ಮೈಸೂರು: ಜಿಂಕೆ ಮಾಂಸ ಮಾರಾಟ ಆರೋಪಿ ವಿಚಾರಣೆ ವೇಳೆ ಸಾವು: ಇದು ಕೊಲೆ ಎಂದು ಕುಟುಂಬಸ್ಥರ ಆರೋಪ
ವಿಚಾರಣೆ ವೇಳೆ ಕರಿಯಪ್ಪನ ಸಾವಾಗಿದೆ. ಹೃದಯಾಘಾತದಿಂದ ಕರಿಯಪ್ಪ ಸಾವು ಎಂದು ಅರಣ್ಯ ಇಲಾಖೆ ಮೂಲಗಳಿಂದ ಮಾಹಿತಿ ಸಿಕ್ಕಿದೆ. ಆದ್ರೆ ಇದು ಕೊಲೆ ಅಂತಾ ಆರೋಪಿ ಕರಿಯಪ್ಪ ಪೋಷಕರು ಆರೋಪಿಸಿದ್ದಾರೆ.
ಮೈಸೂರು: ಜಿಲ್ಲೆಯ ಹೆಚ್ ಡಿ ಕೋಟೆ ತಾಲೂಕಿನ ಹೊಸಹಳ್ಳಿ ಹಾಡಿಯ ಕರಿಯಪ್ಪ ಎಂಬ ಜಿಂಕೆ ಮಾಂಸ ಮಾರಾಟ ಮಾಡುತ್ತಿದ್ದ ಆರೋಪಿ ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಮೃತ ಆರೋಪಿ ಮೂರು ದಿನಗಳ ಹಿಂದೆ ಜಿಂಕೆ ಮಾಂಸ ಮಾರಾಟ ಮಾಡಿದ್ದ. ವಿಚಾರಣೆಗೆ ಎಂದು ಆರೋಪಿಯನ್ನು ಕರೆದಿದ್ದಾಗ ಸಾವು ಸಂಭವಿಸಿದೆ. ಹೀಗಾಗಿ ಇದು ಕೊಲೆ ಎಂದು ಆರೋಪಿಯ ಕುಟುಂಬಸ್ಥರು ಆರೋಪಿಸಿದ್ದಾರೆ.
ಜಿಂಕೆ ಮಾಂಸ ಮಾರಾಟ ಕೇಸ್ ಸಂಬಂಧ ಅರಣ್ಯ ಇಲಾಖೆ ಸಿಬ್ಬಂದಿ ಬಸಪುರದ ಪ್ರಸಾದ್, ಮುನಿಯಪ್ಪ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಆರೋಪಿಗಳು ನೀಡಿದ ಮಾಹಿತಿ ಆಧಾರಿಸಿ ಕರಿಯಪ್ಪ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು ವಿಚಾರಣೆ ವೇಳೆ ಕರಿಯಪ್ಪನ ಸಾವಾಗಿದೆ. ಹೃದಯಾಘಾತದಿಂದ ಕರಿಯಪ್ಪ ಸಾವು ಎಂದು ಅರಣ್ಯ ಇಲಾಖೆ ಮೂಲಗಳಿಂದ ಮಾಹಿತಿ ಸಿಕ್ಕಿದೆ. ಆದ್ರೆ ಇದು ಕೊಲೆ ಅಂತಾ ಆರೋಪಿ ಕರಿಯಪ್ಪ ಪೋಷಕರು ಆರೋಪಿಸಿದ್ದಾರೆ. ವಿಚಾರಣೆ ನೆಪದಲ್ಲಿ ಗುಂಡ್ರೆ ಅರಣ್ಯ ವಲಯದ ಅರಣ್ಯ ಸಿಬ್ಬಂದಿಗಳು ಹೊಡೆದು ಸಾಯಿಸಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಜಮೀನೊಂದರಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಪತಿ-ಪತ್ನಿ ಶವ ಪತ್ತೆ
ಧಾರವಾಡ: ಚಿಕ್ಕಮಲ್ಲಿಗವಾಡ ಗ್ರಾಮದಲ್ಲಿ ಜಮೀನೊಂದರಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಪತಿ-ಪತ್ನಿ ಶವ ಪತ್ತೆಯಾಗಿದೆ. ಪತ್ನಿ ಶ್ರೀದೇವಿ ಕೊಂದು ಪತಿ ರಾಜು ರಾಮಾಪುರ ನೇಣಿಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಪತ್ನಿಯ ಶೀಲ ಶಂಕಿಸಿ ಪತಿ ಪತ್ನಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಪತ್ನಿ ಪಕ್ಕದಲ್ಲೇ ಪತಿ ರಾಜು ರಾಮಾಪುರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಧಾರವಾಡ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕವಾಗದಿದ್ದರೆ ಜನಾಕ್ರೋಶ ಎದುರಿಸಲು ಸಿದ್ಧರಾಗಿ: ಬಿಜೆಪಿಗೆ ಶ್ರೀರಾಮಸೇನೆ ಸವಾಲು
ಕ್ಷುಲ್ಲಕ ಕಾರಣಕ್ಕೆ ಕೊಲೆ ಮಾಡಿದ್ದ ಆರೋಪಿಗಳು ಅರೆಸ್ಟ್
ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಯುವಕನನ್ನ ಕೊಲೆ ಮಾಡಿದ್ದ ಆರೋಪಿಗಳನ್ನು ಕಲಾಸಿಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಸಯ್ಯದ್ ಆಸೀಫ್, ಮುಸೀರ್, ಸಲ್ಮಾನ್, ಸಿರಾಜ್ ಬಂಧಿತರು. ಆರೋಪಿಗಳು, ಗಾಂಜಾ ಕೇಳಿದ್ದಕ್ಕೆ ರಾಡ್ನಿಂದ ಹೊಡೆದು ಡೊಮನಿಕ್ ಎಂಬ ಯುವಕನನ್ನ ಕೊಲೆ ಮಾಡಿದ್ದರು.
ಬ್ರೇಕ್ ಫೇಲಾಗಿ ಕಬ್ಬಿನ ಗದ್ದೆಗೆ ನುಗ್ಗಿದ KSRTC ಬಸ್
ಬೆಳಗಾವಿ ಜಿಲ್ಲೆ ಯರಗಟ್ಟಿ ತಾಲೂಕಿನ ತಲ್ಲೂರು ಗ್ರಾಮದ ಬಳಿ ಸೋಮಾಪುರ ಗ್ರಾಮದಿಂದ ತಲ್ಲೂರಿಗೆ ಹೊರಟ್ಟಿದ್ದ KSRTC ಬಸ್ ಬ್ರೇಕ್ ಫೇಲಾಗಿ ಕಬ್ಬಿನ ಗದ್ದೆಗೆ ನುಗ್ಗಿದೆ. ಸದ್ಯ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. 30ಕ್ಕೂ ಹೆಚ್ಚು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ರಸ್ತೆ ಬದಿ ನಿಲ್ಲಿಸಿದ್ದ ಬೈಕ್ಗೆ ಡಿಕ್ಕಿಯಾಗಿ ಬಸ್ ಗದ್ದೆಗೆ ನುಗ್ಗಿದೆ. ಬಸ್ ಚಾಲಕ ಸೇರಿ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ
ರಾಮನಗರ: ನಗರದ ಕೆಂಪೇಗೌಡ ಸರ್ಕಲ್ ಬಳಿಯ ಮನೆಯಲ್ಲಿ ನೇಣು ಬಿಗಿದುಕೊಂಡು ಗೃಹಿಣಿ ಶಶಿಕಲಾ(32) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 11 ವರ್ಷಗಳ ಹಿಂದೆ ಸಂತೋಷ್ ಎಂಬಾತನ ಜೊತೆ ವಿವಾಹವಾಗಿದ್ದ ಮೃತ ಶಶಿಕಲಾ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಪತಿ ಸಂತೋಷ್ನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.