Tamilnadu: ತೃತೀಯ ಲಿಂಗಿಯ ಮೇಲೆ ಹಲ್ಲೆ, ಬಲವಂತವಾಗಿ ಕೂದಲು ಕತ್ತರಿಸಿದ ಇಬ್ಬರು ಆರೋಪಿಗಳ ಬಂಧನ
ತೃತೀಯಲಿಂಗಿಯ ಮೇಲೆ ಹಲ್ಲೆ ನಡೆಸಲಾಗಿದೆ. ಆಕೆಯನ್ನು ಅಪಹಾಸ್ಯ, ರೀತಿಯಲ್ಲಿ ಆಕೆಯನ್ನು ನಡೆಸುಕೊಳ್ಳಲಾಗಿದೆ ಎಂದು ಹೇಳಲಾಗಿದೆ ಮತ್ತು ಆಕೆಯ ಕೂದಲನ್ನು ಇಬ್ಬರು ಪುರುಷರು ಕತ್ತರಿಸಿದ್ದಾರೆ

ಚೆನ್ನೈ: ಇಂದು (ಗುರುವಾರ) ತಮಿಳುನಾಡಿನ (Tamilnadu) ಟ್ಯುಟಿಕೋರಿನ್ನಲ್ಲೊಂದು ಅವಮಾನಿಯ ಘಟನೆಯೊಂದು ನಡೆದಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತೃತೀಯಲಿಂಗಿಯ (transgender) ಮೇಲೆ ಹಲ್ಲೆ ನಡೆಸಲಾಗಿದೆ. ಆಕೆಯನ್ನು ಅಪಹಾಸ್ಯ, ರೀತಿಯಲ್ಲಿ ಆಕೆಯನ್ನು ನಡೆಸುಕೊಳ್ಳಲಾಗಿದೆ ಎಂದು ಹೇಳಲಾಗಿದೆ ಮತ್ತು ಆಕೆಯ ಕೂದಲನ್ನು ಇಬ್ಬರು ಪುರುಷರು ಕತ್ತರಿಸಿದ್ದಾರೆ. ಈ ವೀಡಿಯೋದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿಗಳನ್ನು ಬಂಧಿಸಲಾಗಿದೆ.
ತೃತೀಯಲಿಂಗಿಗಳ ಹಕ್ಕುಗಳ ಕಾರ್ಯಕರ್ತ ಗ್ರೇಸ್ ಬಾನು ಅವರು ಹಂಚಿಕೊಂಡ 19 ಸೆಕೆಂಡುಗಳ ವೀಡಿಯೊದಲ್ಲಿ, ಒಬ್ಬ ವ್ಯಕ್ತಿ ರೇಜರ್ ಬಳಸಿ ತೃತೀಯಲಿಂಗಿಯ ಉದ್ದನೆಯ ಕೂದಲನ್ನು ಕತ್ತರಿಸುತ್ತಾನೆ. ತೃತೀಯಲಿಂಗಿ ಮತ್ತು ಆಕೆಯ ಪಕ್ಕದಲ್ಲಿ ಕುಳಿತಿರುವ ಇನ್ನೊಬ್ಬ ತೃತೀಯಲಿಂಗಿಯನ್ನು ನಿಂದಿಸುತ್ತಿರುವ ಮತ್ತು ಕೊದಲು ಕತ್ತರಿಸಿ ಎಸೆಯುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಇವರಗಳು (ಮಂಗಳಮುಖಿಗಳು) ಗಂಡಸರನ್ನು ಹಣಕ್ಕಾಗಿ ಪೀಡಿಸುತ್ತಾರೆ. ನಾವು ಅವರನ್ನು ಏನು ಮಾಡಬೇಕು? ಇನ್ನೂ ಮುಂದೆ ಈ ರೀತಿಯ ವರ್ತನೆ ನಡೆಯಬಾರದು ಅದಕ್ಕೆ ಈ ಶಿಕ್ಷೆ, ನೀವು ಚೆನ್ನಾಗಿ ಕಾಣುತ್ತೀರಿ, ಸುಂದರವಾಗಿ ಕಾಣುತ್ತೀರಿ, ಎಂದು ಅವರು ಹೇಳುವುದನ್ನು ಕೇಳಲಾಗುತ್ತದೆ.
Couple of trans women attacked by this goons @tnpoliceoffl @CityTirunelveli @TUTICORINPOLICE @sivagangapolice @mducollector @maduraipolice .Break your silence pic.twitter.com/HHwGuTJtI2
— GRACE BANU (@thirunangai) October 12, 2022
ಮತ್ತೊಂದು ವೀಡಿಯೊದಲ್ಲಿ, ತೃತೀಯಲಿಂಗಿಯು ಅಸಹಾಯಕಳಾಗಿ ಒಂದು ಕಣ್ಣು ಊದಿಕೊಂಡಂತೆ ನೆಲದ ಮೇಲೆ ಕುಳಿತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಇಂತಹ ಹಿಂಸಾಚಾರ ಯಾವಾಗ ಕೊನೆಗೊಳ್ಳುತ್ತದೆ ಎಂದು ಬಾನು ತಮ್ಮ ಟ್ವೀಟ್‌ನಲ್ಲಿ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: ಪಾಕಿಸ್ತಾನದ ಕರಾಚಿಯಲ್ಲಿ ಪ್ರವಾಹ ಸಂತ್ರಸ್ತರು ಪ್ರಯಾಣಿಸುತ್ತಿದ್ದ ಬಸ್ಗೆ ಬೆಂಕಿ; 21 ಜನ ಸಜೀವ ದಹನ
ತಮಿಳುನಾಡು ದಕ್ಷಿಣ ವಲಯ ಪೊಲೀಸರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಬಾನು ಟ್ವೀಟ್ ಮಾಡಿದ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅವರನ್ನು ನೋವಾ ಮತ್ತು ವಿಜಯ್ ಎಂದು ಗುರುತಿಸಲಾಗಿದೆ. ಇಬ್ಬರೂ ಪುರುಷರು ಇಬ್ಬರು ಮಂಗಳಮುಖಿಗಳಿಗೆ ಮಹಿಳೆಯರಿಗೆ ಚಿರಪರಿಚಿತರು. ಈ ಇಬ್ಬರು ಆರೋಪಿಗಳಲ್ಲಿ ಒಬ್ಬರು ಅವಳೊಂದಿಗೆ ಸಂಬಂಧ ಹೊಂದಿದ್ದರು, ಆದರೆ ಇದೀಗ ಅವರಿಬ್ಬರೂ ದೂರವಾಗಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.
Published On - 11:47 am, Thu, 13 October 22