ರಾಮನಗರ: 6 ವರ್ಷದ ಬಾಲಕಿ ಮೇಲೆ 16 ವರ್ಷದ ಬಾಲಕನಿಂದ ಅತ್ಯಾಚಾರ

6 ವರ್ಷದ ಬಾಲಕಿ ಮೇಲೆ 16 ವರ್ಷದ ಬಾಲಕ ಅತ್ಯಾಚಾರ ಮಾಡಿರುವ ಘಟನೆ ಕನಕಪುರ ತಾಲೂಕಿನ ಹಾರೋಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ರಾಮನಗರ: 6 ವರ್ಷದ ಬಾಲಕಿ ಮೇಲೆ 16 ವರ್ಷದ ಬಾಲಕನಿಂದ ಅತ್ಯಾಚಾರ
Four people died due to electrocution when they went to install the pump motor in the dam kannada National News
Follow us
TV9 Web
| Updated By: ವಿವೇಕ ಬಿರಾದಾರ

Updated on:Oct 12, 2022 | 10:20 PM

ರಾಮನಗರ: 6 ವರ್ಷದ ಬಾಲಕಿ ಮೇಲೆ 16 ವರ್ಷದ ಬಾಲಕ ಅತ್ಯಾಚಾರ (Rape) ಮಾಡಿರುವ ಘಟನೆ ಕನಕಪುರ (Kanakpur) ತಾಲೂಕಿನ ಹಾರೋಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಾಲಕ, ಪಾಠ ಹೇಳಿಕೊಡುವ ನೆಪದಲ್ಲಿ ಬಾಲಕಿ ಮನೆಗೆ ಬಂದಿದ್ದಾನೆ. ಈ ವೇಳೆ ಬಾಲಕಿಯ ಪೋಷಕರು ಕೆಲಸಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಬಳಿಕ ತಾಯಿ ಮನೆಗೆ ಬಂದಾಗ ಬಾಲಕಿ ಘಟನೆ ಬಗ್ಗೆ ತಾಯಿಗೆ ಹೇಳಿದ್ದಾಳೆ. ಸಂತ್ರಸ್ತೆ ತಾಯಿ ಹಾರೋಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಆರೋಪಿ ಬಾಲಕನನ್ನು ವಶಕ್ಕೆ ಪಡೆದು, ಬೆಂಗಳೂರಿನ ಬಾಲಮಂದಿರಕ್ಕೆ ಕರೆತಂದಿದ್ದಾರೆ.

ಕಾಣೆಯಾಗಿದ್ದ ಅಪ್ರಾಪ್ತ ತನ್ನ ಸೀನಿಯರ್ ಮನೆಯಲ್ಲಿ ಪತ್ತೆ: ಗರ್ಭಿಣಿ ವಿದ್ಯಾರ್ಥಿನಿ ಬಂಧನ

 ವ್ಯಕ್ತಿಯೊಬ್ಬ ಅಪ್ರಾಪ್ತ ವಯಸ್ಸಿನ ಹುಡುಗಿಯನ್ನು ಮದುವೆಯಾಗಿದ್ದನ್ನು ಸಾಕಷ್ಟು ನೋಡಿದ್ದೇವೆ. ಕೇಳಿದ್ದೇವೆ. ಅಲ್ಲದೇ ಬಾಲ್ಯ ವಿವಾಹದ ಅಡಿಯಲ್ಲಿ ಜೈಲಿಗೆ ಹೋಗಿರುವ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಮುಂದೆ ಇವೆ. ಆದ್ರೆ, ಇಲ್ಲೋರ್ವ ಯುವತಿ ತನಗಿಂತ ಚಿಕ್ಕ ಅಂದ್ರೆ, ಅಪ್ರಾಪ್ತ ವಯಸ್ಸಿನವನನ್ನು ಮದುವೆಯಾಗಿ ಇದೀಗ ಜೈಲು ಸೇರಿದ್ದಾಳೆ.

ಹೌದು….ಅಪ್ರಾಪ್ತನ ಜೊತೆ ವಿವಾಹವಾಗಿ ಗರ್ಭಿಣಿಯಾಗಿದ್ದ 20 ವರ್ಷದ ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ತಮಿಳುನಾಡಿನ ಸೇಲಂ ಪೊಲೀಸರು ಬಂಧಿಸಿದ್ದಾರೆ.

ಕಳೆದ ಏಪ್ರಿಲ್ ತಿಂಗಳಿನಲ್ಲಿ ಅಪ್ರಾಪ್ತ ವಿದ್ಯಾರ್ಥಿಯೋರ್ವ ನಾಪತ್ತೆಯಾಗಿದ್ದ. ಈ ಬಗ್ಗೆ ವಿದ್ಯಾರ್ಥಿ ಪೋಷಕರು ಕೋರ್ಟ್ ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ನಂತರ ತನಿಖೆ ನಡೆಸಿದ ಪೊಲೀಸರು, ಅಪ್ರಾಪ್ತ ವಿದ್ಯಾರ್ಥಿ ಯುವತಿ ಜೊತೆ ವಾಸವಾಗಿರುವುದನ್ನು ಪತ್ತೆ ಮಾಡಿದ್ದಾರೆ.

ಬಳಿಕ ಪೊಲೀಸರು ಯುವತಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿ ಕೋರ್ಟ್​ಗೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆಕೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದೆ ಎಂದು ಸೇಲಂ ನಗರ ಪೊಲೀಸ್ ಕಮಿಷನರ್ ನಜ್ಮುಲ್ ಹೂಡಾ ಮಾಹಿತಿ ನೀಡಿದ್ದಾರೆ.

ಇಬ್ಬರೂ ಒಂದೇ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದು, ಅಪ್ರಾಪ್ತ ಬಾಲಕ ಬಂಧಿತಳಾದ ಯುವತಿಯ ಜೂನಿಯರ್ ಆಗಿದ್ದಾನೆ ಎಂದು ಈ ಬಗ್ಗೆ ಎನ್​ಡಿಟಿವಿ ವರದಿ ಮಾಡಿದೆ.

ಬಸ್​ ನಿಲ್ದಾಣದಲ್ಲೇ ತಾಳಿಕಟ್ಟಿದ ಭೂಪ

ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲೂ ಇದೇ ರೀತಿ ಘಟನೆ ನಡೆದಿದ್ದು, 17 ವರ್ಷದ ಹುಡುಗನೊಬ್ಬ, 16 ವರ್ಷದ ಬಾಲಕಿ ಜೊತೆ ವಿವಾಹವಾಗಿದ್ದ. ಬಸ್ ನಿಲ್ದಾಣದಲ್ಲಿ ಹುಡುಗ ಬಾಲಕಿಗೆ ತಾಳಿ ಕಟ್ಟುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಬಳಿಕ ಪ್ರಕರಣದ ಬಗ್ಗೆ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದರು.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:17 pm, Wed, 12 October 22