AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Crime: ಆಟವಾಡಲು ಪಕ್ಕದ ಮನೆಗೆ ಹೋಗಿದ್ದೇ ತಪ್ಪಾಯ್ತು; ಮಗಳನ್ನು ಹೊಡೆದು, ಕ್ಯಾಂಡಲ್​ನಿಂದ ಕೈ ಸುಟ್ಟ ತಾಯಿ

ಬೆಂಗಳೂರಿನ ಹೆಬ್ಬಾಳದ 35 ವರ್ಷದ ಮಹಿಳೆ ತಮ್ಮ ಮಗಳು ಮನೆಯಲ್ಲಿ ಆಟವಾಡುತ್ತಿದ್ದಾಗ ಬಿದ್ದು ಬಲಗೈಗೆ ಪೆಟ್ಟು ಮಾಡಿಕೊಂಡಿದ್ದಾಳೆ ಎಂದು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಆ ಗಾಯದ ಹಿಂದಿನ ಅಸಲಿ ಸಂಗತಿ ನಂತರ ಬಯಲಾಗಿದೆ.

Bengaluru Crime: ಆಟವಾಡಲು ಪಕ್ಕದ ಮನೆಗೆ ಹೋಗಿದ್ದೇ ತಪ್ಪಾಯ್ತು; ಮಗಳನ್ನು ಹೊಡೆದು, ಕ್ಯಾಂಡಲ್​ನಿಂದ ಕೈ ಸುಟ್ಟ ತಾಯಿ
ಮೇಣದ ಬತ್ತಿಯ ಸಾಂದರ್ಭಿಕ ಚಿತ್ರ
ಸುಷ್ಮಾ ಚಕ್ರೆ
|

Updated on: Jul 10, 2021 | 5:03 PM

Share

ಬೆಂಗಳೂರು: ‘ಕೆಟ್ಟ ಮಕ್ಕಳಾದರೂ ಇರಬಹುದು ಆದರೆ, ಕೆಟ್ಟ ತಾಯಿ ಇರಲಾರಳು’ ಎಂಬ ಮಾತೊಂದಿದೆ. ಆದರೆ, ಅದಕ್ಕೆ ಅಪವಾದವೆಂಬಂತೆ ಬೆಂಗಳೂರಿನ ಮಹಿಳೆಯೊಬ್ಬರು ತಮ್ಮ ಮಗಳು ಪಕ್ಕದ ಮನೆಗೆ ಆಟವಾಡಲು ಹೋದಳೆಂಬ ಕಾರಣಕ್ಕೆ ಆಕೆಯನ್ನು ಮನಬಂದಂತೆ ಥಳಿಸಿ, ಕ್ಯಾಂಡಲ್​ನಿಂದ ಕೈಯನ್ನು ಸುಟ್ಟಿದ್ದಾರೆ. ಜೂನ್ ಅಂತ್ಯದಲ್ಲೇ ನಡೆದಿದ್ದ ಈ ಘಟನೆ ಜುಲೈ 5ರಂದು ಬೆಳಕಿಗೆ ಬಂದಿದೆ.

ಬೆಂಗಳೂರಿನ ಹೆಬ್ಬಾಳದ 35 ವರ್ಷದ ಮಹಿಳೆ ಜುಲೈ 5ರಂದು ತಮ್ಮ ಮಗಳು ಮನೆಯಲ್ಲಿ ಆಟವಾಡುತ್ತಿದ್ದಾಗ ಬಿದ್ದು ಬಲಗೈಗೆ ಪೆಟ್ಟು ಮಾಡಿಕೊಂಡಿದ್ದಾಳೆ ಎಂದು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ವೈದ್ಯರಿಗೆ ಅದು ಬಿದ್ದಾಗ ಆದ ಗಾಯದಂತೆ ಕಾಣಲಿಲ್ಲ. ಬಾಲಕಿಯ ಕೈ ಮೇಲೆ ಸುಟ್ಟ ಗಾಯಗಳಾಗಿದ್ದರಿಂದ ಅನುಮಾನಗೊಂಡ ವೈದ್ಯರು ಪೊಲೀಸರಿಗೆ ಈ ವಿಷಯ ತಿಳಿಸಿದ್ದರು.

ಆಸ್ಪತ್ರೆಗೆ ಬಂದ ಪೊಲೀಸರು ಬಾಲಕಿಯನ್ನು ವಿಚಾರಿಸಿದಾಗ ಆಕೆ ಎಲ್ಲವನ್ನೂ ಬಾಯಿಬಿಟ್ಟಳು. ‘ನಾನು ಪಕ್ಕದ ಮನೆಯಲ್ಲಿ ಆಟವಾಡುತ್ತಿದ್ದೆ. ನನ್ನ ಅಮ್ಮ ಕೆಲಸಕ್ಕೆಂದು ಹೊರಗೆ ಹೋಗಿದ್ದರು. ಅವರು ವಾಪಾಸ್ ಬಂದಾಗ ನಾನು ಪಕ್ಕದ ಮನೆಯವರ ಜೊತೆ ಆಟವಾಡುತ್ತಿದ್ದುದನ್ನು ನೋಡಿ ಕೋಪ ಮಾಡಿಕೊಂಡು ಕೂಗಾಡಿದರು. ನನ್ನನ್ನು ಮನೆಗೆ ಎಳೆದುಕೊಂಡು ಹೋಗಿ ಕೋಲಿನಿಂದ ಹೊಡೆದರು. ಆಮೇಲೆ ಕ್ಯಾಂಡಲ್ ಹಚ್ಚಿ ಅದರಿಂದ ನನ್ನ ಬಲಗೈ ಸುಟ್ಟರು. ಕ್ಯಾಂಡಲ್​ನ ಮೇಣ ಅಂಟಿಕೊಂಡು ಕೈನ ಚರ್ಮ ಸುಟ್ಟುಹೋಗಿತ್ತು. ಹೀಗಾಗಿ, ಅಮ್ಮ ಆಸ್ಪತ್ರೆಗೆ ಕರೆದುಕೊಂಡು ಬಂದರು’ ಎಂದು ಬಾಲಕಿ ಪೊಲೀಸರ ಎದುರು ಹೇಳಿಕೆ ನೀಡಿದ್ದಾಳೆ.

ಬಾಲಕಿಯ ಹೇಳಿಕೆ ಆಧಾರದಲ್ಲಿ ಪೊಲೀಸರು ಆಕೆಯ ತಾಯಿಯ ಮೇಲೆ ಕೇಸ್ ದಾಖಲಿಸಿಕೊಂಡಿದ್ದಾರೆ. ಬಾಲಕಿಯ ತಾಯಿಯನ್ನು ಬಂಧಿಸಲಾಗಿದ್ದು, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಪೊಲೀಸರು ನನ್ನ ಮಗಳನ್ನು ಹೆದರಿಸಿ ಹೇಳಿಕೆ ಪಡೆದಿದ್ದಾರೆ, ನಾನು ನನ್ನ ಮಗಳ ಕೈಯನ್ನು ಸುಟ್ಟಿಲ್ಲ ಎಂದು ಆಕೆ ವಾದಿಸಿದ್ದಾರೆ.

ಇದನ್ನೂ ಓದಿ: Crime News: ಹೆದ್ದಾರಿ ಬಳಿ ಅರ್ಧ ಸುಟ್ಟ ಸ್ಥಿತಿಯಲ್ಲಿ ಕಾಲೇಜು ಯುವತಿ ಪತ್ತೆ, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು

ಇದನ್ನೂ ಓದಿ: ಶೇ.70ರಷ್ಟು ಬೆಂಗಳೂರಿಗರಿಗೆ ಕೊರೊನಾ ಸದ್ದಿಲ್ಲದೇ ಬಂದು ಹೋಗಿದೆ; ಐಸಿಎಂಆರ್​ ಸೆರೋ ಸರ್ವೆಯಲ್ಲಿ ಬಯಲಾಯ್ತು ಅಚ್ಚರಿ

( Bengaluru Mother Thrashes Daughter and Burns her Hand with Candle for Playing at Neighbour’s House)