ವೈದ್ಯಕೀಯ ಸೀಟು ಕೊಡಿಸುವುದಾಗಿ ಭರವಸೆ: ಗೃಹ ಸಚಿವರ ಆಪ್ತನೆಂದು ಹೇಳಿ ಲಕ್ಷಾಂತರ ರೂ ವಂಚನೆ
ಗೃಹ ಸಚಿವ ಡಾ.ಪರಮೇಶ್ವರ ಅವರ ಆಪ್ತರೆಂದು ಹೇಳಿಕೊಂಡು ಓರ್ವ ವ್ಯಕ್ತಿ 4.5 ಲಕ್ಷ ರೂ ವಂಚಿಸಿರುವಂತಹ ಘಟನೆ ಬೆಳಕಿಗೆ ಬಂದಿದೆ. ಸಚಿವರೊಂದಿಗಿನ ಫೋಟೋಗಳನ್ನು ತೋರಿಸುವ ಮೂಲಕ ತುಮಕೂರಿನ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನಲ್ಲಿ ಪಿಜಿ ಸೀಟು ಕೊಡಿಸುವುದಾಗಿ ಭರವಸೆ ನೀಡಿ 53 ವರ್ಷದ ವ್ಯಕ್ತಿಯೊಬ್ಬರಿಂದ ಲಕ್ಷ ಲಕ್ಷ ರೂ. ವಂಚಿಸಿದ್ದಾನೆ.
ಬೆಂಗಳೂರು, ನವೆಂಬರ್ 12: ಗೃಹ ಸಚಿವ ಡಾ.ಪರಮೇಶ್ವರ (Dr Parameshwara) ಅವರ ಆಪ್ತರೆಂದು ಹೇಳಿಕೊಂಡು ಓರ್ವ ವ್ಯಕ್ತಿ 4.5 ಲಕ್ಷ ರೂ ವಂಚಿಸಿರುವಂತಹ ಘಟನೆ ಬೆಳಕಿಗೆ ಬಂದಿದೆ. ಸಚಿವರೊಂದಿಗಿನ ಫೋಟೋಗಳನ್ನು ತೋರಿಸುವ ಮೂಲಕ ತುಮಕೂರಿನ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನಲ್ಲಿ ಪಿಜಿ ಸೀಟು ಕೊಡಿಸುವುದಾಗಿ ಭರವಸೆ ನೀಡಿ 53 ವರ್ಷದ ವ್ಯಕ್ತಿಯೊಬ್ಬರಿಂದ 4.5 ಲಕ್ಷ ರೂ. ವಂಚಿಸಿದ್ದಾನೆ. ಅಷ್ಟೇ ಅಲ್ಲದೇ ಕಾಲೇಜಿನಿಂದ ನಕಲಿ ಶುಲ್ಕ ರಶೀದಿಯನ್ನು ಸಹ ಒದಗಿಸುವ ಮೂಲಕ ವಂಚನೆ ಮಾಡಿದ್ದಾರೆ.
ತುಮಕೂರಿನ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನಿಂದ ಪ್ರವೇಶಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಮಾಹಿತಿ ಅಥವಾ ಸಂದೇಶಗಳು ಬಾರದಿದ್ದಾಗ ವಂಚನೆಗೆ ಒಳಗಾದ ವ್ಯಕ್ತಿ ಮತ್ತು ಅವರ ಮಗಳು ಕಾಲೇಜಿಗೆ ಭೇಟಿ ನೀಡಿದ್ದಾರೆ. ಈ ವೇಳೆ ವಂಚನೆಯ ಬಗ್ಗೆ ತಿಳಿದುಬಂದಿದೆ.
ಇದನ್ನೂ ಓದಿ: ಕೆಲಸ ಮುಗಿಸಿ ತೆರಳುತ್ತಿದ್ದ ಯುವಕನ ಮೇಲೆ ಹಲ್ಲೆ: ಏಕಾಏಕಿ ಎರಗಿ ದೊಚಿದ ಖದೀಮರು
ರಾಜರಾಜೇಶ್ವರಿನಗರದ ನಿವಾಸಿ ಪ್ರಿಯಾ (ಹೆಸರು ಬದಲಿಸಲಾಗಿದೆ) ಎಂಬಿಬಿಎಸ್ ಮುಗಿಸಿದ್ದು, ಪಿಜಿ ಕೌನ್ಸೆಲಿಂಗ್ ಸಮಯದಲ್ಲಿ ಪ್ರಿಯಾ ಸೀಟು ಹುಡುಕುತ್ತಿದ್ದಳು. ಪ್ರಿಯಾಳ ತಂದೆ ಮನೋಜ್ (ಹೆಸರು ಬದಲಾಯಿಸಲಾಗಿದೆ), ಆತನ ಸಹವರ್ತಿ ಲೋಕೇಶ್ವರ ನಾಯಕ್ ಮೂಲಕ ಮೊಹಮ್ಮದ್ ಜುಬೇರ್‌ಗೆ ಪರಿಚಯರಾಗಿದ್ದಾರೆ. ಜುಬೇರ್ ತನ್ನ ಮಗಳಿಗೆ ವೈದ್ಯಕೀಯ ಕಾಲೇಜಿನಲ್ಲಿ ಪಿಜಿ ಸೀಟು ಪಡೆಯಲು ಸಹಾಯ ಮಾಡಬಹುದೆಂದು ನಾಯಕ್ ಮನೋಜ್‌ಗೆ ಕೇಳಿದ್ದಾರೆ.
ಕೊರಟಗೆರೆ ನಿವಾಸಿ ಜುಬೇರ್ ಅವರು ಪ್ರಿಯಾ ಮತ್ತು ಮನೋಜ್ ಅವರನ್ನು ಜಯನಗರದ ರೆಸ್ಟೋರೆಂಟ್‌ನಲ್ಲಿ ಭೇಟಿಯಾಗಿ ತುಮಕೂರಿನ ಕಾಲೇಜಿನಲ್ಲಿ ವೈದ್ಯಕೀಯ ಸೀಟು ನೀಡುವುದಾಗಿ ಭರವಸೆ ನೀಡಿದ್ದರು ಎಂದು ಅಧಿಕಾರಿ ಹೇಳಿದ್ದಾರೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಡೀಪ್ ಫೇಕ್ ಪ್ರಕರಣ: ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯ ಫೋಟೋ ಎಡಿಟ್ ಮಾಡಿ ಬ್ಯ್ಲಾಕ್ಮೇಲ್
ಸೀಟು ಖಚಿತಪಡಿಸಿಕೊಳ್ಳಲು ಜುಬೇರ್, ಮನೋಜ್ ಬಳಿ 4.5 ಲಕ್ಷ ರೂ. ತನ್ನ ಬ್ಯಾಂಕ್ ಖಾತೆ ಮತ್ತು ಪೇಟಿಎಂ ಖಾತೆಗೆ ಹಣ ವರ್ಗಾಯಿಸಿದ್ದಾನೆ. ನಂತರ ಜುಬೇರ್ ಅವರಿಗೆ ಕಾಲೇಜು ಹೆಸರು ಮತ್ತು ಪ್ರಮಾಣ ಪತ್ರಗಳ ಶುಲ್ಕದ ರಸೀದಿ ನೀಡಿದ್ದು, ಅದು ನಕಲಿ ಎಂದು ತಿಳಿದುಬಂದಿದೆ. ಸದ್ಯ ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.