Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿ: ಸ್ಕೂಟಿಯಲ್ಲಿದ್ದ 5 ಲಕ್ಷ ರೂ ಎಗರಿಸಿದ ಚಾಲಾಕಿ ಖದೀಮರು

ಸ್ಕೂಟಿಯಲ್ಲಿದ್ದ 5 ಲಕ್ಷ ರೂ. ಕದ್ದು ಕಳ್ಳರು ಪರಾರಿಯಾಗಿರುವ ಘಟನೆ ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿ ನಡೆದಿದೆ.

ಹುಬ್ಬಳ್ಳಿ: ಸ್ಕೂಟಿಯಲ್ಲಿದ್ದ 5 ಲಕ್ಷ ರೂ ಎಗರಿಸಿದ ಚಾಲಾಕಿ ಖದೀಮರು
ಸ್ಕೂಟಿಯನ್ನು ಪರಿಶೀಲಿಸುತ್ತಿರುವ ಪೊಲೀಸರು
Follow us
TV9 Web
| Updated By: ವಿವೇಕ ಬಿರಾದಾರ

Updated on:Oct 12, 2022 | 9:46 PM

ಧಾರವಾಡ: ಸ್ಕೂಟಿಯಲ್ಲಿದ್ದ 5 ಲಕ್ಷ ರೂ. ಕದ್ದು ಕಳ್ಳರು ಪರಾರಿಯಾಗಿರುವ ಘಟನೆ ಹುಬ್ಬಳ್ಳಿಯ (Hubli) ದೇಶಪಾಂಡೆ ನಗರದಲ್ಲಿ ನಡೆದಿದೆ. ಅಹಮ್ಮದಬಾದ್ ನಿವಾಸಿ ವಿಜಯಕುಮಾರ್ ಜೈನ್ ಎಂಬುವರ ಹಣ ಕಳ್ಳತನವಾಗಿದೆ. ವಿಜಯಕುಮಾರ್ ಮನೆ ವ್ಯವಹಾರಕ್ಕಾಗಿ ಐದು ಲಕ್ಷ ಹಣ ತೆಗೆದುಕೊಂಡು ಹೋಗುತ್ತಿದ್ದರು. ಇದನ್ನು ಗಮನಿಸಿದ್ದ ಖದೀಮರು ವಿಜಯಕುಮಾರ್ ನನ್ನ ಫಾಲೋ ಮಾಡಿದ್ದಾರೆ. ದೇಶಪಾಂಡೆ ನಗರದಲ್ಲಿ ಟ್ರಾಫಿಕ್ ಜಾಮ್ ಸಮಯದಲ್ಲಿ, ಚಾಲಾಕಿ ಖದೀಮರು ಸ್ಕೂಟಿಯಲ್ಲಿದ್ದ 5 ಲಕ್ಷ ಎಗುರಿಸಿ ಎಸ್ಕೆಪ್​ ಆಗಿದ್ದಾರೆ. ಚಾಲಾಕಿ ಕಳ್ಳರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಸ್ಥಳಕ್ಕೆ ಹುಬ್ಬಳ್ಳಿ ಧಾರವಾಡ ಕಮೀಷನರ್ ಲಾಭೂರಾಮ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಟ್ರಕ್‌ನಿಂದ 1.3 ಕೋಟಿ ರೂಪಾಯಿ ಮೌಲ್ಯದ ಸಿಗರೇಟ್ ಲೂಟಿ ಮಾಡಿದ ಡಕಾಯಿತರು

ಮುಂಬೈಮುಂಬೈ-ಅಹಮದಾಬಾದ್ ಹೆದ್ದಾರಿಯಲ್ಲಿ ಮಂಗಳವಾರ ಬೆಳಗ್ಗೆ ಸುಮಾರು ಆರು ಶಸ್ತ್ರಸಜ್ಜಿತ ಡಕಾಯಿತರು 1.3 ಕೋಟಿ ರೂಪಾಯಿ ಮೌಲ್ಯದ ಸಿಗರೇಟ್ ಸಾಗಿಸುತ್ತಿದ್ದ ಟ್ರಕ್ ಅನ್ನು ಲೂಟಿ ಮಾಡಿದ್ದಾರೆ. ದುಷ್ಕರ್ಮಿಗಳು ಟ್ರಕ್ ಚಾಲಕನಿಗೂ ಥಳಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನವಿ ಮುಂಬೈನ ರಬಲೆಯಿಂದ ಜೈಪುರ ಕಡೆಗೆ ಹೋಗುತ್ತಿದ್ದ ಟ್ರಕ್ ಅನ್ನು ಮುಂಬೈ-ಅಹಮದಾಬಾದ್ ಹೆದ್ದಾರಿಯಲ್ಲಿ ತಡೆದು ನಿಲ್ಲಿಸಿ ಲೂಟಿ ಮಾಡಲಾಗಿದೆ.

ವರದಿಗಳ ಪ್ರಕಾರ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಡಕಾಯಿತರು ಸಕ್ವಾರ್ ಗ್ರಾಮದ ಬಳಿ ಟ್ರಕ್ ಅನ್ನು ಅಡ್ಡಗಟ್ಟಿ, ಚಾಲಕನಿಗೆ ಥಳಿಸಿದರು ಮತ್ತು ಅವರು ಕಣ್ಣಿಗೆ ಬಟ್ಟೆ ಕಟ್ಟಿದ್ದರು, ಚಾಲಕನನ್ನು ಅಲ್ಲಿಂದ ಕಿಡ್ನಾಪ್ ಮಢಿದ್ದಾರೆ. ದುಷ್ಕರ್ಮಿಗಳು ಸರಕುಗಳನ್ನು ಖಾಲಿ ಮಾಡಿ ಟ್ರಕ್​ನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ. ಅವರು ಚರೋಟಿ ಟೋಲ್ ಬೂತ್ ಬಳಿ ಚಾಲಕನನ್ನು ಬಿಡುಗಡೆ ಮಾಡಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:06 pm, Wed, 12 October 22