Anekal: ನೇಪಾಳ ಮೂಲದ ಮಹಿಳೆಯ ಹತ್ಯೆ: ಪತಿಯೇ ಪತ್ನಿಯನ್ನು ಕೊಲೆಗೈದಿರುವ ಶಂಕೆ

|

Updated on: Apr 24, 2023 | 8:49 PM

ನೇಪಾಳ ಮೂಲದ ಮಹಿಳೆಯ ಬರ್ಬರ ಹತ್ಯೆ ಮಾಡಿರುವಂತಹ ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಹಳೇ ಚಂದಾಪುರದ ಟಿ.ಎಸ್.ಗ್ರ್ಯಾಂಡ್​ ಬೇಕರಿ ಹಿಂದೆ ನಡೆದಿದೆ.

Anekal: ನೇಪಾಳ ಮೂಲದ ಮಹಿಳೆಯ ಹತ್ಯೆ: ಪತಿಯೇ ಪತ್ನಿಯನ್ನು ಕೊಲೆಗೈದಿರುವ ಶಂಕೆ
ಪ್ರಾತಿನಿಧಿಕ ಚಿತ್ರ
Follow us on

ಆನೇಕಲ್​: ನೇಪಾಳ ಮೂಲದ (Nepal woman) ಮಹಿಳೆಯ ಬರ್ಬರ ಹತ್ಯೆ ಮಾಡಿರುವಂತಹ ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಹಳೇ ಚಂದಾಪುರದ ಟಿ.ಎಸ್.ಗ್ರ್ಯಾಂಡ್​ ಬೇಕರಿ ಹಿಂದೆ ನಡೆದಿದೆ. ರಿಶು‌ (19) ಕೊಲೆಯಾದ‌ ಮಹಿಳೆ. ಪತಿಯೇ ಪತ್ನಿಯನ್ನು ಕೊಲೆಗೈದು ಪರಾರಿಯಾಗಿರುವ ಅನುಮಾನ ವ್ಯಕ್ತವಾಗಿದೆ. ಪತಿ‌ ಅಮರ್‌ ಧಾನಿ ಜತೆ ಕಳೆದ ಕೆಲವು ದಿನಗಳಿಂದ ಜಗಳವಾಡುತ್ತಿದ್ದ, ತಂಗಿಗೆ ಕರೆ ಮಾಡಿ ಗಂಡ ಹೊಡೆಯುತ್ತಿರೋದಾಗಿ ಹೇಳಿದ್ದಾಳೆ. ಬಳಿಕ ನೆನ್ನೆ ಇಡೀ ದಿನ ರಿಶು‌ ಕಾಲ್ ರಿಸೀವ್ ಮಾಡಿಲ್ಲ. ರಿಶು ಕುಟುಂಬಸ್ಥರು ಗಂಡ ಅಮರ್‌ ಧಾನಿಗೂ ಕರೆ ಮಾಡಿದ್ದು, ಆತ ಕೂಡ ಕರೆ ಸ್ವೀಕರಿಸಿರಲಿಲ್ಲ. ಈ ಹಿನ್ನೆಲೆ ಮನೆಗೆ ಬಂದು ನೋಡಿದಾಗ ವಿಚಾರ ಬೆಳಕಿಗೆ ಬಂದಿದೆ. ಆರೋಪಿ ಅಮರ್‌ ಧಾನಿಯನ್ನು ಸೂರ್ಯನಗರ ಪೊಲೀಸರು ಹುಡುಕುತ್ತಿದ್ದಾರೆ. ನೇಪಾಳಕ್ಕೆ ಓಡಿ ಹೋಗುವ ಮುಂಚೆ ಲಾಕ್‌‌ ಮಾಡುವ ಪ್ರಯತ್ನ ಮಾಡಲಾಗುತ್ತಿದೆ.

ಮೂರು ತಿಂಗಳ‌ ಹಿಂದಷ್ಟೇ ಮದುವೆ ಆಗಿತ್ತು. ಅಮರ್‌ ಧಾನಿ ಮೊದಲ ಹೆಂಡತಿ ಕೂಡ ನೇಣು ಹಾಕಿಕೊಂಡಿದ್ದಳು. ರಿಶು ಜತೆ ಎರಡನೇ ಮದುವೆ ಆಗಿದ್ದ. ಸದ್ಯ ವಯರ್​ನಿಂದ ಬಿಗಿದು ಕೊಲೆ ಮಾಡಿರುವ ಶಂಕೆವಾಗಿದೆ. ಸ್ಥಳಕ್ಕೆ ಸೂರ್ಯನಗರ ಠಾಣೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ಮಾಡಿದ್ದಾರೆ.

ಎರಡು ಕೆಎಸ್​ಆರ್​​ಟಿಸಿ ಬಸ್​ಗಳು ಮುಖಾಮುಖಿ

ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಎರಡು ಕೆಎಸ್​ಆರ್​​ಟಿಸಿ ಬಸ್​ಗಳು ಮುಖಾಮುಖಿ ಡಿಕ್ಕಿಯಾದ ಹೊಡೆದ ಪರಿಣಾಮ 16 ಜನ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತರೀಕೆರೆ ತಾಲೂಕಿನ ಹಳಿಯೂರು ಬಳಿ ನಡೆದಿದೆ. ಗಾಯಾಳುಗಳುಗಳನ್ನು ತರೀಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಲವ್​ ಮಾಡಿ ಮದುವೆಯಾಗಿದ್ದಕ್ಕೆ ಯುವಕನ ಕೊಲೆ: ಚುನಾವಣೆಗೆ ಸ್ಫರ್ಧಿಸಿದ್ದ ಆರೋಪಿ ಅರೆಸ್ಟ್​

ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ನವ ವಿವಾಹಿತೆ ಸಾವು

ಮಂಗಳೂರು: ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ನವ ವಿವಾಹಿತೆ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಕೊಪ್ಪದಕೋಡಿ ಗ್ರಾಮದಲ್ಲಿ ನಡೆದಿದೆ. ಕೌಶಲ್ಯ(27) ಮೃತ ಮಹಿಳೆ. ಮೃತ ಕೌಶಲ್ಯ, ಬೆಳ್ತಂಗಡಿ ತಾಲೂಕಿನ ಕೊಪ್ಪದಕೋಡಿ ನಿವಾಸಿಯಾಗಿದ್ದು, ಕಳೆದ 15 ವರ್ಷಗಳಿಂದ ಸುಕೇಶ್​ ಎಂಬುವರನ್ನು ಪ್ರೀತಿಸುತ್ತಿದ್ದರು.

5 ತಿಂಗಳ ಹಿಂದೆ ಪ್ರೇಮಿಗಳು ಮದುವೆಯಾಗಿದ್ದರು. ಮದುವೆ ನಂತರ ಪತಿ ಸುಕೇಶ್​ ಅವರಿಗೆ ಅಕ್ರಮ ಸಂಬಂಧ ಇರುವ ವಿಚಾರ ಕೌಶಲ್ಯ ಅವರಿಗೆ ತಿಳಿದಿತ್ತು. ಇದನ್ನು ಸಾಕ್ಷಿ ಸಮೇತೆ ಕೌಶಲ್ಯ ಪತ್ತೆಹಚ್ಚಿದ್ದರು. ಪತಿಯ ಈ ಅಕ್ರಮ ಸಂಬಂಧದಿಂದ ಬೇಸತ್ತ ಕೌಶಲ್ಯ 3 ದಿನಗಳ ಹಿಂದೆ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೆ ಅವರನ್ನು ಖಾಸಗಿ ಆಸ್ಪೆತ್ರಗೆ ದಾಖಲಿಸಲಾಗಿತ್ತು. ಆದರೆ ಇಂದು (ಏ.24) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾವಣಗೆರೆ: ತುಂಗಭದ್ರಾ ನದಿಯಲ್ಲಿ ಮೂವರು ಸಹೋದರರು ನೀರುಪಾಲು

ದಾವಣಗೆರೆ: ತುಂಗಭದ್ರಾ ನದಿಯಲ್ಲಿ ಮೂವರು ಸಹೋದರರು ನೀರುಪಾಲಾದ ಘಟನೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹಿರೇಗೋಣಿಗೆರೆ ಬಳಿ ಏ. 23ರಂದು ನಡೆದಿತ್ತು. ಹಿರೇಗೋಣಿಗೆರೆ ಗ್ರಾಮದ ಕಿರಣ್‌ (14), ವರುಣ್‌ (15), ಪವನ್ (16) ಮೃತಪಟ್ಟ ಸಹೋದರರು. ಸ್ನಾನ ಮಾಡಲೆಂದು ನದಿಗೆ ಇಳಿದ ಮೂವರು ನೀರುಪಾಲಾಗಿದ್ದು, ಮಾಹಿತಿ ತಿಳಿದ ಅಗ್ನಿಶಾಮಕದಳದ ಸಿಬ್ಬಂದಿ ಮತ್ತು ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಕಾರ್ಯಾಚರಣೆ ಆರಂಭಿಸಿದ್ದರು.

ಇದನ್ನೂ ಓದಿ: ಬ್ರಹ್ಮಾವರ: ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ 7 ಯುವಕರ ಪೈಕಿ ನಾಲ್ವರು ನೀರುಪಾಲು

ನೀರುಪಾಲಾದ ಮೂವರ ಪೈಕಿ ವರುಣ್‌ ಮೃತದೇಹ ಪತ್ತೆಯಾಗಿದ್ದು, ಉಳಿದ ಇಬ್ಬರ ಮೃತದೇಹಕ್ಕಾಗಿ ಶೋಧ ಕಾರ್ಯಾಚರಣೆ ಮುಂದುವರೆದಿತ್ತು. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಎಂಪಿ ರೇಣುಕಾಚಾರ್ಯ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದರು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:29 pm, Mon, 24 April 23