ಪ್ರಧಾನಿ ಮೋದಿಗೆ ಗೌರವ, ಅಂಬೇಡ್ಕರ್ಗೆ ಅಗೌರವ: ಮಂಡ್ಯ ಜಿಲ್ಲಾಡಳಿತದಿಂದ ಬಾಬಾ ಸಾಹೇಬರಿಗೆ ಇದೆಂಥಾ ಅಪಮಾನ
ಮಂಡ್ಯ ಜಿಲ್ಲಾ ಪಂಚಾಯಿತಿಯ ಕಾವೇರಿ ಸಭಾಂಗಣದಲ್ಲಿದ್ದ ಬಾಬಾ ಸಾಹೇಬ ಅಂಬೇಡ್ಕರ ಅವರ ಫೋಟೋ ತೆಗೆದು ಪ್ರಧಾನಿ ನರೇದ್ರ ಮೋದಿ ಅವರ ಫೋಟೋ ಹಾಕಿದ್ದಾರೆ.
ಮಂಡ್ಯ: ಮಂಡ್ಯ ಜಿಲ್ಲಾಡಳಿತದಿಂದ ಡಾ. ಬಾಬಾ ಸಾಹೇಬ ಅಂಬೇಡ್ಕರ ಅವರಿಗೆ ಅಪಮಾನ ಮಾಡಿರುವ ಸಂಗತಿಯೊಂದು ನಡೆದಿದೆ. ಜಿಲ್ಲಾ ಪಂಚಾಯಿತಿಯ ಕಾವೇರಿ ಸಭಾಂಗಣದಲ್ಲಿದ್ದ ಬಾಬಾ ಸಾಹೇಬ ಅಂಬೇಡ್ಕರ ಅವರ ಫೋಟೋ ತೆಗೆದು ಪ್ರಧಾನಿ ನರೇದ್ರ ಮೋದಿ ಅವರ ಫೋಟೋ ಹಾಕಿದ್ದಾರೆ. ಕುಂಭ ಮೇಳದ ಹಿನ್ನೆಲೆ ಜಿಲ್ಲಾ ಪಂಚಾಯಿತಿಯಲ್ಲಿ ಇಂದು ಸಚಿವರಾದ ಕೆ.ಗೋಪಾಲಯ್ಯ, ಕೆ.ಸಿ.ನಾರಾಯಣ ಗೌಡ ಸುದ್ದಿಗೋಷ್ಠಿ ನಡೆಸುತ್ತಿರುವ ವೇಳೆ ಘಟನೆ ನಡೆದಿದೆ.
ಸಭಾಂಗಂಣದಲ್ಲಿ ಮಹಾತ್ಮ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಫೋಟೋಗಳ ಮಧ್ಯೆ ಇದ್ದ ಅಂಬೇಡ್ಕರ್ ಫೋಟೋವನ್ನು ತೆಗೆದು ಸಭಾಂಗಣದ ಶೌಚಾಲಯಕ್ಕೆ ಹೋಗುವ ದಾರಿ ಮಧ್ಯೆ ಇರಿಸಲಾಗಿದೆ. ಇದನ್ನು ಕಂಡು ಪತ್ರಕರ್ತರು ಸಚಿವದ್ವಯರಿಗೆ ಮತ್ತು ಅಧಿಕಾರಿಗಳಿಗೆ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಕೂಡಲೆ ಸಚಿವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ತಕ್ಷಣ ಎಚ್ಚೆತ್ತ ಅಧಿಕಾರಿಗಳು ಪ್ರಧಾನಿ ಮೋದಿ ಪಕ್ಕದಲ್ಲಿ ಅಂಬೇಡ್ಕರ್ ಫೋಟೋ ಫೋಟೋ ಅಳವಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ