Male Mahadeshwara Maha Kumbh Mela: ಕೆ.ಆರ್.ಪೇಟೆಯಲ್ಲಿ ನಾಳೆಯಿಂದ 4 ದಿನ ಮಲೆಮಹದೇಶ್ವರ ಮಹಾ ಕುಂಭಮೇಳ
ಅಕ್ಟೋಬರ್ 13ರಿಂದ 16ರ ವರೆಗೆ ಮಲೆಮಹದೇಶ್ವರ ಮಹಾ ಕುಂಭಮೇಳ ನಡೆಯಲಿದೆ. ಅ.15ರ ಸಂಜೆ ವಾರಾಣಸಿಯ ಕಾಶಿ ಮಾದರಿ ಗಂಗಾ ಆರತಿ ನಡೆಯಲಿದೆ.
ಮೈಸೂರು: ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ತ್ರಿವೇಣಿ ಸಂಗಮದಲ್ಲಿ ನಾಳೆಯಿಂದ 4 ದಿನ ಅಂದರೆ ಅಕ್ಟೋಬರ್ 13ರಿಂದ 16ರ ವರೆಗೆ ಮಲೆಮಹದೇಶ್ವರ ಮಹಾ ಕುಂಭಮೇಳ ನಡೆಯಲಿದೆ(Male Mahadeshwara Maha Kumbh Mela). ನಾಳೆ ಜನಪದ ಕಲಾತಂಡಗಳ ಮೆರವಣಿಗೆಗೆ ಗೋಪಾಲಯ್ಯ ಚಾಲನೆ ನೀಡಲಿದ್ದು ಸಂಜೆ 6:30ಕ್ಕೆ ಜಿಲ್ಲಾ ಉತ್ಸವಕ್ಕೆ ಸುನಿಲ್ ಕುಮಾರ್ ಚಾಲನೆ ನೀಡಲಿದ್ದಾರೆ. ಅಕ್ಟೋಬರ್ 13 ರಂದು ಮಲೆ ಮಹದೇಶ್ವರ ಬೆಟ್ಟದಿಂದ 3 ಜ್ಯೋತಿಗಳು (Male Mahadeshwara Hills) ಹೊರಡಲಿದ್ದು ಅವು ತ್ರಿವೇಣಿ ಸಂಗಮದಲ್ಲಿ ಸೇರಲಿವೆ.
ತ್ರಿವೇಣಿ ಸಂಗಮ ಅಂಬಿಗರಹಳ್ಳಿ-ಸಂಗಾಪುರದಲ್ಲಿ ಅಕ್ಟೋಬರ್ 14ರಂದು ವಿವಿಧ ಮಠಾಧೀಶರಿಂದ ಕುಂಭಮೇಳ ಉದ್ಘಾಟನೆಯಾಗಲಿದೆ. ಉದ್ಘಾಟನಾ ಸಮಾರಂಭದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಶಿವರಾತ್ರಿ ದೇಶಿಕೇಂದ್ರಶ್ರೀ, ಮಹಾಂತ ಶಿವಯೋಗಿಶ್ರೀ, ಶಿವಾನಂದಪುರಿ ಸ್ವಾಮೀಜಿ, ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ, ಸಚಿವರಾದ ಗೋಪಾಲಯ್ಯ, ವಿ ಸೋಮಣ್ಣ, ಸಿ ಎಸ್ ಅಶ್ವಥ್ ನಾರಾಯಣ್, ಸಂಸದೆ ಸುಮಲತಾ ಸೇರಿ ಹಲವರು ಉಪಸ್ಥಿತರಿರಲಿದ್ದಾರೆ. ಇದನ್ನೂ ಓದಿ: ಭೂಮಿಗೆ ಮರಳಲು ರೂ.24 ಲಕ್ಷ ಬೇಕು; ಮಹಿಳೆಯನ್ನು ವಂಚಿಸಿದ ನಕಲಿ ಗಗನಯಾತ್ರಿ
ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ ಮಹೋತ್ಸವ ಮತ್ತು ಪುಣ್ಯ ಸ್ನಾನ 2022ರ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ..#Bjp4mandya @narayanagowdakc #Kumbamela @CMofKarnataka #Sangama | @sumalathaA pic.twitter.com/t2hv2ZuBB9
— BJP Mandya (@Bjpformandya) October 6, 2022
ಅಕ್ಟೋಬರ್ 15ರಂದು ಮಹಾ ಕುಂಭಮೇಳದ ಧಾರ್ಮಿಕ ಸಭೆ ನಡೆಯಲಿದ್ದು ಅ.15ರ ಸಂಜೆ ವಾರಾಣಸಿಯ ಕಾಶಿ ಮಾದರಿ ಗಂಗಾ ಆರತಿ ನಡೆಯಲಿದೆ. ಅಕ್ಟೋಬರ್ 16ರಂದು ಮಹಾ ಕುಂಭಮೇಳದಲ್ಲಿ ಪುಣ್ಯಸ್ನಾನ ಜರುಗಲಿದ್ದು ಕುಂಭಮೇಳ ಸಮಾರೋಪ ಸಮಾರಂಭದಲ್ಲಿ UP ಸಿಎಂ ಯೋಗಿ ಆದಿತ್ಯನಾಥ್, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಭಾಗಿಯಾಗಲಿದ್ದಾರೆ.
13, 14, 15 ಮತ್ತು 16ರಂದು ನಡೆಯುವ ಮಲೆಮಹದೇಶ್ವರ ಮಹಾ ಕುಂಭಮೇಳ ಕಾರ್ಯಕ್ರಮ ಅಂಗವಾಗಿ ಕಾರ್ಯಕ್ರಮ ಉದ್ಘಾಟನೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರನ್ನು ಸಮಿತಿಯ ಅಧ್ಯಕ್ಷ ಶಿವಮೊಗ್ಗ ಜಿಲ್ಲಾ ಉದ್ತುವಾರಿ ಸಚಿವ ರೇಷ್ಮೆಯುವ ಸಬಲೀಕರಣ ಕ್ರೀಡಾ ಸಚಿವ ಡಾ ನಾರಾಯಣ ಗೌಡ ಮತ್ತು ಅಬಕಾರಿ ಮತ್ತು ಮಂಡ್ಯ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಮತ್ತು ಸಮಿತಿ ಸದಸ್ಯರು ಮಂಗಳವಾರ ಬೆಂಗಳೂರಿನ ಎಸ್.ಡಿ.ಎಮ್. ಶಿಕ್ಷಣ ಸಂಸ್ಥೆಯ ಕ್ಷೇಮವನಕ್ಕೆ ಭೇಟಿ ನೀಡಿ ಆಹ್ವಾನ ನೀಡಿದ್ದರು.
ಜಿಲ್ಲೆಯ ಕೆ.ಆರ್ ಪೇಟೆಯ ತ್ರಿವೇಣಿ ಸಂಗಮದಲ್ಲಿ ಅಕ್ಟೋಬರ್ 13-16 ರವರೆಗೂ ನಡೆಯಲಿರುವ ಮಹಾಕುಂಭಮೇಳಕ್ಕೆ ವಿವಿಧ ಗಣ್ಯರನ್ನು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಅವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ರವರು ಆಹ್ವಾನಿಸಿದರು.#Bjp4mandya | @BSBommai @BSYBJP | @narayanagowdakc pic.twitter.com/02INCcpBzs
— BJP Mandya (@Bjpformandya) October 12, 2022
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:27 am, Wed, 12 October 22