್ನೂ ಬಂದ್ ಮಾಡುವಂತೆ ತಾಕೀತು ಮಾಡಿದ್ದಾರೆ.

Also Read: ಗಂಡಸರೇ ಹುಷಾರು! ದ್ವಿಚಕ್ರ ವಾಹನದಲ್ಲಿ ಗೆಳತಿಯನ್ನು ಕರೆದೊಯ್ಯುವಾಗ ಸಿಸಿಟಿವಿ ಕ್ಯಾಮೆರಾ ಕಣ್ಣಿಗೆ ಬಿದ್ದರೆ ಮುಂದೆ ಸಂಸಾರದಲ್ಲಿ ಬಿರುಗಾಳಿ ಏಳುವುದು ಖಚಿತ!

2017 ರಲ್ಲಿ ಬೆಂಗಳೂರು ನಗರಕ್ಕೆ ಜಾರಿಗೆ ಬಂದಿರುವ ಪಬ್ಲಿಕ್ ಐ ಆ್ಯಪ್, ಈವರೆಗೂ 18 ಲಕ್ಷಕ್ಕೂ ಅಧಿಕ ಪ್ರಕರಣಗಳು ಪಬ್ಲಿಕ್ ಐ ಮುಖಾಂತರ ದಾಖಲುಗೊಂಡಿವೆ. ಅದರಲ್ಲಿ 13 ಲಕ್ಷ 50 ಸಾವಿರದಷ್ಟು ಪ್ರಕರಣಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ.

ದಾಖಲಾದ ಒಟ್ಟು ಪ್ರಕರಣಗಳ ಪೈಕಿ ಶೇ 74 ದೂರು ದಾಖಲು ಮಾಆಡಿಕೊಳ್ಳಲಾಗಿದೆ. ಆದರೆ ವ್ಯಕ್ತಿಗತ ಕಾರಣಕ್ಕೆ ದಂಡ ಹಾಕಲಾಗುತ್ತಿರುವ ಬಗ್ಗೆ ಸಾಕಷ್ಟು ಆಕ್ಷೇಪಣೆಗಳು ಸಾರ್ವಜನಿಕರಿಂದ ಪಬ್ಲಿಕ್ ಐ ವಿರುದ್ಧ ಕೇಳಿಬಂದಿದೆ. ಈ ಬಗ್ಗೆ ಗ್ರಾಮಸ್ಥರಿಂದ ಮನವಿ ಸ್ವೀಕರಿಸಿರುವ ಕನಕಪುರ ಪೊಲೀಸರು, ಕೂಡಲೇ ಅದರ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತರ ಗಮನಕ್ಕೆ ತರೋದಾಗಿ ಭರವಸೆ ನೀಡಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Follow Us
ಕೆರೂರು PSI ಲೋಕಾಯುಕ್ತ ಬಲೆಗೆ: ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು
ಕೆರೂರು PSI ಲೋಕಾಯುಕ್ತ ಬಲೆಗೆ: ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ