ಬೆಂಗಳೂರಿನಲ್ಲಿ 500 ರೂಪಾಯಿ, ಒಂದು ಕೀ ಪ್ಯಾಡ್ ಫೋನ್​ಗಾಗಿ ಕೊಲೆ! ಆರೋಪಿ ಅರೆಸ್ಟ್

ಆರೋಪಿ ಸತೀಶ್ ಬಳಿ ಕಳ್ಳತನ ಮಾಡಲು ಯತ್ನಿಸಿದ್ದ. ಈ ವೇಳೆ ಸತೀಶ್ ಎಚ್ಚರಗೊಂಡಿದ್ದ. ಕಳ್ಳತನಕ್ಕೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಸಿಮೆಂಟ್ ಕಲ್ಲನ್ನು ತಲೆ ಮೇಲೆ ಎತ್ತಿ ಹಾಕಿ ಕೊಲೆಗೈದಿದ್ದ. ಘಟನೆ ಸಂಬಂಧ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನಲ್ಲಿ 500 ರೂಪಾಯಿ, ಒಂದು ಕೀ ಪ್ಯಾಡ್ ಫೋನ್​ಗಾಗಿ ಕೊಲೆ! ಆರೋಪಿ ಅರೆಸ್ಟ್
ಬಂಧಿತ ಆರೋಪಿ
Updated By: sandhya thejappa

Updated on: Mar 08, 2022 | 10:59 AM

ಬೆಂಗಳೂರು: 500 ರೂಪಾಯಿ ಮತ್ತು ಒಂದು ಕೀ ಪ್ಯಾಡ್ ಫೋನ್​ಗಾಗಿ ಕೊಲೆ (Murder) ನಡೆದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಾಮಾಕ್ಷಿಪಾಳ್ಯ ಬಾರ್ ಮುಂದೆ ಕೊಲೆ ನಡೆದಿತ್ತು. ಆರೋಪಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ. ಕುಡಿದು ಬೀದಿ ಬದಿ ಮಲಗಿದ್ದವರನ್ನ ಟಾರ್ಗೆಟ್ ಮಾಡುತ್ತಿದ್ದ ಆರೋಪಿ, ಕುಡಿದ ನಶೆಯಲ್ಲಿ ಮಲಗಿದ್ದವರ ಜೇಬಿನಿಂದ ಹಣ (Money) ಹಾಗೂ ಮೊಬೈಲ್ (Mobile) ಕಳ್ಳತನ ಮಾಡುತ್ತಿದ್ದ. ಸದ್ಯ ಕೊಲೆ ಆರೋಪಿಯನ್ನು ಕಾಮಾಕ್ಷಿಪಾಳ್ಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಆರೋಪಿ ಸತೀಶ್ ಬಳಿ ಕಳ್ಳತನ ಮಾಡಲು ಯತ್ನಿಸಿದ್ದ. ಈ ವೇಳೆ ಸತೀಶ್ ಎಚ್ಚರಗೊಂಡಿದ್ದ. ಕಳ್ಳತನಕ್ಕೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಸಿಮೆಂಟ್ ಕಲ್ಲನ್ನು ತಲೆ ಮೇಲೆ ಎತ್ತಿ ಹಾಕಿ ಕೊಲೆಗೈದಿದ್ದ. ಘಟನೆ ಸಂಬಂಧ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮುಂಬೈನ ಗ್ಯಾಂಗ್​ಸ್ಟರ್​ ಬಂಧನ:
ಆನೇಕಲ್: ಅತ್ತಿಬೆಲೆ ಪೊಲೀಸರು ಮುಂಬೈನ ಗ್ಯಾಂಗ್​ಸ್ಟರ್​ನ ಅರೆಸ್ಟ್ ಮಾಡಿದ್ದಾರೆ. ಕೊಲೆ, ದರೋಡೆ, ಬೆದರಿಕೆ, ಡ್ರಗ್ಸ್ ಪ್ರಕರಣದ ಆರೋಪಿ ಅಬ್ದುಲ್ ಅಜೀಜ್ ಖಾನ್ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಅಬ್ದುಲ್ ಅಜೀಜ್ ಖಾನ್ 37 ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಅತ್ತಿಬೆಲೆ ರೆಸ್ಟೋರೆಂಟ್​ನಲ್ಲಿ ಅಡಗಿದ್ದ ವೇಳೆ ದಾಳಿ ಮಾಡಿ ಸೆರೆ ಹಿಡಿಯಲಾಗಿದೆ. ಗ್ಯಾಂಗ್​ಸ್ಟರ್ ಬಳಿ ಪಿಸ್ತೂಲ್, ನಾಲ್ಕು ಜೀವಂತ ಗುಂಡು ವಶಕ್ಕೆ ಪಡೆದಿದ್ದಾರೆ. ಜೊತೆಗೆ 15 ಸಿಮ್ ಕಾರ್ಡ್​ಗಳು, 6 ಮೊಬೈಲ್ ಫೋನ್​ಗಳನ್ನ ಜಪ್ತಿ ಮಾಡಿದ್ದಾರೆ.

ಜೂಜು ಅಡ್ಡೆ ಮೇಲೆ ಪೊಲೀಸರ ದಾಳಿ:
ತುಮಕೂರು: ಜೂಜು ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ಅರೆಸ್ಟ್ ಮಾಡಿದ್ದಾರೆ.  ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಮಾವಿನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗುಬ್ಬಿ ಸಿಪಿಐ ನದಾಪ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಬಂಧಿತರಿಂದ 10,580 ರೂ ಹಾಗೂ 4 ಮೊಬೈಲ್ 5 ಬೈಕ್ ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ

2016ರಲ್ಲಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುವ ದಿನ ಜಯಲಲಿತಾ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು; ಅಪೋಲೋ ವೈದ್ಯರ ವರದಿ

ಮಧ್ಯರಾತ್ರಿ ಬೆಂಕಿಯಿಂದ ಹೊತ್ತಿ ಉರಿದ ಮನೆ; ಎಂಟು ತಿಂಗಳ ಮಗು ಸೇರಿ ಐವರ ದುರ್ಮರಣ, ಒಬ್ಬನಿಗೆ ಗಂಭೀರ ಗಾಯ

Published On - 10:56 am, Tue, 8 March 22