ರಕ್ತಾಭಿಷೇಕ: ಆಂಧ್ರದ ಗಡಿ ಭಾಗದಲ್ಲಿ… ಪೂಜೆ ಮಾಡೋದು ಬಿಟ್ಟು ಮನೆಯಿಂದಲೇ ಬಡಿಗೆ ತಂದು ಬಡಿದಾಡುವುದೇ ಈ ಜಾತ್ರೆಯ ವಿಶೇಷ!
ಉತ್ಸವ ಮೂರ್ತಿಯನ್ನು ತಮ್ಮ ತಮ್ಮ ಊರಿಗೆ ತೆಗೆದು ಕೊಂಡು ಹೋಗಬೇಕೆಂದು ಸುತ್ತಲ ಗ್ರಾಮಸ್ಥರು ಪ್ರಯತ್ನಿಸುತ್ತಾರೆ. ಈ ವೇಳೆ ಪರಸ್ಪರ ಬಡಿಗೆ ಹಿಡಿದು ಹೊಡೆದಾಡಿ ಕೊಳ್ಳುತ್ತಾರೆ. ಇದನ್ನು ನೋಡಲು ಮತ್ತು ಅದರಲ್ಲಿ ಪಾಲ್ಗೊಳ್ಳಲು ಈ ಬೆಟ್ಟ ಪ್ರದೇಶಕ್ಕೆ ಸಾವಿರಾರು ಜನ ಬಂದು ಸೇರುತ್ತಾರೆ. ಮಧ್ಯರಾತ್ರಿ 1 ರಿಂದ 3 ಗಂಟೆವರೆಗೆ ಈ ಕಾಳಗ ನಡೆಯುತ್ತದೆ.
ಸಾಮಾನ್ಯವಾಗಿ ಊರು ಹಬ್ಬ, ಜಾತ್ರೆ ಅಂದರೆ ದೇವರಿಗೆ ಪೂಜೆಪುನಸ್ಕಾರ (worship) ಮಾಡ್ತಾರೆ. ನೈವೇದ್ಯ ರೂಪದಲ್ಲಿ ಹೂವು ಹಣ್ಣು ಕಾಯಿ ಸೇರಿದಂತೆ ಇತರೆ ವಸ್ತುಗಳನ್ನು ಸಮರ್ಪಣೆ ಮಾಡ್ತಾರೆ. ಆದ್ರೇ ಈ ಊರಿನಲ್ಲಿ ನಡೆಯೋ ಜಾತ್ರೆಯಲ್ಲಿ (village fair) ಮನೆಯಿಂದ ಬಡಿಗೆ ಮತ್ತು ದೊಣ್ಣೆ ತರುತ್ತಾರೆ! ತರೋದಷ್ಟೇ ಅಲ್ಲ ಅದರಿಂದ ಪರಸ್ಪರ ಹೊಡೆದಾಡಿಕೊಂಡು ರಕ್ತಾಭಿಷೇಕವೇ (Blood bath, Raktabhisheka) ಮಾಡಿಕೊಳ್ಳುತ್ತಾರೆ. ಅಷ್ಟಕ್ಕೂ ಯಾವುದು ಆ ಜಾತ್ರೆ, ಯಾಕೆ, ಎಲ್ಲಿ ಹೊಡೆದಾಡಿಕೊಳ್ಳುತ್ತಾರೆ ಅಂತೀರಾ? ಈ ಸ್ಟೋರಿ ಓದಿ.
ದೇವರ ಉತ್ಸವ ಮೂರ್ತಿಗಾಗಿ 10ಕ್ಕೂ ಹೆಚ್ಚು ಗ್ರಾಮಗಳ ಜನರು ಬಡಿದಾಡುತ್ತಾರೆ!
ದೇಶದ ಯಾವ ಭಾಗದಲ್ಲಿಯೂ ನಡೆಯದ ವಿಶೇಷ ಮತ್ತು ವಿಚಿತ್ರ ಆಚರಣೆ ಇರೋ ಜಾತ್ರೆಯಿದು.. ಬಡಿದಾಡಲು ಒಂದಷ್ಟು ಜನರು ಬಂದ್ರೇ, ಇದನ್ನು ನೋಡಲೆಂದೇ ಬರುತ್ತಾರೆ ಸಾವಿರಾರು ಜನರು.. ಹೌದು, ಆಂಧ್ರ ಗಡಿಭಾಗದ ನೆರಣಕಿ ಗ್ರಾಮಕ್ಕೆ (Bellary) ಸೇರಿದ ಮೀಸಲು ಅರಣ್ಯಪ್ರದೇಶದ ಗುಡ್ಡದ ಮೇಲಿರೋ ಮಾಳ ಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಈ ರೀತಿಯ ಬಡಿದಾಟದ ಜಾತ್ರೆ ನಡೆಯುತ್ತದೆ.
ವಿಜಯದಶಮಿಯ ರಾತ್ರಿ ಇಲ್ಲಿನ ಮಾಳಮ್ಮ ಮತ್ತು ಮಲ್ಲೇಶ್ವರ ಸ್ವಾಮಿಗೆ ಕಲ್ಯಾಣೋತ್ಸವ ನಡೆಯುತ್ತದೆ. ಕಲ್ಯಾಣೋತ್ಸವದ ಬಳಿಕ ಮಲ್ಲೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಹೊತ್ತು ನೆರಣಕಿ ಗ್ರಾಮದ ಭಕ್ತರು ಬೆಟ್ಟಕ್ಕೆ ಬಂದು ಪೂಜೆ ಸಲ್ಲಿಸುತ್ತಾರೆ. ಬೆಟ್ಟಕ್ಕೆ ಬರುವಾಗ ಮತ್ತು ಹೋಗುವಾಗ ಈ ಉತ್ಸವ ಮೂರ್ತಿಗಳನ್ನು ತಮ್ಮ ಊರಿಗೆ ತೆಗೆದು ಕೊಂಡು ಹೋಗಬೇಕೆಂದು ಸುತ್ತಮುತ್ತಲಿನ ಗ್ರಾಮಸ್ಥರು ಪ್ರಯತ್ನಿಸುತ್ತಾರೆ.ಈ ವೇಳೆ ಪರಸ್ಪರ ಬಡಿಗೆ ಹಿಡಿದು ಕೊಂಡು ಹೊಡೆದಾಡಿ ಕೊಳ್ಳುತ್ತಾರೆ..ಇದನ್ನು ನೋಡಲು ಮತ್ತು ಅದರಲ್ಲಿ ಪಾಲ್ಗೊಳ್ಳಲು ಈ ಬೆಟ್ಟ ಪ್ರದೇಶಕ್ಕೆ ಸಾವಿರಾರು ಜನ ಬಂದು ಸೇರುತ್ತಾರೆ. ಮಧ್ಯರಾತ್ರಿ 1 ರಿಂದ 3 ಗಂಟೆವರೆಗೆ ಈ ಕಾಳಗ ನಡೆಯುತ್ತದೆ..ಈ ವರ್ಷ ಈ ಕಾಳಗದಲ್ಲಿ ನೂರಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ.
ಇನ್ನು ಈ ಹಿಂದಿನಿಂದಲೂ ಬಂದಿರೋ ಪದ್ದತಿಯ ಪ್ರಕಾರ ಉತ್ಸವ ಮೂರ್ತಿಯನ್ನು ಯಾರು ತಮ್ಮ ಊರುಗಳಿಗೆ ತೆಗೆದುಕೊಂಡು ಹೋಗುತ್ತಾರೋ ಅಲ್ಲಿಯ ಊರಿನವರಿಗೆ ಒಳ್ಳೆಯದಾಗುತ್ತದೆ ಮತ್ತು ಅಲ್ಲಿ ಮಳೆ ಬೆಳೆ ಸಮೃದ್ಧಿಯಾಗುತ್ತದೆ ಎನ್ನುವ ಪ್ರತೀತಿ ಇದೆ. ಹೀಗಾಗಿ ಉತ್ಸವ ಮೂರ್ತಿಗಾಗಿ ಇಲ್ಲಿ ಬಡಿದಾಟ ನಡೆಯುತ್ತದೆ. ಆದ್ರೇ, ಈವರೆಗೂ ನಡೆದ ಜಾತ್ರೆಯಲ್ಲಿ ಯಾರು ಕೂಡ ಮೂರ್ತಿ ತೆಗೆದುಕೊಂಡು ಹೋಗಲು ಯಶಸ್ವಿಯಾಗಿಲ್ಲ.. ಇನ್ನು ಇಲ್ಲಿ ಕಾರಣಿಕ ಕೂಡ ಹೇಳಲಾಗುತ್ತದೆ. ಈ ಬಾರಿಯ ಕಾರಣಿಕ ಆರು ಮೂರಾಯಿತು ಮೂರು ಆರಾಯಿತಲೇ ಪರಾಕೆ ಎಂದು ಹೇಳಿದೆ. ಈ ಮೂಲಕ ಮಾರುಕಟ್ಟೆ ದರ ಹೆಚ್ಚು ಕಡಿಮೆಯಾಗಲಿದೆ ಎಂದು ವಿಶ್ಲೇಷಣೆ ಮಾಡಲಾಗಿದೆ.
ಇನ್ನು ನಿಷೇಧವಿದ್ರೂ ಪೊಲೀಸರ ಎದುರಿಗೇ ಈ ಕಾಳಗ ನಡೆಯುತ್ತದೆ. ಅದೆಷ್ಟೋ ಬಾರಿ ಈ ಬಡಿದಾಟದಲ್ಲಿ ಸಾವುಗಳು ಸಂಭವಿಸಿದ ಉದಾಹರಣೆಗಳು ಇದೆ. ಆಚರಣೆ ಓಕೆ ಬಡಿಯದಾಟ ಯಾಕೆ? ಅನ್ನೋದು ಸಾರ್ವತ್ರಿಕ ಪ್ರಶ್ನೆಯಾಗಿದೆ.
ವರದಿ: ಸಂತೋಷ್ ಚಿನಗುಂಡಿ, ಟಿವಿ 9 ಬಳ್ಳಾರಿ