ಮಧ್ಯರಾತ್ರಿ ಬೆಂಕಿಯಿಂದ ಹೊತ್ತಿ ಉರಿದ ಮನೆ; ಎಂಟು ತಿಂಗಳ ಮಗು ಸೇರಿ ಐವರ ದುರ್ಮರಣ, ಒಬ್ಬನಿಗೆ ಗಂಭೀರ ಗಾಯ
ಪ್ರತಾಪನ್ ಅವರ ಹಿರಿಯ ಮಗ ನಿಹುಲ್ಗೆ ಗಂಭೀರ ಗಾಯಗಳಾಗಿವೆ. ತಡರಾತ್ರಿ ಇವರ ಮನೆಗೆ ಬೆಂಕಿ ಬೀಳುತ್ತಿದ್ದಂತೆ ಅಕ್ಕಪಕ್ಕದ ಮನೆಯವರು ಅಗ್ನಿ ಶಾಮಕದಳದವರಿಗೆ ಕರೆ ಮಾಡಿದ್ದಾರೆ.
ತಡರಾತ್ರಿ ಮನೆಯೊಂದಕ್ಕೆ ಬೆಂಕಿ ಬಿದ್ದು, ಒಟ್ಟು ಐದು ಮಂದಿ ಮೃತಪಟ್ಟ ದುರ್ಘಟನೆ ಕೇರಳದ ವರ್ಕಳ ಎಂಬಲ್ಲಿ ನಡೆದಿದೆ. ಇಲ್ಲಿನ ದಲವಾಪುರಂ ಎಂಬಲ್ಲಿದ್ದ ಮನೆಗೆ ನಿನ್ನೆ ತಡರಾತ್ರಿ 1.45ರ ಹೊತ್ತಿಗೆ ಬೆಂಕಿ ಹೊತ್ತಿದೆ. ಮೃತರನ್ನು ಪ್ರತಾಪನ್ (62), ಶೆರ್ಲಿ (53), ಅಭಿರಾಮಿ (25), ಅಖಿಲ್ (29) ಮತ್ತು ರಿಯಾನ್ ಎಂದು ಗುರುತಿಸಲಾಗಿದೆ. ಇದರಲ್ಲಿ ರಿಯಾನ್ ಪುಟ್ಟ ಮಗು. ಅಭಿರಾಮಿಯ ಎಂಟು ತಿಂಗಳ ಪುತ್ರ. ಪ್ರತಾಪನ್ ಅವರು ವರ್ಕಳದಲ್ಲಿ ತರಕಾರಿ ವ್ಯಾಪಾರಿಯಾಗಿದ್ದರು.
ಇವರಲ್ಲೀಗ ಪ್ರತಾಪನ್ ಅವರ ಹಿರಿಯ ಮಗ ನಿಹುಲ್ಗೆ ಗಂಭೀರ ಗಾಯಗಳಾಗಿವೆ. ತಡರಾತ್ರಿ ಇವರ ಮನೆಗೆ ಬೆಂಕಿ ಬೀಳುತ್ತಿದ್ದಂತೆ ಅಕ್ಕಪಕ್ಕದ ಮನೆಯವರು ಅಗ್ನಿ ಶಾಮಕದಳದವರಿಗೆ ಕರೆ ಮಾಡಿದ್ದಾರೆ. ಈ ದುರಂತದಲ್ಲಿ ಐದು ಬೈಕ್ಗಳು ಧ್ವಂಸಗೊಂಡಿವೆ. ಮನೆಯಲ್ಲಿದ್ದ ಎಸಿ ಕೂಡ ಸಂಪೂರ್ಣವಾಗಿ ಹಾಳಾಗಿವೆ. ಬೆಂಕಿ ಬೀಳಲು ಕಾರಣವೇನು ಎಂಬುದು ಇನ್ನೂ ಗೊತ್ತಾಗಿಲ್ಲ. ವಿಧಿವಿಜ್ಞಾನ ತಜ್ಞರು ಸ್ಥಳ ಪರಿಶೀಲನೆ ನಡೆಸಿದ ಬಳಿಕ ತನಿಖೆ ಶುರು ಮಾಡಲಾಗುತ್ತದೆ ಎಂದು ಗ್ರಾಮಾಂತರ ಎಸ್ಪಿ ದಿವ್ಯಾ ಗೋಪಿನಾಥ್ ತಿಳಿಸಿದ್ದಾರೆ.
ಇದನ್ನೂ ಓದಿ: Women’s Day: ಮಹಿಳಾ ಪ್ರಧಾನ ಸಿನಿಮಾಗಳಿಗೆ ವಿಶೇಷ ಮನ್ನಣೆ ನೀಡಿರುವ ಕನ್ನಡ ಪ್ರೇಕ್ಷಕ; ಇಲ್ಲಿವೆ ಜನಮನ ಗೆದ್ದ ಚಿತ್ರಗಳು