ಲವ್​ ಮಾಡಿ ಮದುವೆಯಾಗಿದ್ದಕ್ಕೆ ಯುವಕನ ಕೊಲೆ: ಚುನಾವಣೆಗೆ ಸ್ಫರ್ಧಿಸಿದ್ದ ಆರೋಪಿ ಅರೆಸ್ಟ್​

ಚುನಾವಣೆಗೆ ಸ್ಫರ್ಧಿಸಿದ್ದ ಕೊಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ನಾರಾಯಣ್​ ಅಲಿಯಾಸ್ ಕರಿಯಾ ಬಂಧಿತ ಆರೋಪಿ. ತುರುವೇಕೆರೆ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಆಗಿದ್ದ. ನಾರಾಯಣ್​ ಲಗ್ಗೆರಿಯ ಚೇತನ್ ಎಂಬುವವನ ಕೊಲೆ ಪ್ರಕರಣದ ಎ6 ಆರೋಪಿಯಾಗಿದ್ದ.

ಲವ್​ ಮಾಡಿ ಮದುವೆಯಾಗಿದ್ದಕ್ಕೆ ಯುವಕನ ಕೊಲೆ: ಚುನಾವಣೆಗೆ ಸ್ಫರ್ಧಿಸಿದ್ದ ಆರೋಪಿ ಅರೆಸ್ಟ್​
ನಾರಾಯಣ ಅಲಿಯಾಸ್ ಕರಿಯಾ ಬಂಧಿತ ಆರೋಪಿ
Follow us
ಗಂಗಾಧರ​ ಬ. ಸಾಬೋಜಿ
|

Updated on:Apr 24, 2023 | 6:46 PM

ಬೆಂಗಳೂರು: ಚುನಾವಣೆಗೆ ಸ್ಫರ್ಧಿಸಿದ್ದ ಕೊಲೆ (murder) ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ನಾರಾಯಣ್​ ಅಲಿಯಾಸ್ ಕರಿಯಾ ಬಂಧಿತ ಆರೋಪಿ. ತುರುವೇಕೆರೆ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಆಗಿದ್ದ. ನಾರಾಯಣ್​ ಲಗ್ಗೆರಿಯ ಚೇತನ್ ಎಂಬುವವನ ಕೊಲೆ ಪ್ರಕರಣದ ಎ6 ಆರೋಪಿಯಾಗಿದ್ದ. ಭೂಮಿಕಾ ಎಂಬಾಕೆಯನ್ನು ಪ್ರೀತಿಸಿ ಚೇತನ್​ ಮದುವೆಯಾಗಿದ್ದ. ಭೂಮಿಕಾ ಸಹೋದರ ಮತ್ತು ಇತರರು ಸೇರಿ ಚೇತನನನ್ನು‌ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ್ದರು. ಈ ಸಂಬಂಧ ನಾರಾಯಣ ಅಲಿಯಾಸ್ ಕರಿಯನ ಬಂಧನ ಮಾಡಲಾಗಿತ್ತು. ಕೊಲೆ ಕೇಸ್ ಬಳಿಕ ಆರೋಪಿ ನಾರಾಯಣ್​ ತಲೆಮರೆಸಿಕೊಂಡಿದ್ದ. 2021 ರಲ್ಲಿ ಕೊಲೆ ಪ್ರಕರಣ ನಡೆದಿತ್ತು.

ಭೂಮಿಕಾ ಕುಟುಂಬದವರಿಂದ ಬಲವಂತದ ಮದುವೆ: ಚೇತನ್ ಕೊಡವತ್ತಿ ಗ್ರಾಮದ ಪಕ್ಕದ ಊರಿನ ಯುವಕನಾಗಿದ್ದ. ಇಬ್ಬರು ಲವ್ ಮಾಡುವ ವಿಷಯ ತಿಳಿದು ಬಲವಂತವಾಗಿ ಭೂಮಿಕಾ ಕುಟುಂಬದವರು ಮತ್ತೊಬ್ಬನ ಜೊತೆ ಮದುವೆ ಮಾಡಿದ್ದರು. ಈ ವೇಳೆ ಭೂಮಿಕಾ ಮದುವೆಯಾದ ಒಂದು ವಾರದ ಬಳಿಕ ಲವರ್ ಚೇತನ್​ಗೆ ಪೋನ್ ಮಾಡಿದ್ದಳು. ಚೇತನ್ ಬಳಿ ನೀನು ಬಂದು ಕರೆದುಕೊಂಡು ಹೋಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾಳೆ.

ಭೂಮಿಕಾ ಮನೆಯವರಿಂದ ಬೆದರಿಕೆ: ವಿಷ ಕುಡಿಯುತ್ತೇನೆ ಎಂದಿದ್ದಕ್ಕೆ ಭೂಮಿಕಾಳನ್ನ ಚೇತನ್​ ಕರೆದುಕೊಂಡು ಹೋಗಿದ್ದ. ಬಳಿಕ ಭೂಮಿಕಾ ಜೊತೆ ಕೆಂಗೇರಿಯ ದೇವಸ್ಥಾನದಲ್ಲಿ ಮದುವೆ ಆಗಿದ್ದಾನೆ. ಭೂಮಿಕಾ ಮನೆಯವರಿಂದ ಬೆದರಿಕೆ ಇರುವ ಹಿನ್ನೆಲೆ ಕುಣಿಗಲ್ ಠಾಣೆಗೆ ದೂರು ಸಹ ನೀಡಿದ್ದಾಳೆ. ಭೂಮಿಕಾ ಕುಟುಂಬದವರನ್ನ ಕರೆಯಿಸಿ ತೊಂದರೆ ಕೊಡದಂತೆ ಕುಣಿಗಲ್ ಪೊಲೀಸರು ಮುಚ್ಚಳಿಕೆ ಬರೆಸಿಕೊಂಡಿದ್ದರು.

ಚೇತನ್ ಹತ್ಯೆಗೆ ರೌಡಿಶೀಟರ್ ತಮ್ಮನ ಕುಮ್ಮಕ್ಕು

ಇದಾದ ಬಳಿಕ ಕುಟುಂಬ ಮಾನ ಮರ್ಯಾದೆ ಹೋಗಿದೆ ಎಂದು ದ್ವೇಷ ಇಟ್ಟುಕೊಂಡಿದ್ದ ಕುಟುಂಬಸ್ಥರು, ಇದೇ ದ್ವೇಷದಿಂದ ಚೇತನ್ ಹತ್ಯೆ ಮಾಡಲು ಪ್ಲಾನ್ ಮಾಡಿದ್ದರು. ಇದಕ್ಕೆ ನಟೋರಿಯಸ್ ರೌಡಿಶೀಟರ್ ತಮ್ಮ ಕುಮ್ಮಕ್ಕು ಕೊಟ್ಟಿದ್ದ. ಕೊಲೆಯಾದ ಚೇತನ್ ತಂದೆಗೂ ನಟೋರಿಯಸ್ ರೌಡಿಶೀಟರ್ ತಮ್ಮನ ನಡುವೆ ದ್ವೇಷ ಇತ್ತು.

ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸೋಲಲು ಚೇತನ್ ತಂದೆ ಕಾರಣವಾಗಿದ್ದರು. ಇದಕ್ಕೆ ಸೇಡು ತೀರಿಸಿಕೊಳ್ಳಲು, ಚೇತನ್ ಹತ್ಯೆ ಮಾಡಲು ಕುಮ್ಮಕ್ಕು ನೀಡಿದ್ದ. ಆತನ ಅಣತಿಯಂತೆ ಚೇತನ್​ನನ್ನು ಆರೋಪಿಗಳು ಬರ್ಬರವಾಗಿ ಹತ್ಯೆ ಮಾಡಿದ್ದರು. ಭೂಮಿಕಾಳ ತಮ್ಮ ಆಕಾಶ, ಯುವತಿಯ ಚಿಕ್ಕಪ್ಪನ ಮಗ ನಂಜೇಶ್, ದೀಪಕ್, ಶ್ರೀಕಂಠ ಮತ್ತು ನಾರಾಯಣ ಅಲಿಯಾಸ್ ಕರಿಯ ನಾರಾಯಣ್​ ಆರೋಪಿಗಳು. ಹತ್ಯೆ ಬಳಿಕ ತಲೆಮರಿಸಿಕೊಂಡಿದ್ದ ನಾರಾಯಣ್​ ಅಲಿಯಾಸ್ ಕರಿಯ ನಾರಾಯಣ್​ ನನ್ನು ಸದ್ಯ ತುರುವೆಕರೆಯ ಬಳಿ ಪೊಲೀಸರು ಅರೆಸ್ಟ್​ ಮಾಡಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:46 pm, Mon, 24 April 23

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ