ನೆಲಮಂಗಲ, ನವೆಂಬರ್ 12: ಮೂತ್ರ ವಿಸರ್ಜನೆಗೆ ಕಾರು ನಿಲ್ಲಿಸಿದ್ದ ವೇಳೆ ಮಂಗಳಮುಖಿ (transgenders) ಯರಿಂದ ವ್ಯಕ್ತಿ ಬಳಿ ಕಳ್ಳತನ ಮಾಡಿರುವಂತಹ ಘಟನೆ ಬೆಂಗಳೂರು ಉತ್ತರ ತಾಲೂಕಿನ ಮಾಕಳಿ ಬಳಿ ರಾತ್ರಿ 11:30ಕ್ಕೆ ನಡೆದಿದೆ. ಬೇಗೂರಿನ ಮಂಜೇಶ್ ಎಂಬುವವರ ಬಳಿಯಿದ್ದ 4.5 ಲಕ್ಷ ರೂ. ಚಿನ್ನಭರಣ ದೋಚಿ ಪರಾರಿ ಆಗಿದ್ದಾರೆ. ಸಹನ, ಮಂಜುಳ, ರಿಷೀಕಾ, ಖುಷಿ ಆರೋಪಿ ಮಂಗಳಮುಖಿಯರು. ನಾಪತ್ತೆಯಾದ ಮಂಗಳಮುಖಿಯರ ಪತ್ತೆಗಾಗಿ ಪೊಲೀಸರಿಂದ ಕಾರ್ಯಚರಣೆ ಆರಂಭಿಸಿದ್ದು, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಗ್ರಾಮಗಳಲ್ಲಿ ಅಕ್ರಮವಾಗಿ ಗ್ರಾಮಗಳಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ 4 ಜನರನ್ನು ಬಂಧಿಸಲಾಗಿದೆ. ನೆಲಮಂಗಲ ಅಬಕಾರಿ ದಳ ಕಾರ್ಯಚರಣೆ ಮೂಲಕ ಕೆಂಗಲ್ ಕೆಂಪೋಹಳ್ಳಿ ಹನುಮಂತರಾಯಪ್ಪ(50), ಬರೇಗನಹಳ್ಳಿ ಗಂಗಮ್ಮ(65), ನಿಡವಂದ ಶಾರದಮ್ಮ(49), ಘಂಟೆಹೊಸಹಳ್ಳಿ ಗೋವಿಂದರಾಜು(45) ಬಂಧಿಸಿದ್ದಾರೆ. 48 ಸಾವಿರ ಮೌಲ್ಯದ 89 ಲೀಟರ್ ಮದ್ಯ ಹಾಗೂ 10 ಲೀಟರ್ ಬಿಯರ್ ಜಪ್ತಿ ಮಾಡಿದ್ದಾರೆ. ಚಿಲ್ಲರೆ ಅಂಗಡಿ ಹಾಗೂ ಮನೆಗಳಲ್ಲಿ ಲೈಸೆನ್ಸ್ ಇಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ.
ಉತ್ತರ ಕನ್ನಡ, ನಿನ್ನೆ ರಾತ್ರಿ ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಯುವಕರ ಗುಂಪಿನಿಂದ ಹಲ್ಲೆ ಮಾಡಿರುವಂತಹ ಘಟನೆ ಬೈತಖೋಲ್ ಪ್ರದೇಶದಲ್ಲಿ ನಡೆದಿದೆ. ಮನೆಗೆ ತೆರಳಿ ಎಂದು ಬುದ್ದಿ ಹೇಳಿದಕ್ಕೆ ಹಲ್ಲೆ ಮಾಡಿದ್ದಾರೆ. ಗಾಯಾಳು ಪೊಲೀಸರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು, ನಗರ ಠಾಣೆ ಪೊಲೀಸರಿಂದ 11 ಜನರನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಉಡುಪಿ: ಚಾಕುವಿನಿಂದ ಇರಿದು ಒಂದೇ ಕುಟುಂಬದ ನಾಲ್ವರ ಹತ್ಯೆ: ದುಷ್ಕರ್ಮಿ ಪರಾರಿ
ಗಣೇಶ ಕುರಿಯವರ್, ಹರೀಶ ಗವಾಣಿಕರ ಗಾಯಗೊಂಡ ಪೊಲೀಸ್ ಸಿಬ್ಬಂದಿಗಳು. ಸುನೀಲ ಗೌಡ, ಮಂಜುನಾಥ ಗೌಡ, ಸಂದೇಶ್, ರಘುವೀರ, ನಿತಿನ್ ಗೌಡ, ಗಗನ ಗೌಡ, ಅನುರಾಗ ಗೌಡ, ಉಮೇಶ್ ಜನಕಪ್ರಸಾದ್, ವಿತೇಶ ಗೌಡ, ಯುವರಾಜ ಗೌಡ, ಸುಚಿತ ಗೌಡ ಬಂಧಿತರು. ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ನೆಲಮಂಗಲ: ಹೆದ್ದಾರಿಯಲ್ಲಿ ದರೋಡೆಗೆ ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ನೆಲಮಂಗಲ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಾಗಲಗುಂಟೆ ಕಿರಣ್ (24), ಮೋಟಗಾನಹಳ್ಳಿ ಮಹದೇವ್ (23), ಬೆಂಗಳೂರಿನ ಮಾಳಗಾಳ ನಿವಾಸಿ ರಕ್ಷಿತ್ (23) ಬಂಧಿತ ಆರೋಪಿಗಳು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:42 pm, Sun, 12 November 23