AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾರುವೇಷದಲ್ಲಿ ಬೈಕ್ ಮೇಲೆ RTO ಕಚೇರಿಗೆ ಬಂದ ಶಾಸಕ, ಓಡಿ ಹೋದ ಬ್ರೋಕರುಗಳು, ಚುನಾವಣೆ ಸ್ಪರ್ಧೆಗೆ ಯತ್ನಿಸಿದ್ದ ಇನ್ಸ್​ಪೆಕ್ಟರ್​​ಗೆ ವಾರ್ನಿಂಗ್!

Bellary Congress MLA Nara Bharath Reddy : ಬಳ್ಳಾರಿ ನಗರ ಶಾಸಕ ಭರತ್ ರೆಡ್ಡಿ ಬೈಕ್ ಮೇಲೆ ಗ್ರಾಹಕರಂತೆ ಬಂದು ಪರೀಕ್ಷೆ ಮಾಡಿದ್ದಾರೆ. ಈ ವೇಳೆ ಅಧಿಕಾರಿಗಳ ಕಳ್ಳಾಟ ಮತ್ತು ಬ್ರೋಕರ್ ಗಳ ಮೇಲಾಟ ಗೊತ್ತಾಗಿದೆ. ಕೆಲ ಬ್ರೋಕರ್ಗಳು ಶಾಸಕರನ್ನು ನೋಡಿದ ಕೂಡಲೇ ಓಡಿ ಹೋಗಿದ್ದಾರೆ.

ಮಾರುವೇಷದಲ್ಲಿ ಬೈಕ್ ಮೇಲೆ RTO ಕಚೇರಿಗೆ ಬಂದ ಶಾಸಕ, ಓಡಿ ಹೋದ ಬ್ರೋಕರುಗಳು, ಚುನಾವಣೆ ಸ್ಪರ್ಧೆಗೆ ಯತ್ನಿಸಿದ್ದ ಇನ್ಸ್​ಪೆಕ್ಟರ್​​ಗೆ ವಾರ್ನಿಂಗ್!
ಭ್ರಷ್ಟಾಚಾರದ ಕೂಪ ಬಳ್ಳಾರಿ ಅರ್ಟಿಓ ಕಚೇರಿಗೆ ಬಳ್ಳಾರಿ ಶಾಸಕ ಭರತ್ ರೆಡ್ಡಿ ಧಿಡೀರ್ ಭೇಟಿ! ಆಮೇಲೆ ಏನಾಯ್ತು?
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Nov 04, 2023 | 3:47 PM

Share

ನಿಯಂತ್ರಣಕ್ಕೆ ನಿಲುಕದಷ್ಟು ಬಳ್ಳಾರಿಯ ಆರ್ಟಿಓ ಕಚೇರಿ ಭ್ರಷ್ಟಾಚಾರದಿಂದ (RTO, Corruption) ತುಂಬಿತುಳುಕುತ್ತಿದೆ. ಯಾರೇ ಅಧಿಕಾರಕ್ಕೆ ಬಂದ್ರೂ, ಯಾರೇ ಹೋದ್ರು ಇದಕ್ಕೆ ಕಡಿವಾಣ ಹಾಕೋದಕ್ಕೆ ಆಗುತ್ತಿಲ್ಲ. ದಲ್ಲಾಳಿಗಳ ಕಾಟಕ್ಕೆ ಬೇಸತ್ತ ಜನರು ಅದೆಷ್ಟೋ ಬಾರಿ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಆದ್ರೇ, ದಿಢೀರನೇ ಗ್ರಾಹಕರಂತೆ ಬೈಕ್ ಮೇಲೆ ಬಂದ ಜನಪ್ರತಿನಿಧಿಯೊಬ್ಬರು ಅಧಿಕಾರಿಗಳ ಬೆವರಿಳಿಸಿದ್ದಾರೆ. ಅಷ್ಟಕ್ಕೂ ಅಲ್ಲಿ ನಡೆಯುತ್ತಿರೋ ದಂಧೆಯಾದ್ರೂ ಏನು? ಯಾಕಾಗಿ ಮಾರುವೇಷದಲ್ಲಿ ಬರಬೇಕಾಯ್ತು ಅನ್ನೋ ಡಿಟೈಲ್ ವರದಿ ಇಲ್ಲಿದೆ ನೋಡಿ.

ಹಿಂದಿನ ಸರ್ಕಾರದಲ್ಲಿ ಏನು ಮಾಡಿದ್ರೋ ಗೊತ್ತಿಲ್ಲ, ನಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರ ಮಾಡಿದ್ರೇ ನಡೆಯೋದಿಲ್ಲ… ಎಂದು ಜನರೆದುರೇ ಆರ್ಟಿಓ ಅಧಿಕಾರಿಗಳಿಗೆ ತೀವ್ರ ತರಾಟೆಗೆ ತೆಗೆದುಕೊಂಡ ಶಾಸಕ ಭರತ್ ರೆಡ್ಡಿ (Bellary Congress MLA Nara Bharath Reddy)… ಹೌದು, ರಾಜಾರೋಶವಾಗಿ ಇಲ್ಲಿ ಮೈನಿಂಗ್ ನಡೆಯುತ್ತಿದ್ದ ಕಾಲದಲ್ಲಿ ಬೆಂಗಳೂರು ಹೊರತು ಪಡಿಸಿದ್ರೇ ಬಳ್ಳಾರಿ ಮತ್ತು ಹೊಸಪೇಟೆ ಆರ್ಟಿಓ ಕಚೇರಿಯಿಂದ ರಾಜ್ಯ ಸರ್ಕಾರಕ್ಕೆ ಅತಿಹೆಚ್ಚು ಆದಾಯ ಬರುತ್ತಿತ್ತು.

ಆದ್ರೇ, ಈಗ ರಾಜ್ಯ ಸರ್ಕಾರಕ್ಕೆ ಸ್ವಲ್ಪ ಆದಾಯ ಕಡಿಮೆಯಾಗಿದೆಯಾದ್ರೂ ಇಲ್ಲಿರೋ ಅಧಿಕಾರಿಗಳಿಗೆ ಮತ್ತು ಬ್ರೋಕರ್ಗಳಿಗೆ ಮಾತ್ರ ಯಾವುದೇ ರೀತಿಯ ಆದಾಯ ಕಡಿಮೆಯಾಗಿಲ್ಲ. ಹೀಗಾಗಿ ಬಳ್ಳಾರಿ ಆರ್ಟಿಓ ಕಚೇರಿ ಅಂದ್ರೇ, ಅದು ಭ್ರಷ್ಟಾಚಾರದ ಮೂಲ ಸ್ಥಾನ ಎನ್ನುವಂತಾಗಿದೆ. ಇಲ್ಲಿ ಜನರಿಗಿಂತ ದಲ್ಲಾಳಿಗಳು ಮತ್ತು ಬ್ರೋಕರ್ ಗಳು ಹೇಳಿದ ಕೆಲಸವೇ ಬೇಗ ಆಗುತ್ತದೆ ಎನ್ನುವ ಆರೋಪವಿದೆ.

ಅದನ್ನು ಪರೀಕ್ಷಿಸಲು ಬಳ್ಳಾರಿ ನಗರ ಶಾಸಕ ಭರತ್ ರೆಡ್ಡಿ ಬೈಕ್ ಮೇಲೆ ಗ್ರಾಹಕರಂತೆ ಬಂದು ಪರೀಕ್ಷೆ ಮಾಡಿದ್ದಾರೆ. ಈ ವೇಳೆ ಅಧಿಕಾರಿಗಳ ಕಳ್ಳಾಟ ಮತ್ತು ಬ್ರೋಕರ್ ಗಳ ಮೇಲಾಟ ಗೊತ್ತಾಗಿದೆ. ಕೆಲ ಬ್ರೋಕರ್ಗಳು ಶಾಸಕರನ್ನು ನೋಡಿದ ಕೂಡಲೇ ಓಡಿ ಹೋಗಿದ್ದಾರೆ. ಅದಾದ ಮೇಲೆ ಸ್ಥಳದಲ್ಲಿದ್ದ ಸಾರ್ವಜನಿಕರನ್ನು ಶಾಸಕರು ಮಾತನಾಡಿಸಿದಾಗ ‘ನೇರವಾಗಿ ಕಚೇರಿಯಲ್ಲಿ ಯಾವುದೇ ಕೆಲಸವಾಗಲ್ಲ, ಬ್ರೋಕರ್ ಜೊತೆಗೆ ಬೇಕೆಬೇಕು‘ ಎಂದು ದೂರು ನೀಡಿದ್ದಾರೆ. ಇದರಿಂದ ಆಕ್ರೋಶಗೊಂಡ ಶಾಸಕ ಭರತ್ ರೆಡ್ಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಇದನ್ನೂ ಓದಿ: ರಕ್ತಾಭಿಷೇಕ: ಆಂಧ್ರದ ಗಡಿ ಭಾಗದಲ್ಲಿ… ಪೂಜೆ ಮಾಡೋದು ಬಿಟ್ಟು ಮನೆಯಿಂದಲೇ ಬಡಿಗೆ ತಂದು ಬಡಿದಾಡುವುದೇ ಈ ಜಾತ್ರೆಯ ವಿಶೇಷ!

ಇನ್ನು ಆರ್ಟಿಓ ಇನ್ಸ್​ಪೆಕ್ಟರ್​​ ನಾಗೇಶ್ ಅವರು ಮಾಜಿ ಸಚಿವ ಜನಾರ್ದನ ರೆಡ್ಡಿ ಪಕ್ಷd ವತಿಯಿಂದ ಚುನಾವಣೆ ನಿಲ್ಲಲು ಭಾರಿ ಪ್ರಯತ್ನ ನಡೆಸಿದ್ದರು. ಆದ್ರೇ ಕೊನೆ ಕ್ಷಣದಲ್ಲಿ ಕೈತಪ್ಪಿತ್ತು. ಆದ್ರೇ, ನಾಗೇಶ್ ಮಾತ್ರ ಕೆಲಸಕ್ಕಿಂತ ಹೆಚ್ಚಾಗಿ ರಾಜಕೀಯ ಮಾಡುತ್ತಾನೆಂದು ಕಚೇರಿಗೆ ಬಂದ ಜನರು ದೂರು ನೀಡಿದ್ರು. ಚುನಾವಣೆ ನಿಲ್ಲೋದಿದ್ರೇ ರಾಜೀನಾಮೆ ನೀಡಿ.. ರಾಜಕೀಯ ಮಾಡೋಕೆ ಕಚೇರಿಗೆ ಬರಬೇಡಿ ಎಂದು ನಾಗೇಶ್​​ಗೆ ವಾರ್ನಿಂಗ್ ನೀಡಿದರು. ಯಾರೇ ಬಂದರೂ ಹಣವಿಲ್ಲದೇ ಕೆಲಸ ಆಗಬೇಕು. ಇದು ಮೊದಲ ಸಲವಾಗಿರೋದ್ರಿಂದ ವಾರ್ನಿಂಗ್ ನೀಡಿರುವೆ, ಮತ್ತೊಮ್ಮೆ ಮಾಡಿದ್ರೇ ಸಸ್ಪಂಡ್ ಮಾಡುವೆ ಎಂದು ಎಚ್ಚರಿಸಿದ್ದಾರೆ.

ರಾಜ್ಯದ ಬಹುತೇಕ ಜಿಲ್ಲೆಯಲ್ಲಿಯ ಆರ್ಟಿಓ ಕಚೇರಿಯಲ್ಲಿ ಬ್ರೋಕರುಗಳು ವಾಸ ಮಾಡುತ್ತಾರೆ. ಅಲ್ಲಿ ಅವರು ಆಡಿದ್ದೇ ಆಟ ಅನ್ನೋದು ಮಾಮೂಲಿ. ಆದ್ರೆ ಆಗೊಮ್ಮೆ ಈಗೊಮ್ಮೆ ಈ ರೀತಿ ಜನಪ್ರತಿನಿಧಿಗಳ ಭೇಟಿಯಿಂದಾದರೂ ಅದಕ್ಕೆ ಕಡಿವಾಣ ಬೀಳಬೇಕಿದೆ ಎನ್ನುವುದ ಸಾರ್ವಜನಿಕರ ಆಗ್ರಹವಾಗಿದೆ.

ವರದಿ: ಸಂತೋಷ್ ಚಿನಗುಂಡಿ, ಟಿವಿ 9 ಬಳ್ಳಾರಿ

Published On - 3:44 pm, Sat, 4 November 23

Follow Us
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ