ನಾನು ಯಾರನ್ನೂ ವಂಚಿಸಿಲ್ಲ, ಕಾನೂನಿನ ಮೇಲೆ ನನಗೆ ಭರವಸೆಯಿದೆ: ಅರುಣಕುಮಾರಿ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 14, 2021 | 10:06 PM

ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರ ಹೆಸರಲ್ಲಿ ಹೆಸರಿನಲ್ಲಿ ₹25 ಕೋಟಿ ವಂಚನೆಗೆ ಯತ್ನಿಸಿರುವ ಪ್ರಕರಣಲ್ಲಿ ಆರೋಪಿಯಾಗಿರುವ ಅರುಣಾ ಕುಮಾರಿ ಬೆಂಗಳೂರಿನಲ್ಲಿಂದು ಹೇಳಿಕೆಯೊಂದನ್ನು ನೀಡಿ ತಾನು ಯಾರನ್ನು ವಂಚಿಸಿಲ್ಲ ಅಂತ ಹೇಳಿದ್ದಾರೆ

ನಾನು ಯಾರನ್ನೂ ವಂಚಿಸಿಲ್ಲ, ಕಾನೂನಿನ ಮೇಲೆ ನನಗೆ ಭರವಸೆಯಿದೆ: ಅರುಣಕುಮಾರಿ
ಅರುಣಕುಮಾರಿ ಮತ್ತು ದರ್ಶನ್
Follow us on

ಬೆಂಗಳೂರು:  ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರ ಹೆಸರಲ್ಲಿ ಹೆಸರಿನಲ್ಲಿ ₹25 ಕೋಟಿ ವಂಚನೆಗೆ ಯತ್ನಿಸಿರುವ ಪ್ರಕರಣಲ್ಲಿ ಆರೋಪಿಯಾಗಿರುವ ಅರುಣಾ ಕುಮಾರಿ ಬೆಂಗಳೂರಿನಲ್ಲಿಂದು ಹೇಳಿಕೆಯೊಂದನ್ನು ನೀಡಿ ತಾನು ಯಾರನ್ನು ವಂಚಿಸಿಲ್ಲ, ಅದಕ್ಕೆ ಸಾಕ್ಷಿಯೇನಾದರೂ ಇದೆಯೇ? ತಾನು ಕಾನೂನಿನಲ್ಲಿ ನಂಬಿಕೆ ಇಟ್ಟಿರುವವಳು, ಯಾರು ಸರಿ ಯಾರು ತಪ್ಪು ಅನ್ನೋದನ್ನು ಕಾನೂನೇ ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ

‘ನಾನು ಅಪರಾಧಿ ಅಂಥ ಕಾನೂನಲ್ಲಿ ಸಾಬೀತಾದರೆ ಯಾವ ಶಿಕ್ಷೆಯನ್ನಾದರೂ ನೀಡಲಿ. ಇದು ನನ್ನ ಮರ್ಯಾದೆಯ ಪ್ರಶ್ನೆ. ನನ್ನ ತಂದೆ ತಾಯಿಗಳಿಬ್ಬರೂ ಪೇಷೆಂಟ್​ಗಳು ಮತ್ತು ನಾನೂ ಸಹ ರೋಗದಿದ ಬಳಲುತ್ತಿದ್ದೇನೆ. ನನ್ನ ಮಗನಿಗೆ ನಾನು ಸಿಂಗಲ್ ಪೇರೆಂಟ್. ಹೋರಾಡುವ ಶಕ್ತಿ ನನ್ನಲ್ಲಿಲ್ಲ. ಕಾನೂನು ನನಗೆ ನ್ಯಾಯ ಕೊಡಿಸುತ್ತೆ ಎಂಬ ನಂಬಿಕೆ ನನಗಿದೆ. ನಾನು ಹೆಣ್ಣಾಗಿ ಕೇಳಿಕೊಳ್ಳುವುದು ಇಷ್ಟೇ, ನನ್ನ ತಂದೆ-ತಾಯಿ ಮರ್ಯಾದೆ ಹರಾಜಾಗುತ್ತಿದೆ. ನಮ್ಮನ್ನು ನಮ್ಮ ಪಾಡಿಗೆ ಬಿಟ್ಟುಬಿಡಿ’ ಎಂದು ಹೇಳಿದ್ದಾರೆ

‘ದರ್ಶನ್ ಅಂಥ ದೊಡ್ಡ ವ್ಯಕ್ತಿ ಬಗ್ಗೆ ಮಾತಾಡುವ ಯೋಗ್ಯತೆ ನನ್ನಲಿಲ್ಲ. ಪ್ರತಿಯೊಂದು ಸ್ಟೇಟ್ ಮೆಂಟ್ ನಾನು ಪೊಲೀಸರಿಗೆ ಕೊಟ್ಟಿದ್ದೇನೆ. ಸಾಕ್ಷ್ಯಾಧಾರಗಳನ್ನು ಇಟ್ಟುಕೊಂಡಿದ್ದೀನೆ ಅಂತ ನಾನೆಲ್ಲೂ ಹೇಳಿಲ್ಲ. ಎರಡು ದಿನಗಳ ನಂತರ ನಿಮಗೆ ಸತ್ಯ ಗೊತ್ತಾಗಲಿದೆ. ನಾಗವರ್ಧನ್ ಯಾರು ಅನ್ನೋದೇ ನನಗೆ ಗೊತ್ತಿಲ್ಲ. ಅವರು ದಾಖಲೆಗಳನ್ನು ತೋರಿಸಿ ಮಾತಾಡಲಿ,’ ಎಂದು ಹೇಳಿದ್ದಾರೆ.

ನ್ಯಾಯಾಲಯದೆದುರು ಶರಣಾದ ರೌಡಿ ಶೀಟರ್ ಬೇಕರಿ ರಘು

ಬೆಂಗಳೂರು:  ಸುಮಾರು ಎಂಟು ವರ್ಷಗಳ ಹಿಂದಿನ ಪ್ರಕರಣವೊಂದರಲ್ಲಿ ಪೊಲೀಸರಿಗೆ ಬೇಕಾಗಿದ್ದ ಕುಖ್ಯಾತ ರೌಡಿಶೀಟರ್ ರಾಘವೇಂದ್ರ ಅಲಿಯಾಸ್ ಬೇಕರಿ ರಘು ಬುಧವಾರದಂದು ಬೆಂಗಳೂರಿನ 31ನೇ ಎಸಿಎಂಎಂ ನ್ಯಾಯಾಲಯಕ್ಕೆ ಶರಣಾಗಿದ್ದಾನೆ. ಬ್ಯಾಟರಾಯನಪುರ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ರಘು ಡಕಾಯಿತಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬೇಕಾಗಿದ್ದನಂತೆ. 8 ವರ್ಷಗಳವರೆಗೆ ತಲೆಮರೆಸಿಕೊಂಡು ಓಡಾಡುತ್ತಿದ್ದ ರೌಡಿಯೊಬ್ಬ ಇದ್ದಕ್ಕಿದ್ದಂತೆ ನ್ಯಾಯಾಲಯದ ಎದರು ಶರಣಾಗಿರುವುದು ಬೆಣಗಳೂರಿನ ಜನರಲ್ಲಿ ಸೋಜಿಗ ಹುಟ್ಟಿಸಿದೆ.

ಅವನಿಗೆ ಶರಣಾಗುವಂಥ ಪರಿಸ್ಥಿತಿ ನಿರ್ಮಿಸಲಾಯಿತೋ ಅಥವಾ ಅವನು ಸ್ವಯಂ ಪ್ರೇರಿತನಾಗಿ ಕೋರ್ಟ್​ಗೆ ಶರಣಾದನೋ ಎನ್ನುವುದು ಇನ್ನೂ ಖಚಿತಲಾಗಿಲ್ಲ.

ಬೆಳಗಾವಿ ವರದಿ

ಬೆಳಗಾವಿ ಜಿಲ್ಲೆಯಿಂದ ವರದಿಯಾಗಿರುವ ಒಂದು ಹೃದಯ ವಿದ್ರಾವಕ ಘಟನೆಯಲ್ಲಿ ವ್ಯಕ್ತಿಯೊಬ್ಬ ತನ್ನ ಇಬ್ಬರು ಹೆಣ್ಣುಮಕ್ಕಳಿಗೆ ವಿಷವುಣಿಸಿ ತಾನೂ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ. ತಂದೆಯ ಕೈಯಿಂದಲೇ ವಿಷವುಂಡ 8-ವರ್ಷ ವಯಸ್ಸಿನ ಅಂಜಲಿ ಮತ್ತು 5-ವರ್ಷ ವಯಸ್ಸಿನ ಅನನ್ಯಾ ಸಾವನ್ನಪ್ಪಿದ್ದಾರೆ.

ಆದರೆ 45-ವರ್ಷ ವಯಸ್ಸಿನ ಅನಿಲ್ ಬಾಂಧೇಕರ್ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆತನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ಅನಿಲ್ ಬಾಂಧೇಕರ್ ಇಂಥ ಹತಾಷ ನಿರ್ಧಾರ ಯಾಕೆ ತೆಗೆದುಕೊಂಡ ಎನ್ನವುದು ಗೊತ್ತಾಗಿಲ್ಲ. ಸದರಿ ಘಟನೆಯು ಬೆಳಗಾವಿ ತಾಲೂಕಿ ಕೆ ಎಚ್ ಕಂಗ್ರಾಳಿ ಎಂಬ ಗ್ರಾಮದಲ್ಲಿ ನಡೆದಿದೆ.

ಘಟನಾ ಸ್ಥಳಕ್ಕೆ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ವಿಕ್ರಂ ಆಮಟೆ ಅವರು ಭೇಟಿ ನೀಡಿ ಕೃತ್ಯ ನಡೆದ ಮನೆಯ ಕೋಣೆಯನ್ನು ಪರಿಶೀಲನೆ ನಡೆಸಿದ್ದಾರೆ. ಮನೆ ಮಾಲೀಕರಿಂದ ಅನಿಲ್ ಬಾಂಧೆಕರ್ ಬಗ್ಗೆ ವಿಚಾರಣೆ ಸಹ ನಡೆಸಲಾಗಿದೆ

ಬಿಮ್ಸ್ ಆಸ್ಪತ್ರೆಯಲ್ಲಿ ಅನಿಲ್ ಬಾಂಧೆಕರ್ ಗೆ ಚಿಕಿತ್ಸೆ ಮುಂದುವರೆದಿದ್ದು ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Bengaluru Crime: ಆಟವಾಡಲು ಪಕ್ಕದ ಮನೆಗೆ ಹೋಗಿದ್ದೇ ತಪ್ಪಾಯ್ತು; ಮಗಳನ್ನು ಹೊಡೆದು, ಕ್ಯಾಂಡಲ್​ನಿಂದ ಕೈ ಸುಟ್ಟ ತಾಯಿ

Published On - 9:58 pm, Wed, 14 July 21