ಪೆನ್ ಡ್ರೈವ್​ನಲ್ಲಿದ್ದ ಯುವತಿಯ ಖಾಸಗಿ ಫೋಟೋ ಕಳುಹಿಸಿ ಹಣಕ್ಕಾಗಿ ಬ್ಲಾಕ್ ಮೇಲ್, ಪೆನ್ ಡ್ರೈವ್​ ಕಳೆದುಕೊಂಡಿದ್ದಾಕೆಗೆ ಇದೆಂಥಾ ಫಜೀತಿ

ಪೆನ್ ಡ್ರೈವ್​ನಲ್ಲಿದ್ದ ಯುವತಿಯ ಖಾಸಗಿ ಪೋಟೋ ಕಳುಹಿಸಿ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ

ಪೆನ್ ಡ್ರೈವ್​ನಲ್ಲಿದ್ದ ಯುವತಿಯ ಖಾಸಗಿ ಫೋಟೋ ಕಳುಹಿಸಿ ಹಣಕ್ಕಾಗಿ ಬ್ಲಾಕ್ ಮೇಲ್, ಪೆನ್ ಡ್ರೈವ್​ ಕಳೆದುಕೊಂಡಿದ್ದಾಕೆಗೆ ಇದೆಂಥಾ ಫಜೀತಿ
ಆರೋಪಿ ಶೋಯೆಬ್ ಮೊಹಮ್ಮದ್
Follow us
TV9 Web
| Updated By: ವಿವೇಕ ಬಿರಾದಾರ

Updated on: Dec 24, 2022 | 4:49 PM

ಬೆಂಗಳೂರು: ಇತ್ತೀಚಿಗೆ ಬ್ಲಾಕ್​ ಮೇಲ್​ ಪ್ರಕರಣಗಳು ಹೆಚ್ಚಾಗುತ್ತಿವೆ. ಸ್ವಲ್ಪ ಎಚ್ಚರ ತಪ್ಪಿದರು ಬ್ಲಾಕ್​ ಮೇಲ್​ನಂತಹ ಮಹಾಕೂಪದಲ್ಲಿ ಬೀಳುವ ಸಂಭವವಿರುತ್ತದೆ. ಬ್ಲಾಕ್​ ಮೇಲ್​ಗೆ (Blackmail) ಒಳಗಾಗಿ ಅದೆಷ್ಟೋ ಜನರು ಹಣ ಕಳೆದುಕೊಂಡಿದ್ದಾರೆ, ಖಾಸಗಿ ಮಾಹಿತಿ ಕಳೆದುಕೊಂಡಿದ್ದಾರೆ, ಇಷ್ಟಕ್ಕೆ ನಿಲ್ಲದೆ ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದೇ ರೀತಿಯಾಗಿ ಸಿಲಿಕಾನ್​ ಸಿಟಿಯ ಯುವತಿಯೊಬ್ಬಳು ಬ್ಲಾಕ್​ ಮೇಲ್​ಗೆ ಒಳಗಾಗಿದ್ದಾಳೆ. ಪೆನ್ ಡ್ರೈವ್​ನಲ್ಲಿದ್ದ ಯುವತಿಯ (Young Girl) ಖಾಸಗಿ ಫೋಟೋ (Privet Photos) ಕಳುಹಿಸಿ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಯುವತಿ ಖಾಸಗಿ ಫೋಟೋಸ್ ಹಾಗೂ ವೀಡಿಯೋಸ್ ಇಟ್ಟುಕೊಂಡಿದ್ದ ಪೆನ್ ಡ್ರೈವ್ ಕಳೆದುಕೊಂಡಿದ್ದಾಳೆ. ಈ ಪೆನ್ ಡ್ರೈವ್ ಶೋಯೆಬ್ ಮೊಹಮ್ಮದ್ ಎಂಬ ವ್ಯಕ್ತಿಗೆ ಸಿಕ್ಕಿದೆ. ನಂತರ ಈತ ಹೇಗೋ ಯುವತಿ ನಂಬರ್​ ಕಲೆ ಹಾಕಿದ್ದಾನೆ. ಬಳಿಕ ಯುವತಿಗೆ ವಾಟ್ಸ್​ಪ್​ ಮೂಲಕ ಪೆನ್ ಡ್ರೈವ್​ನಲ್ಲಿರುವ ​ಫೋಟೋಸ್ ಕಳುಹಿಸಿ 70 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಹಣ ಕೊಟ್ಟರಷ್ಟೇ ಪೆನ್ ಡ್ರೈವ್ ಕೊಡೋದಾಗಿ ಬ್ಲಾಕ್ ಮೇಲ್ ಮಾಡಿದ್ದಾನೆ.

ಇದನ್ನೂ ಓದಿ:  ಮಹಿಳೆಯನ್ನು ಬರ್ಬರ ಹತ್ಯೆಗೈದು ಪರಾರಿಯಾದ ದುಷ್ಕರ್ಮಿಗಳು

ನಂತರ ಯುವತಿ ಬೆಂಗಳೂರು ಆಗ್ನೇಯ ವಿಭಾಗದ ಪೊಲೀಸರಿಗೆ ದೂರು ನೀಡಿದ್ದಾಳೆ. ದೂರಿನ ಆಧಾರದ ಮೇಲೆ ಆರೋಪಿ ಶೋಯೆಬ್ ಮೊಹಮ್ಮದ್​ಗಾಗಿ ಬಲೆ ಬೀಸಿದ್ದಾರೆ. ಪೊಲೀಸರು ಟೆಕ್ನಿಕಲ್ ಆಧಾರದ ಮೇಲೆ ಆರೋಪಿ ಶೋಯೆಬ್ ಮೊಹಮ್ಮದ್​ನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಅಕ್ರಮ ಕಸಾಯಿ ಖಾನೆಗೆ ಬೆಳ್ಳಂಬೆಳಗ್ಗೆ ಹಿಂದೂ ಜಾಗರಣಾ ವೇದಿಕೆ ದಾಳಿ

ಇನ್ಸ್ಟಾಗ್ರಾಂ ಮೂಲಕ‌ ಲವ್ ಜಿಹಾದ್? ಮುಸ್ಲಿಂ ಸಂಪ್ರದಾಯದಂತೆ ಮದುವೆದ ಹಿಂದೂ ಯುವತಿ

ಕೊಪ್ಪಳ: ಇಂದಿನ ಸಾಮಾಜಿಕ ಜಾಲತಾಣ ಜಮಾನಾಗೆ ತಕ್ಕಂತೆ ಇನ್ಸ್ಟಾಗ್ರಾಂ ಮೂಲಕ‌ ನಡೆಯಿತಾ ಲವ್ ಜಿಹಾದ್ ಎಂಬ ಶಂಕೆ ವ್ಯಕ್ತವಾಗಿದೆ. ಇನ್ಸ್ಟಾಗ್ರಾಂನಲ್ಲಿ ಹಿಂದೂ ಯುವತಿ ಮುಸ್ಲಿಂ  ಯುವಕ ನಡುವೆ ಪ್ರೀತಿ ಮೊಳಕೆಯೊಡೆದಿದೆ . ಕೊಪ್ಪಳ ಜಿಲ್ಲೆ ಕುಷ್ಟಗಿಯಲ್ಲಿ ಈ ಇನ್ಸ್​ಟೆಂಟ್​​ ಇನ್ಸ್ಟಾಗ್ರಾಂ ಲವ್ ಪ್ರಕರಣ ವರದಿಯಾಗಿದೆ. ಹೈದ್ರಾಬಾದ್ ಮೂಲದ ಯುವಕ ಶೇಕ್ ವಹಿದ್ ಹಾಗೂ ಕೊಪ್ಪಳ ಜಿಲ್ಲೆಯ ಕುಷ್ಟಗಿ  ಪಟ್ಟಣದ ಇಂದಿರಾನಗರದ ಯುವತಿ ಮದುವೆಯಾದ ಜೋಡಿ ಎಂದು ತಿಳಿದುಬಂದಿದೆ.

ಅಕ್ರಮ ಕಸಾಯಿ ಖಾನೆಗೆ ಬೆಳ್ಳಂಬೆಳಗ್ಗೆ ಹಿಂದೂ ಜಾಗರಣಾ ವೇದಿಕೆ ದಾಳಿ

ಕಳೆದ ನಾಲ್ಕು ವರ್ಷಗಳ ಹಿಂದೆ ಇನ್ಸ್ಟಾಗ್ರಾಂ ನಲ್ಲಿ ಈ ಜೋಡಿ ಪರಿಚಯವಾಗಿದೆ. ಮೊದಲು ಸ್ನೇಹ ಬೆಳೆದು, ಬಳಿಕ‌ ಪ್ರೀತಿಗೆ ತಿರುಗಿದೆ ಆ ಸ್ನೇಹ. ಸದ್ಯ ಪ್ರೇಮ ವಿವಾಹವಾಗಿರುವ ಜೋಡಿ. ಮುಸ್ಲಿಂ ಸಾಂಪ್ರದಾಯದಂತೆ ಯುವತಿ ಮದುವೆಯಾಗಿದ್ದಾರೆ. ಯವತಿ, ಮನೆ ಬಿಟ್ಟು ಹೋಗಿ ಮದುವೆಯಾಗಿದ್ದಾರೆ. ಕುಷ್ಟಗಿ ಪಟ್ಟಣದಲ್ಲಿ ಲವ್ ಜಿಹಾದ್ ಪ್ರಕರಣ  ನಡೆದಿದೆ ಎನ್ನೋ ಆರೋಪ ಎದುರಾಗುತ್ತಿದ್ದಂತೆ ಇಬ್ಬರೂ ಪ್ರೇಮಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಲವಂತದ ಮತಾಂತರದ ಕುರಿತು ಸಹ ಪೊಲೀಸರು ತನಿಖೆ ನಡೆಸಿದ್ದಾರೆ. ಮನಪೂರ್ವಕವಾಗಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿ, ವಿವಾಹ ಆಗಿರುವುದಾಗಿ ಪೊಲೀಸರ ಎದುರು ಯುವತಿ ಹೇಳಿಕೆ‌ ನೀಡಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ