ಬಳ್ಳಾರಿ: ಉಸ್ತುವಾರಿ ಸಚಿವರಿಂದ ಬರ ವೀಕ್ಷಣೆ: 60 ಸಾವಿರ ಹೆಕ್ಟೇರ್ ಬೆಳೆ ಹಾನಿ, ಅನುದಾನಕ್ಕೆ ರೈತರು ಒತ್ತಾಯ

ಬಳ್ಳಾರಿ ಜಿಲ್ಲೆಯಲ್ಲಿ ಬರ ಅಧ್ಯಯನ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದು ಸರ್ಕಾರಕ್ಕೆ ಎಷ್ಟು ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ ಅಂತ ತಿಳಿಸಲಿದ್ದಾರೆ. ಜೊತೆಗೆ ಸರ್ಕಾರ ಹೆಚ್ಚಿನ ಅನುದಾನ ಘೋಷಿಸುವಂತೆ ರೈತರು ಒತ್ತಾಯಿಸಿದ್ದಾರೆ. ಜಿಲ್ಲೆಯಲ್ಲಿ ಸುಮಾರು 60 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಕೇಂದ್ರದಿಂದ ಈವರಗೆ ಯಾವುದೇ ಪರಿಹಾರ ಘೋಷಣೆ ಆಗಲಿಲ್ಲ.

ಬಳ್ಳಾರಿ: ಉಸ್ತುವಾರಿ ಸಚಿವರಿಂದ ಬರ ವೀಕ್ಷಣೆ: 60 ಸಾವಿರ ಹೆಕ್ಟೇರ್ ಬೆಳೆ ಹಾನಿ, ಅನುದಾನಕ್ಕೆ ರೈತರು ಒತ್ತಾಯ
ಉಸ್ತುವಾರಿ ಸಚಿವ ಬಿ‌. ನಾಗೇಂದ್ರ
Follow us
ವಿನಾಯಕ ಬಡಿಗೇರ್​, ಉತ್ತರ ಕನ್ನಡ
| Updated By: ಗಂಗಾಧರ​ ಬ. ಸಾಬೋಜಿ

Updated on:Nov 12, 2023 | 9:53 AM

ಬಳ್ಳಾರಿ, ನವೆಂಬರ್​​ 12: ರಾಜ್ಯದಲ್ಲಿ ತಾಂಡವಾಡುತ್ತಿರುವ ಬರ (Drought) ದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ಮಧ್ಯೆ ಬರದ ಬೀಜ ಬಿತ್ತಿ ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಪಕ್ಷಗಳು ಮುಂದಾಗಿವೆ. ಬರ ಪರಿಹಾರದ ವಿಚಾರವಾಗಿ ಕಾಂಗ್ರೆಸ್ ಪಕ್ಷ ಕೇಂದ್ರದಿಂದ ಅನುದಾನ ಬಂದಿಲ್ಲ ಅಂತಾ ಹೇಳಿದ್ರೆ, ಇತ್ತ ಬಿಜೆಪಿ ಕಾಂಗ್ರೆಸ್ ಎಷ್ಟು ಪರಿಹಾರ ಕೊಟ್ಟಿದೆ ಅಂತಾ ಪ್ರಶ್ನೆ ಮಾಡುತ್ತಿದೆ. ಈ ರಾಜಕೀಯ ಕೆಸರು ಎರಚಾಟದ ನಡುವೆ ರೈತರು ಕಣ್ಣೀರಿಡುವ ಪರಿಸ್ಥಿತಿ ಬಂದಿದೆ.

ಬಿಜೆಪಿ ಬರ ಅಧ್ಯಯನ ಅಂತ ಪ್ರತಿ ಜಿಲ್ಲಾವಾರು ಬರ ವೀಕ್ಷಣೆಗೆ ಮುಂದಾಗಿದ್ದರೆ. ಇತ್ತ ಕಾಂಗ್ರೆಸ್ ಕೂಡ ತಮ್ಮ ಉಸ್ತುವಾರಿ ಸಚಿವರುಗಳಿಂದ ಬರ ಅಧ್ಯಯನ ನಡೆಸುತ್ತಿದೆ. ಸರ್ಕಾರದ ಸೂಚನೆಯಂತೆ ಬಳ್ಳಾರಿ ಉಸ್ತುವಾರಿ ಸಚಿವ ಬಿ‌. ನಾಗೇಂದ್ರ ನಿನ್ನೆ ಬಳ್ಳಾರಿ ಜಿಲ್ಲೆಯ ಐದು ತಾಲೂಕುಗಳಿಗೆ ಭೇಟಿ ನೀಡಿ ಬರ ಅಧ್ಯಯನ ನಡೆಸಿದ್ದಾರೆ.

60 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ

ಬರ ಅಧ್ಯಯನ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದು ಸರ್ಕಾರಕ್ಕೆ ಜಿಲ್ಲೆಯಲ್ಲಿ ಎಷ್ಟು ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ ಅಂತಾ ತಿಳಿಸಲಿದ್ದಾರೆ. ಜೊತೆಗೆ ಸರ್ಕಾರದಿಂದ ಹೆಚ್ಚಿನ ಅನುದಾನ ತರುತ್ತೇನೆ ಅಂತಾ ರೈತರಿಗೆ ಭರವಸೆ ನೀಡಿದ್ದಾರೆ. ಜಿಲ್ಲೆಯಲ್ಲಿ ಸುಮಾರು 60 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಕೇಂದ್ರದಿಂದ ಈವರಗೆ ಯಾವುದೇ ಪರಿಹಾರ ಘೋಷಣೆ ಆಗಲಿಲ್ಲ. ರಾಜ್ಯದಿಂದ ಬಳ್ಳಾರಿ ಜಿಲ್ಲೆಗೆ 7 ಕೋಟಿ ರೂ. ಘೋಷಣೆ ಮಾಡಲಾಗಿದೆ. ಹೆಚ್ಚಿನ ಅನುದಾನ ಸರ್ಕಾರ ನೀಡುತ್ತದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮಾರುವೇಷದಲ್ಲಿ ಬೈಕ್ ಮೇಲೆ RTO ಕಚೇರಿಗೆ ಬಂದ ಶಾಸಕ, ಓಡಿ ಹೋದ ಬ್ರೋಕರುಗಳು, ಚುನಾವಣೆ ಸ್ಪರ್ಧೆಗೆ ಯತ್ನಿಸಿದ್ದ ಇನ್ಸ್​ಪೆಕ್ಟರ್​​ಗೆ ವಾರ್ನಿಂಗ್!

ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯಲ್ಲಿ ಪ್ರಮುಖವಾಗಿ ಹತ್ತಿ, ತೊಗರಿ, ಮೆಣಸಿನ ಕಾಯಿ, ಭತ್ತ ಸೇರಿದಂತೆ ಇನ್ನಿತರೆ ಬೆಳೆಗಳನ್ನ ಬೆಳೆಯಲಾಗುತ್ತದೆ. ಈ ವರ್ಷ ಮಳೆ ಸಂಪೂರ್ಣ ಕೈ ಕೊಟ್ಟಿದ್ದರಿಂದ ಎಲ್ಲ ಬೆಳೆಗಳು ಹಾನಿಯಾಗಿವೆ. ಎರಡು ಜಿಲ್ಲೆಯ ಹತ್ತು ತಾಲೂಕುಗಳನ್ನು ಸರ್ಕಾರ ಈಗಾಗಲೇ ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿದೆ. ಆದರೆ ಈವರೆಗೂ ಅವಳಿ ಜಿಲ್ಲೆಯ ರೈತರಿಗೆ ಬಿಡಿಗಾಸು ಪರಿಹಾರ ಬಂದಿಲ್ಲ.

ಇದನ್ನೂ ಓದಿ: ಇದು ಒಂದು ಗ್ರಾಮದ, ಒಬ್ಬ ರೈತನ ಯಶಸ್ಸಿನ ಕತೆಯಲ್ಲ-ಊರಿಗೇ ಊರು ಯಶಸ್ಸು ಕಂಡಿರುವ ಸುಂದರ ಬದುಕಿನ ಕತೆ! ಯಾವೂರು ಅದು?

ಐದು ಗ್ಯಾರಂಟಿಗಳನ್ನ ನಿಭಾಯಿಸುವಲ್ಲಿ ಸರ್ಕಾರ ರೈತರ ಸಂಕಷ್ಟಕ್ಕೆ ಸ್ಪಂದಿಸುವುದನ್ನ ಕಡೆಗಣಿಸುತ್ತಿದಿಯಾ ಎಂಬ ಅನುಮಾನ ಮೂಡುವಂತೆ ಮಾಡಿದೆ. ಈ ಬಗ್ಗೆ ಸಚಿವ ಬಿ.ನಾಗೇಂದ್ರ ಕೇಂದ್ರದಿಂದ 3700 ಕೋಟಿ ರೂ. ಪರಿಹಾರ ನೀಡಬೇಕಿದೆ. ಕೇಂದ್ರದ ತಂಡ ಬಂದು ಎಲ್ಲ ವೀಕ್ಷಣೆ ಮಾಡಿ ಹೋಗಿದೆ. ಆದರೆ ಈವರೆಗೂ ಪರಿಹಾರ ನೀಡಿಲ್ಲ.

ಬರಗಾಲದಲ್ಲೂ ರಾಜಕೀಯ ಮಾಡೋ ಮೂಲಕ ಬಿಜೆಪಿ ಆಟವಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇತ್ತ ರೈತರು ಮಾತ್ರ ಪರಿಹಾರದ ನಿರೀಕ್ಷೆಯಲ್ಲಿ ಜೀವನ ನಡೆಸುವಂತಾಗಿದೆ. ಶೀಘ್ರದಲ್ಲಿ ಪರಿಹಾರ ನೀಡಿ ಇಲ್ಲ ಉಗ್ರ ಪ್ರತಿಭಟನೆ ಎದುರಿಸಿ ಅಂತಾ ಎಚ್ಚರಿಕೆ ನೀಡಿದ್ದಾರೆ. ರಾಜಕೀಯ ಪಕ್ಷಗಳು ಕೇವಲ ತಮ್ಮ ರಾಜಕೀಯ ಬೆಳೆ ಬೇಯಿಸಿಕೊಳ್ಳದೆ ನಿಜವಾಗಿಯೂ ರೈತರ ಸಂಕಷ್ಟ ಸ್ಪಂದಿಸಬೇಕಿದೆ‌.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:53 am, Sun, 12 November 23