ಬೆಂಗಳೂರಿನಲ್ಲಿ ಆನ್ಲೈನ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ: 6 ಆರೋಪಿಗಳ ಬಂಧನ
ಬೆಂಗಳೂರಿನಲ್ಲಿ ಆನ್ಲೈನ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ಮಾಡಿದ್ದು, ಖಚಿತ ಮಾಹಿತಿ ಮೇಲೆ ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಪೊಲೀಸ್ ಇನ್ಸ್ಪೆಕ್ಟರ್ ಹನುಮಂತರಾಯ ಭರ್ಜರಿ ಕಾರ್ಯಾಚರಣೆ ಮಾಡಿ 6 ಆರೋಪಿಗಳ ಬಂಧನ ಮಾಡಲಾಗಿದೆ.
ನೆಲಮಂಗಲ, ಅಕ್ಟೋಬರ್ 15: ಬೆಂಗಳೂರಿನಲ್ಲಿ ಆನ್ಲೈನ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ಮಾಡಿದ್ದು, ಖಚಿತ ಮಾಹಿತಿ ಮೇಲೆ ಸಿಸಿಬಿ (CCB) ಮಹಿಳಾ ಸಂರಕ್ಷಣಾ ದಳದ ಪೊಲೀಸ್ ಇನ್ಸ್ಪೆಕ್ಟರ್ ಹನುಮಂತರಾಯ ಭರ್ಜರಿ ಕಾರ್ಯಾಚರಣೆ ಮಾಡಿ 6 ಆರೋಪಿಗಳ ಬಂಧನ ಮಾಡಲಾಗಿದೆ. ಮಂಜುನಾಥ್, ಶಿವರಾಜ್, ಉಮೇಶ್, ಬಸವರಾಜ್, ರಾಯ, ಪ್ರದೀಪ್ ಬಂಧಿತರು. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಸುಂದರ ಹುಡುಗಿಯರ ಫೋಟೊಗಳನ್ನು ವೆಬ್ ಸೈಟ್ ಮೂಲಕ www.locanto.com ಅಪ್ಲೋಡ್ ಮಾಡಿ, ಮೊಬೈಲ್ ನಂಬರ್ಗಳ ಮೂಲಕ ಲಾಗಿನ್ ಆಗುವ ಗಿರಾಕಿಗಳನ್ನ ಸೆಳೆಯುತ್ತಿದ್ದರು. ಗಿರಾಕಿಗಳು ಬಯಸುವ ಹುಡುಗಿಯರನ್ನು, ಬೇರೆ ಬೇರೆ ರಾಜ್ಯಗಳಿಂದ ಬೆಂಗಳೂರಿಗೆ ಕರತಂದು ಆರೋಪಿಗಳು ಅಕ್ರಮವಾಗಿ ವೇಶ್ಯವಾಟಿಕೆ ದಂಧೆ ನಡೆಸುತ್ತಿದ್ದರು.
ನೀರಿನಲ್ಲಿ ಈಜಲು ಹೋಗಿ ವಿದ್ಯಾರ್ಥಿ ಸಾವು
ತುಮಕೂರು: ನೀರಿನಲ್ಲಿ ಈಜಲು ಹೋಗಿ ವಿದ್ಯಾರ್ಥಿ ಸಾವನ್ನಪ್ಪಿರುವಂತಹ ಘಟನೆ ತುಮಕೂರು ತಾಲೂಕಿನ ಮೈದಾಳ ಕೆರೆಯಲ್ಲಿ ನಡೆದಿದೆ. ನಂದು (20) ಮೃತ ದುರ್ದೈವಿ. ಸ್ನೇಹಿತರ ಜೊತೆ ಬಂದಿದ್ದ ಎನ್ನಲಾಗಿದೆ. ಮೃತನ ವಿಳಾಸ ಪತ್ತೆಯಾಗಬೇಕಿದೆ. ಕ್ಯಾತ್ಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ಕಾರು ತೊಳೆಯಲು ಹೋಗಿದ್ದ ಬಾಲಕನಿಗೆ ವಿದ್ಯುತ್ ತಗುಲಿ ಸಾವು
ಬೆಳಗಾವಿ: ಪೇಪರ್ ಹಾಕಲು ಹೋಗಿದ್ದ ಬಾಲಕನಿಗೆ ಕರೆಂಟ್ ತಗುಲಿ ಸಾವನ್ನಪ್ಪಿರುವಂತಹ ಘಟನೆ ಬೆಳಗಾವಿಯ ಭಾಗ್ಯ ನಗರದಲ್ಲಿ ನಡೆದಿದೆ. ಅನಗೋಳ ನಿವಾಸಿ ರಜತ್ ಗೌರವ್(14) ಮೃತ ಬಾಲಕ. ಪೇಪರ್ ಹಾಕಿದ ಮೇಲೆ ಯಲ್ಲಪ್ಪ ಚೌಗಲೆ ಎಂಬುವವರು ಕಾರು ತೊಳೆಯಲು ಹೇಳಿದ್ದಾರೆ.
ಇದನ್ನೂ ಓದಿ: ಕೊಪ್ಪಳದಲ್ಲಿ ಯುವತಿ ಮೇಲೆ ಅತ್ಯಾಚಾರ ಪ್ರಕರಣ: ಓರ್ವ ಆರೋಪಿಯ ಬಂಧನ; ಮೂವರಿಗಾಗಿ ಶೋಧ
ಹಣ ಕೊಡುವುದಾಗಿ ಹೇಳಿದ್ದಕ್ಕೆ ಬಾಲಕ ಕಾರು ತೋಳೆಯಲು ಮುಂದಾಗಿದ್ದ. ಈ ವೇಳೆ ಮೋಟರ್ನ ವೈಯರ್ ತುಂಡಾಗಿದ್ದನ್ನ ಬಾಲಕ ಮುಟ್ಟಿದ್ದು, ಸ್ಥಳದಲ್ಲೇ ಒದ್ದಾಡಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.
ಕಾರು ಮಾಲೀಕ ಯಲ್ಲಪ್ಪ ಚೌಗಲೆ ನಿರ್ಲಕ್ಷ್ಯದಿಂದ ಬಾಲಕ ಸಾವು ಆರೋಪ ಕೇಳಿಬಂದಿದ್ದು, ರಜತ್ ಕುಟುಂಬಸ್ಥರಿಂದ ಯಲ್ಲಪ್ಪನ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿದೆ. ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಯಲ್ಲಪ್ಪ ಚೌಗಲೆ ವಿರುದ್ಧ ದೂರು ದಾಖಲು ಮಾಡಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.