Sign In

By signing in or creating an account, you agree with Associated Broadcasting Company's Terms & Conditions and Privacy Policy.

Acid Attack: ಮದುವೆ ಮಂಟಪದಲ್ಲಿ ಮಾಜಿ ಪ್ರಿಯಕರನ ಮೇಲೆ ಆ್ಯಸಿಡ್ ಎರಚಿದ ಯುವತಿ

ಮದುವೆ ಮಂಟಪದಲ್ಲಿ ಮಾಜಿ ಪ್ರಿಯಕರನ ಮುಖಕ್ಕೆ ಯುವತಿಯೊಬ್ಬಳು ಆ್ಯಸಿಡ್(Acid) ಎರಚಿರುವ ಘಟನೆ ವರದಿಯಾಗಿದೆ.

Acid Attack: ಮದುವೆ ಮಂಟಪದಲ್ಲಿ ಮಾಜಿ ಪ್ರಿಯಕರನ ಮೇಲೆ ಆ್ಯಸಿಡ್ ಎರಚಿದ ಯುವತಿ
ಮದುವೆ ಮಂಟಪದಲ್ಲಿ ಆ್ಯಸಿಡ್ ದಾಳಿ
Follow us
ನಯನಾ ರಾಜೀವ್
|

Updated on:Apr 25, 2023 | 8:32 AM

ಮದುವೆ ಮಂಟಪದಲ್ಲಿ ಮಾಜಿ ಪ್ರಿಯಕರನ ಮುಖಕ್ಕೆ ಯುವತಿಯೊಬ್ಬಳು ಆ್ಯಸಿಡ್(Acid) ಎರಚಿರುವ ಘಟನೆ ವರದಿಯಾಗಿದೆ. ಛತ್ತೀಸ್​ಗಢದ ಬಸ್ತಾರ್​ನಲ್ಲಿ ಈ ಘಟನೆ ನಡೆದಿದೆ. ತನ್ನ ಮಾಜಿ ಪ್ರಿಯಕರ ಮದುವೆಯಾಗುತ್ತಿದ್ದಾನೆ ಎಂದು ತಿಳಿದ ಯುವತಿ ಮದುವೆ ಮಂಟಪಕ್ಕೆ ಬಂದು ಆತನ ಮೇಲೆ ಆ್ಯಸಿಡ್ ಎರಚಿದ್ದಾಳೆ. ಆ್ಯಸಿಡ್ ದಾಳಿಯಲ್ಲಿ ವರ, ವಧು ಹಾಗೂ 10 ಮಂದಿ ವಿವಾಹ ಅತಿಥಿಗಳಿಗೆ ಸಣ್ಣಪುಟ್ಟ ಸುಟ್ಟ ಗಾಯಗಳಾಗಿವೆ ಈ ಘಟನೆ ಏಪ್ರಿಲ್ 19ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಗ್ರಾಮದಲ್ಲಿ ಅಳವಡಿಸಲಾಗಿದ್ದ 12 ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಲಾಯಿತು. ದಾಳಿಯ ವೇಳೆ ತನ್ನ ಗುರುತು ಮರೆಮಾಚಲು ಪುರುಷ ವೇಷ ಧರಿಸಿದ್ದ ಮಹಿಳೆಯನ್ನು ಪೊಲೀಸರು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಆಕೆ ಕಳೆದ ಹಲವು ವರ್ಷಗಳಿಂದ ದಮೃಧರ್ ಬಘೇಲ್ ಎಂಬಾತನ ಜೊತೆ ಸಂಬಂಧ ಹೊಂದಿದ್ದು, ಆಕೆಯನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದ ಎಂದು ಆರೋಪಿ ಯುವತಿ ಪೊಲೀಸರಿಗೆ ತಿಳಿಸಿದ್ದಾಳೆ.

ಮತ್ತಷ್ಟು ಓದಿ:Acid Attack: ಮದುವೆ ಮಂಟಪದಲ್ಲಿ ಘೋರ: ವಧು-ವರ ಸೇರಿದಂತೆ 12 ಮಂದಿ ಮೇಲೆ ಆಸಿಡ್‌ ಎರಚಿದ ದುಷ್ಕರ್ಮಿಗಳು!

ಬೇರೊಬ್ಬ ಮಹಿಳೆಯೊಂದಿಗೆ ಮದುವೆ ನಿಶ್ಚಯ ಮಾಡಿಕೊಂಡಿದ್ದು, ತನಗೆ ಮೋಸ ಮಾಡಿದ್ದಾನೆ ಎನ್ನುವ ಕೋಪದಲ್ಲಿ ಆ್ಯಸಿಡ್ ಎರಚಿದ್ದಳು. ಅವನ ಮದುವೆ ನಿಶ್ಚಯವಾದ ತಕ್ಷಣೆ ಆಕೆ ಆತನಿಗೆ ಕರೆ ಮಾಡಿದ್ದಾಳೆ, ಆದರೆ ಯಾವುದಕ್ಕೂ ಪ್ರತಿಕ್ರಿಯೆ ಇರಲಿಲ್ಲ. ಬಳಿಕ ಆ್ಯಸಿಡ್ ದಾಳಿ ಮಾಡಿ ಸೇಡು ತೀರಿಸಿಕೊಳ್ಳುವ ಬಗ್ಗೆ ಆಲೋಚನೆ ಮಾಡಿದೆ ಎಂದಿದ್ದಾಳೆ.

ಆಕೆ ಕೆಲಸ ಮಾಡುವ ಮೆಣಸಿನಕಾಯಿ ಫಾರ್ಮ್​ನಿಂದ ಆ್ಯಸಿಡ್ ಕದಿದ್ದಳು ಎಂದು ಬಸ್ತಾರ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಿವೇದಿತಾ ಪಾಲ್ ಹೇಳಿದ್ದಾರೆ. ಈ ಆ್ಯಸಿಡ್​ ಅನ್ನು ಜಮೀನಿನಲ್ಲಿ ಡ್ರಿಪ್ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಬಳಸಲಾಗುತ್ತದೆ.

ಏಪ್ರಿಲ್ 19 ರಂದು ಯುವತಿ ಮದುವೆ ಸಮಾರಂಭಕ್ಕೆ ಆಗಮಿಸಿ ದಮರುಧರ್ ಮೇಲೆ ಹಲ್ಲೆ ನಡೆಸಿದ್ದರು. ರಾತ್ರಿ ಘಟನೆ ನಡೆದಿದ್ದು, ಆ ಸಮಯದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು ಹಾಗಾಗಿ ಆಕೆಯನ್ನು ಯಾರೂ ಕೂಡ ನೋಡಲಾಗಲಿಲ್ಲ. ಆದರೆ ಪೊಲೀಸರು ಆಕೆಯನ್ನು ಪತ್ತೆ ಹಚ್ಚಿದ್ದಾರೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:21 am, Tue, 25 April 23