ನಗರದಲ್ಲಿ ಜೋಡಿ ಕೊಲೆ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್

ನಗರದಲ್ಲಿ ಜೋಡಿ ಕೊಲೆ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್

ಬೆಂಗಳೂರು: ಕೊಲೆ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿರುವ ಘಟನೆ ಇಸ್ರೋ ಲೇಔಟ್​ನ ದೇವರ ಕೆರೆ ಬಳಿ ನಡೆದಿದೆ. ಮೊನ್ನೆ ನಡೆದಿದ್ದ ಡಬಲ್ ಮರ್ಡರ್ ಕೇಸ್ ಸಂಬಂಧಿಸಿ ಆರೋಪಿ ಸಂಜಯ್ ಅಲಿಯಾಸ್ ಚಿಕ್ಕಪ್ಪಿ ಬಂಧನಕ್ಕೆ ಪೊಲೀಸರು ತೆರಳಿದ್ದರು. ಈ ವೇಳೆ ಸುಬ್ರಮಣ್ಯಪುರ ಠಾಣೆ ಸಬ್ ಇನ್ಸ್​ಪೆಕ್ಟರ್ ಮಧುಗೆ ಆರೋಪಿ ಚಾಕುವಿನಿಂದ ಹಲ್ಲೆ ನಡೆಸಲು ಪ್ರಯತ್ನ ಮಾಡಿದ್ದಾನೆ. ಈ ವೇಳೆ ಕೋಣನಕುಂಟೆ ಇನ್ಸ್​ಪೆಕ್ಟರ್ ಧರ್ಮೇಂದ್ರ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಕೊಲೆಯ ಹಿನ್ನೆಲೆ: ಸಂಧಾನಕ್ಕೆಂದು ಸೇರಿದ್ದ ಮುಕುಂದ ಹಾಗೂ […]

sadhu srinath

|

Apr 16, 2020 | 10:33 AM

ಬೆಂಗಳೂರು: ಕೊಲೆ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿರುವ ಘಟನೆ ಇಸ್ರೋ ಲೇಔಟ್​ನ ದೇವರ ಕೆರೆ ಬಳಿ ನಡೆದಿದೆ. ಮೊನ್ನೆ ನಡೆದಿದ್ದ ಡಬಲ್ ಮರ್ಡರ್ ಕೇಸ್ ಸಂಬಂಧಿಸಿ ಆರೋಪಿ ಸಂಜಯ್ ಅಲಿಯಾಸ್ ಚಿಕ್ಕಪ್ಪಿ ಬಂಧನಕ್ಕೆ ಪೊಲೀಸರು ತೆರಳಿದ್ದರು.

ಈ ವೇಳೆ ಸುಬ್ರಮಣ್ಯಪುರ ಠಾಣೆ ಸಬ್ ಇನ್ಸ್​ಪೆಕ್ಟರ್ ಮಧುಗೆ ಆರೋಪಿ ಚಾಕುವಿನಿಂದ ಹಲ್ಲೆ ನಡೆಸಲು ಪ್ರಯತ್ನ ಮಾಡಿದ್ದಾನೆ. ಈ ವೇಳೆ ಕೋಣನಕುಂಟೆ ಇನ್ಸ್​ಪೆಕ್ಟರ್ ಧರ್ಮೇಂದ್ರ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ.

ಕೊಲೆಯ ಹಿನ್ನೆಲೆ: ಸಂಧಾನಕ್ಕೆಂದು ಸೇರಿದ್ದ ಮುಕುಂದ ಹಾಗೂ ಸಂಜಯ್ ಟೀಮ್ ನಡುವೆ ಮನಸ್ತಾಪ ಉಂಟಾಗಿದೆ. ಈ ವೇಳೆ ಸಂಜಯ್ ಟೀಮ್ ಮುಕುಂದ ಹಾಗೂ ಮನೋಜ್ ನನ್ನ ಕೊಲೆ ಮಾಡಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಸಂಜಯ್ ಬಗ್ಗೆ ಮಾಹಿತಿ ಕಲೆ ಹಾಕಿ ಬಂಧನಕ್ಕೆ ತೆರಳಿದ್ದ ವೇಳೆ ಗುಂಡು ಹಾರಿಸಿರುವ ಘಟನೆ ನಡೆದಿದೆ.

Follow us on

Related Stories

Most Read Stories

Click on your DTH Provider to Add TV9 Kannada