ಊರಿಗೆ ಹೊರಟಿದ್ದ ಮಹಿಳೆಯನ್ನ ಮನೆಗೆ ಕರೆದೊಯ್ದು ಕೊಲೆ; ಚಿನ್ನಾಭರಣ ಕಿತ್ಕೊಂಡು ಶವ ಸಂಪ್​​ಗೆ ಎಸೆದು ದಂಪತಿ ಎಸ್ಕೇಪ್

| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 15, 2024 | 7:22 PM

ಮಗಳ ಮನೆಯಲ್ಲಿ ಊರ ಹಬ್ಬ ಇದೆ ಎಂದು ಆ ಮಹಿಳೆ ಖುಷಿ ಖುಷಿಯಾಗೇ ಹೊರಟಿದ್ದರು. ಹೀಗೆ ಹೊರಟಿದ್ದ ಮಹಿಳೆ ದಿಢೀರ್ ನಾಪತ್ತೆಯಾಗಿದ್ದು, ಇಡೀ ರಾತ್ರಿ ಹುಡುಕಾಡಿದ ಕುಟುಂಬಸ್ಥರು, ಮಾರನೇ ದಿನ ಬೆಳಗ್ಗೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಇದೀಗ ಪೊಲೀಸರು ಪ್ರಕರಣ ಬೇಧಿಸಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

ಊರಿಗೆ ಹೊರಟಿದ್ದ ಮಹಿಳೆಯನ್ನ ಮನೆಗೆ ಕರೆದೊಯ್ದು ಕೊಲೆ; ಚಿನ್ನಾಭರಣ ಕಿತ್ಕೊಂಡು ಶವ ಸಂಪ್​​ಗೆ ಎಸೆದು ದಂಪತಿ ಎಸ್ಕೇಪ್
ಕೊಲೆ ಆರೋಪಿ ದಂಪತಿ
Follow us on

ಬೆಂಗಳೂರು, ಫೆ.15: ಊರಿಗೆ ಹೊರಟಿದ್ದ ಮಹಿಳೆಯನ್ನ ಮನೆಗೆ ಕರೆದೊಯ್ದು ಕೊಲೆ ಮಾಡಿದ ಘಟನೆ ನಡೆದಿದೆ. ಬೆಂಗಳೂರು ಉತ್ತರ ತಾಲೂಕಿನ ಗ್ರಾಮ ಲಕ್ಷ್ಮಿಪುರ ಗ್ರಾಮದ ನಿವಾಸಿ ಮಂಜುಳ ಮೃತ ರ್ದುದೈವಿ. ಇವರು ಟಿ.ದಾಸರಹಳ್ಳಿ(T.Dasarahalli) ಬಳಿ ಮೆಟ್ರೋ ಪಿಲ್ಲರ್ ಕೆಳಗೆ ವೀಳ್ಯದೆಲೆ ವ್ಯಾಪಾರ ಮಾಡುತ್ತಿದ್ದರು. ಊರ ಹಬ್ಬದ ಹಿನ್ನಲೆ ಫೆಬ್ರವರಿ 11ರಂದು ಮಗಳ ಮನೆಗೆ ಹೊರಟ್ಟಿದ್ದರು. ಹೀಗೆ ಹೊರಟಿದ್ದ ಮಂಜುಳಾರನ್ನ ಬಸ್ ನಿಲ್ದಾಣದವೆರಗೂ ಡ್ರಾಪ್ ಮಾಡುತ್ತೇನೆ ಎಂದು ಆರೋಪಿ ಜೀವನ್​ ಎಂಬಾತ ತನ್ನ ಮನೆಗೆ ಕರೆದುಕೊಂಡು ಬಂದಿದ್ದಾನೆ. ಪರಿಚಯಸ್ಥ ಆದ್ದರಿಂದ  ಮಂಜುಳ ಅವರು ಜೀವನ್ ಗಾಡಿ ಹತ್ತಿದ್ದಾರೆ. ಬಳಿಕ ಮಂಜುಳಾ ಮೈ ಮೇಲಿನ ಚಿನ್ನಾಭರಣದ ಆಸೆಗಾಗಿ ತನ್ನ ಪತ್ನಿ ಆಶಾ ಜೊತೆ ಸೇರಿ ಕತ್ತು ಹಿಸುಕಿ ಕೊಲೆ ಮಾಡಿ, ಶವವನ್ನು ಬೇರೆಡೆಗೆ ಸಾಗಿಸಲಾಗದೆ ಚೀಲದಲ್ಲಿ ತುಂಬಿ ಸಂಪ್​ನಲ್ಲಿ ಹಾಕಿ ಇಬ್ಬರು ಎಸ್ಕೇಪ್ ಆಗಿದ್ದಾರೆ.

ಯಾವಾಗ ಮಂಜುಳ ಮಗಳ ಮನೆಗೆ ಬರಲಿಲ್ಲವೋ ಕುಟುಂಬಸ್ಥರು ಗಾಬರಿಯಾಗಿದ್ದಾರೆ. ಮರುದಿನ ಅಂದರೆ ಫೆ.12ನೇ ತಾರೀಖಿನಂದು ಮಂಜುಳಾರ ಪುತ್ರ ಸಂದೀಪ್ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಪ್ರಕರಣ ದಾಖಲು ಮಾಡಿದ್ದ. ಇನ್ನು ಜೀವನ್ ಹಾಗೂ ಆಶಾ ವಾಸವಿದ್ದ ಕಟ್ಟಡದ ನೀರಿನಲ್ಲಿ 13ನೇ ತಾರೀಖಿನಂದು ದುರ್ವಾಸನೆ ಯುಕ್ತ ನೀರು ಬರಲು ಶುರುವಾಗಿತ್ತು. ಈ ವೇಳೆ ಮನೆ ಮಾಲೀಕರಾದ ದೇವರಾಜ್ ಹಾಗೂ ಭಾಗ್ಯಮ್ಮ ಸಂಪ್ ಕ್ಲೀನ್ ಮಾಡಿಸಲು ಮುಂದಾಗಿದ್ರು. ಆಗ ಸಂಪ್​ನಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಸ್ಥಳಕ್ಕೆ ಬಂದ ಮಾದನಾಯಕನಹಳ್ಳಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಇದನ್ನೂ ಓದಿ:ವಿಕಲಾಂಗ ಮಗನನ್ನು ನಿಂದಿಸಿದಕ್ಕೆ ಅಣ್ಣನ ಮಗನ ಕೊಲೆ; ಆರು ತಿಂಗಳಿಂದ ಹೊಂಚು ಹಾಕಿ ಮರ್ಡರ್

ಈ ವೇಳೆ ಎರಡನೇ ಮಹಡಿಯಲ್ಲಿ ವಾಸವಿದ್ದ ಆಶಾ ಹಾಗೂ ಜೀವನ್ ದಂಪತಿ ನಾಪತ್ತೆಯಾಗಿದ್ದರು. ಫೋನ್ ಮಾಡಿದ್ರೆ ಊರಲ್ಲಿ ಇರೋದಾಗಿ ಕಥೆ ಕಟ್ಟಿದ್ದರು. ಬಳಿಕ ಪೊಲೀಸರು ಮನೆ ಬಳಿ ಬನ್ನಿ ಸಣ್ಣ ವಿಚಾರಣೆ ಇದೆ ಎಂದಿದ್ದಾರೆ. ನಂತರ ಇಬ್ಬರೂ ಕೂಡ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಸದ್ಯ ಇಬ್ಬರು ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಪರಿಚಯಸ್ಥ ಎಂದು ನಂಬಿ ಆತನ ಜೊತೆ ಹೋದ ತಪ್ಪಿಗೆ ಮಹಿಳೆ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸದ್ಯ ಪೊಲೀಸರು ಇಬ್ಬರು ಆರೋಪಿಗಳಿಗಾಗಿ ತಲಾಶ್ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ