ರಾಯಚೂರು: ಒಗ್ಗರಣೆ ತಂದು ಕೊಡಲು ತಡ ಮಾಡಿದಕ್ಕೆ ಹೋಟೆಲ್ ಮಾಲೀಕನ ಮುಖಕ್ಕೆ ಎಣ್ಣೆ ಎರಚಿ ವಿಕೃತಿ
ಭೀಮಾ ನಾಯಕ್ ಎಂಬಾತ ಹೋಟೆಲ್ನಲ್ಲಿ ತಿಂಡಿ ತಿನ್ನಲು ಬಂದಿದ್ದು ಒಗ್ಗರಣೆ ಆರ್ಡರ್ ಮಾಡಿದ್ದ. ಈ ವೇಳೆ ಒಗ್ಗರಣೆ ಕೊಡುವಲ್ಲಿ ತಡವಾಗಿದಕ್ಕೆ ಹೊಟೆಲ್ ಮಾಲೀಕ ರಂಗಯ್ಯ ಶೆಟ್ಟಿ ಎಂಬುವವರ ಮುಖಕ್ಕೆ ಎಣ್ಣೆ ಎರಚಿ ವಿಕೃತಿ ಮೆರೆದಿದ್ದಾನೆ. ಗಾಯಾಳು ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಯಚೂರು, ನ.12: ತಿಂಡಿ ಕೊಡಲು ಲೇಟ್ ಮಾಡಿದಕ್ಕೆ ಗ್ರಾಹಕನೋರ್ವ ಹೋಟೆಲ್ ಮಾಲೀಕನ ಮುಖಕ್ಕೆ ಎಣ್ಣೆ ಎರಚಿ ವಿಕೃತಿ ಮೆರೆದಿರುವ ಘಟನೆ ರಾಯಚೂರು (Raichur) ಜಿಲ್ಲೆ ಮಾನ್ವಿ ತಾಲೂಕಿನ ರಾಜೋಳ್ಳಿ ಗ್ರಾಮದಲ್ಲಿ ನಡೆದಿದೆ. ಭೀಮಾ ನಾಯಕ್ ಎಂಬಾತ ಹೋಟೆಲ್ನಲ್ಲಿ ತಿಂಡಿ ತಿನ್ನಲು ಬಂದಿದ್ದು ಒಗ್ಗರಣೆ ಆರ್ಡರ್ ಮಾಡಿದ್ದ. ಈ ವೇಳೆ ಒಗ್ಗರಣೆ ಕೊಡುವಲ್ಲಿ ತಡವಾಗಿದಕ್ಕೆ ಹೊಟೆಲ್ ಮಾಲೀಕ ರಂಗಯ್ಯ ಶೆಟ್ಟಿ ಎಂಬುವವರ ಮುಖಕ್ಕೆ ಎಣ್ಣೆ ಎರಚಿ ವಿಕೃತಿ ಮೆರೆದಿದ್ದಾನೆ. ಗಾಯಾಳು ಆಸ್ಪತ್ರೆಗೆ ದಾಖಲಾಗಿದ್ದು ಈ ಘಟನೆ ಸಂಬಂಧ ಮಾನ್ವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸುವ ಸಾಧ್ಯತೆ ಇದೆ.
ರಾಜೋಳ್ಳಿ ಗ್ರಾಮದ ಭೀಮಾ ನಾಯಕ್ ಎಂಬಾತ ಬೆಳ್ಳಂ ಬೆಳಗ್ಗೆ ಹೋಟೆಲ್ಗೆ ಬಂದು ಇಡ್ಲಿ ಕೇಳಿದ್ದ. ಆಗ ಇಡ್ಲಿ ಇಲ್ಲ ಎಂದು ಹೋಟೆಲ್ ಮಾಲೀಕ ರಂಗಯ್ಯ ಶೆಟ್ಟಿ ವಾಪಸ್ ಕಳಿಸಿದ್ರು. ಸ್ವಲ್ಪ ಸಮಯದ ನಂತರ ಮತ್ತೆ ಬಂದ ಭೀಮಾ ನಾಯಕ್ ಒಗ್ಗರಣೆ ಮಿರ್ಚಿ ಕೊಡುವಂತೆ ಕೇಳಿದ್ದ. ಈ ವೇಳೆ ಒಗ್ಗರಣೆ ತರಲು ತಡವಾಗಿದೆ. ಇದರಿಂದ ಸಿಟ್ಟಿಗೆದ್ದ ಭೀಮಾ ನಾಯಕ್, ಉಪ್ಪಿಟ್ಟು ಮಾಡಲು ಇಟ್ಟಿದ್ದ ಬಿಸಿ ಎಣ್ಣೆಯನ್ನು ಹೋಟೆಲ್ ಮಾಲೀಕನಿಗೆ ಎರಚಿ ವಿಕೃತಿ ಮೆರೆದಿದ್ದಾನೆ. ಬಳಿಕ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ರಂಗಯ್ಯ ಶೆಟ್ಟಿ ಮುಖಕ್ಕೆ ಸುಟ್ಟ ಗಾಯಗಳಾಗಿದ್ದು ಮಾನ್ವಿ ಸರಕಾರಿ ಆಸ್ಪತ್ರೆಗೆ ಗಾಯಾಳು ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಾನ್ವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಬಳ್ಳಾರಿ: ಉಸ್ತುವಾರಿ ಸಚಿವರಿಂದ ಬರ ವೀಕ್ಷಣೆ: 60 ಸಾವಿರ ಹೆಕ್ಟೇರ್ ಬೆಳೆ ಹಾನಿ, ಅನುದಾನಕ್ಕೆ ರೈತರು ಒತ್ತಾಯ
ಜಮೀನು ವಿವಾದ, ಖಾಕಿ ಎದುರೇ ಬಡಿದಾಟ
ಜಮೀನು ವಿವಾದ ಪ್ರಕರಣದಲ್ಲಿ ಪೊಲೀಸರ ಎದುರೇ ಬಡಿದಾಡಿಕೊಂಡಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ತಮ್ಮೇನಹಳ್ಳಿಪಾಳ್ಯದಲ್ಲಿ ಘಟನೆ ನಡೆದಿದ್ದು, ರುಕ್ಮಿಣಿ ದೇವಿ, ರವೀಶ್ ಗೌಡ ನಡುವೆ ಜಮೀನು ವಿವಾದ ಇತ್ತು. ಇಬ್ಬರ ಜಗಳ ಪೊಲೀಸರ ಬಳಿ ಹೋಗಿತ್ತು. ಆಗ ಖಾಕಿ ಎದುರೇ ಎರಡು ಕಡೆಯವರ ಮಧ್ಯೆ ಗಲಾಟೆ ಶುರುವಾಗಿತ್ತು. ರಸ್ತೆಯಲ್ಲೇ ಪೊಲೀಸರ ಎದುರೇ ಬಡಿದಾಡಿಕೊಂಡಿದ್ದಾರೆ. ಆದ್ರೂ ಪೊಲೀಸರು ಮಾತ್ರ ಸೈಲೆಂಟ್ ಆಗಿದ್ರು.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ