ಕೊಪ್ಪಳ: ಜಾತ್ರೆ, ಸಂತೆ, ಸಭೆ ಸಮಾರಂಭಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಇದೀಗ ಬಿಜೆಪಿ ಸಂಕಲ್ಪ ಯಾತ್ರೆಯಲ್ಲೂ (BJP Jana Sankalpa Yatra )ಸಹ ಕಳ್ಳರು ತಮ್ಮ ಕರಾಮತ್ತು ತೋರಿಸಿದ್ದಾರೆ.
ಇಂದು(ಅಕ್ಟೋಬರ್ 12) ಕೊಪ್ಪಳ ಜಿಲ್ಲೆ ಕುಷ್ಟಗಿಯಲ್ಲಿ ಆಯೋಜಿಸಿದ್ದ ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಹಣ, ಮೊಬೈಲ್ ಕಳ್ಳತನವಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಹುಬ್ಬಳ್ಳಿ: ಸ್ಕೂಟಿಯಲ್ಲಿದ್ದ 5 ಲಕ್ಷ ರೂ ಎಗರಿಸಿದ ಚಾಲಾಕಿ ಖದೀಮರು
ಬಿಎಸ್ ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬಹಳಷ್ಟು ಜನಸಂಖ್ಯೆ ಸೇರಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಖದೀಮರು, ಸಮಾವೇಶಕ್ಕೆ ಆಗಮಿಸಿದ್ದವರ ಹಣ, ಮೊಬೈಲ್ ಕಳ್ಳತನ ಮಾಡಿದ್ದಾರೆ.
ನೂರಾರು ಪೊಲೀಸರು ಇದ್ದರೂ ಸಹ ನಾಲ್ವರು ಪತ್ರಕರ್ತರು ಸೇರಿ 26 ಜನರ ಹಣ, ಮೊಬೈಲ್ ಕಳ್ಳತನವಾಗಿದ್ದು, ಈ ಬಗ್ಗೆ 26 ಜನರು ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.