ರಿಪೀಟ್ ಕಳ್ಳತನಕ್ಕೆ ಹೋದ, ಸಿಕ್ಕಿಬಿದ್ದು ಧರ್ಮದೇಟು ತಿಂದ
ಶಿವಮೊಗ್ಗ: ಇಲ್ಲೊಬ್ಬ ಕಳ್ಳ ಕಳ್ಳತನ ಮಾಡಿ ಸಿಕ್ಕಿ ಬಿದ್ದು, ಜನಗಳತ್ರ ಧರ್ಮದೇಟು ತಿಂದಿದ್ದಾನೆ. ಶಿವಮೊಗ್ಗದ ಗಾಂಧಿ ಬಜಾರ್ನಲ್ಲಿರುವ ಶ್ರೀ ಕುಕ್ಕೆ ಸುಬ್ರಮಣ್ಯ ಎಂಬ ಚಿನ್ನದ ಅಂಗಡಿಗೆ ಅಬ್ಬಾಸ್ ಖಾನ್ ಹೆಸರಿನ ವ್ಯಕ್ತಿ 500 ರೂಪಾಯಿ ಚಿಲ್ಲರೆ ಬೇಕೆಂದು ಬಂದು ಸಮಯ ಸಾಧಿಸಿ, ಅಲ್ಲೇ ಇದ್ದ 60 ಗ್ರಾಂ ಮಾಂಗಲ್ಯ ಸರವನ್ನು ಕದ್ದು, ಎಸ್ಕೇಪ್ ಆಗಿದ್ದ. ಮಾಂಗಲ್ಯ ಸರ ಕದ್ದ ಬಳಿಕ ಅಂದೇ ಸಂಜೆ ಇನ್ನೊಂದು ಅಂಗಡಿಗೆ ಕದಿಯಲು ಹೋದಾಗ ಸ್ಥಳೀಯರ ಕೈಯಲ್ಲಿ ಲಾಕ್ ಆಗಿದ್ದಾನೆ. ಈ ಕಳ್ಳನನ್ನು ಪೊಲೀಸರು […]
ಶಿವಮೊಗ್ಗ: ಇಲ್ಲೊಬ್ಬ ಕಳ್ಳ ಕಳ್ಳತನ ಮಾಡಿ ಸಿಕ್ಕಿ ಬಿದ್ದು, ಜನಗಳತ್ರ ಧರ್ಮದೇಟು ತಿಂದಿದ್ದಾನೆ. ಶಿವಮೊಗ್ಗದ ಗಾಂಧಿ ಬಜಾರ್ನಲ್ಲಿರುವ ಶ್ರೀ ಕುಕ್ಕೆ ಸುಬ್ರಮಣ್ಯ ಎಂಬ ಚಿನ್ನದ ಅಂಗಡಿಗೆ ಅಬ್ಬಾಸ್ ಖಾನ್ ಹೆಸರಿನ ವ್ಯಕ್ತಿ 500 ರೂಪಾಯಿ ಚಿಲ್ಲರೆ ಬೇಕೆಂದು ಬಂದು ಸಮಯ ಸಾಧಿಸಿ, ಅಲ್ಲೇ ಇದ್ದ 60 ಗ್ರಾಂ ಮಾಂಗಲ್ಯ ಸರವನ್ನು ಕದ್ದು, ಎಸ್ಕೇಪ್ ಆಗಿದ್ದ. ಮಾಂಗಲ್ಯ ಸರ ಕದ್ದ ಬಳಿಕ ಅಂದೇ ಸಂಜೆ ಇನ್ನೊಂದು ಅಂಗಡಿಗೆ ಕದಿಯಲು ಹೋದಾಗ ಸ್ಥಳೀಯರ ಕೈಯಲ್ಲಿ ಲಾಕ್ ಆಗಿದ್ದಾನೆ. ಈ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ.
ಒಂಟಿ ಮಹಿಳೆಯರೇ ಈ ಕಳ್ಳರ ಟಾರ್ಗೆಟ್: ಇದೇ ರೀತಿಯ ಮತ್ತೊಂದು ಪ್ರಕರಣ ಬೆಂಗಳೂರು ಗ್ರಾಮಾಂತರದ ಹೊಸಕೋಟೆ ಬಳಿ ನಡೆದಿದೆ. ಈ ಕಳ್ಳರು ಟಾರ್ಗೆಟ್ ಮಾಡುತಿದ್ದುದ್ದೆ ಒಂಟಿ ಮಹಿಳೆಯರು, ಅದರಲ್ಲೂ ಗ್ರಾಮೀಣ ಭಾಗದಲ್ಲಿ ಒಂಟಿಯಾಗಿ ಓಡಾಡ್ತಿದ್ದಂತಹ ಮಹಿಳೆಯರನ್ನ ಟಾರ್ಗೆಟ್ ಮಾಡಿ ಅವರ ಬಳಿಯಿದ್ದ ಚಿನ್ನವನ್ನ ಕದಿಯುತ್ತಿದ್ದರು. ಆದರೆ ಈಗ ಮಂಜುನಾಥ್ ಮತ್ತು ಶ್ರೀನಿವಾಸ್ ಎಂಬ ಸರಗಳ್ಳರನ್ನ ತಾಲೂಕಿನ ನಂದಗುಡಿ ಪೊಲೀಸರು ಬಂಧಿಸಿದ್ದು, 125 ಗ್ರಾಂನ ಚಿನ್ನದ ಸರ ವಶಪಡಿಸಿಕೊಂಡಿದ್ದಾರೆ.
Published On - 2:11 pm, Thu, 19 September 19