ಬೆಂಗಳೂರಿನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಟೆಕ್ಕಿ ಪತ್ನಿ ಶವ ಪತ್ತೆ!

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನವ ವಿವಾಹಿತೆಯ ಮೃತದೇಹ ಪತ್ತೆಯಾಗಿದೆ. ಬ್ಯಾಡರಹಳ್ಳಿಯ ಭಾರತ್ ನಗರದ ಮನೆಯ ರೂಮ್​ನಲ್ಲಿ ಟೆಕ್ಕಿ ಪತ್ನಿ ವಿನುತಾ (25) ಶವ ಪತ್ತೆಯಾಗಿದೆ. 7 ತಿಂಗಳ ಹಿಂದಷ್ಟೇ ವಿವಾಹ: 7 ತಿಂಗಳ ಹಿಂದಷ್ಟೇ ನಾಗಮಂಗಲ ಮೂಲದ ವಿನುತಾರನ್ನು ಟೆಕ್ಕಿ ಕಿರಣ್ ಕುಮಾರ್ ವಿವಾಹವಾಗಿದ್ದ. ಖಾಸಗಿ ಕಂಪನಿಯಲ್ಲಿ ಟೆಕ್ಕಿಯಾಗಿರುವ ಕಿರಣ್, ಮದುವೆಯಾದ ದಿನದಿಂದ ಪತ್ನಿಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಅಲ್ಲದೆ, ವಿನುತಾಗೆ ಪತಿ ಕಿರಣ್, ಅತ್ತೆ […]

ಬೆಂಗಳೂರಿನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಟೆಕ್ಕಿ ಪತ್ನಿ ಶವ ಪತ್ತೆ!
ಸಾಧು ಶ್ರೀನಾಥ್​

Updated on: Feb 14, 2020 | 6:07 PM

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನವ ವಿವಾಹಿತೆಯ ಮೃತದೇಹ ಪತ್ತೆಯಾಗಿದೆ. ಬ್ಯಾಡರಹಳ್ಳಿಯ ಭಾರತ್ ನಗರದ ಮನೆಯ ರೂಮ್​ನಲ್ಲಿ ಟೆಕ್ಕಿ ಪತ್ನಿ ವಿನುತಾ (25) ಶವ ಪತ್ತೆಯಾಗಿದೆ.

7 ತಿಂಗಳ ಹಿಂದಷ್ಟೇ ವಿವಾಹ:
7 ತಿಂಗಳ ಹಿಂದಷ್ಟೇ ನಾಗಮಂಗಲ ಮೂಲದ ವಿನುತಾರನ್ನು ಟೆಕ್ಕಿ ಕಿರಣ್ ಕುಮಾರ್ ವಿವಾಹವಾಗಿದ್ದ. ಖಾಸಗಿ ಕಂಪನಿಯಲ್ಲಿ ಟೆಕ್ಕಿಯಾಗಿರುವ ಕಿರಣ್, ಮದುವೆಯಾದ ದಿನದಿಂದ ಪತ್ನಿಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.

ಅಲ್ಲದೆ, ವಿನುತಾಗೆ ಪತಿ ಕಿರಣ್, ಅತ್ತೆ ಮಂಜುಳಾ ಹಾಗೂ ಮಾವ ಶ್ರೀನಿವಾಸ್​ ಸಹ ಕಿರುಕುಳ ನೀಡುತ್ತಿದ್ದರು. ಈ ಬಗ್ಗೆ ಮೂರು ಬಾರಿ ವನಿತಾ ಸಹಾಯವಾಣಿಯಲ್ಲಿ ಕೌನ್ಸೆಲಿಂಗ್ ಮಾಡಿದ್ರೂ, ಕಿರುಕುಳವನ್ನು ಟೆಕ್ಕಿ ನಿಲ್ಲಿಸಿರಲಿಲ್ಲ. ವರದಕ್ಷಿಣೆಗಾಗಿ ಪ್ರತಿದಿನ ಕುಟುಂಬಸ್ಥರು ಕಿರುಕುಳ ನೀಡುತ್ತಿದ್ದರು. ಈಗ ವಿನುತಾರನ್ನು ಹೊಡೆದು ಅವರೇ ನೇಣುಹಾಕಿದ್ದಾರೆಂದು ಮೃತ ವಿನುತಾ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ, ವರದಕ್ಷಿಣೆ ಕಿರುಕುಳ ಆರೋಪದಡಿ ಪ್ರಕರಣ ದಾಖಲಾಗಿದೆ.


 

Published On - 6:00 pm, Fri, 14 February 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us