ಕನ್ನಾ ಹಾಕೋದೇ ಇವರ ಕಾಯಕ; ಮನೆ ಬೀಗ ಮುರಿದು ಕಳ್ಳತನ ಮಾಡೋ ಖತರ್ನಾಕ್ ಗ್ಯಾಂಗ್ ಅರೆಸ್ಟ್

ಬಸ್ ಹತ್ತಲು ಹೋಗಿ ಕೆಳಗೆ‌ ಬಿದ್ದು ವ್ಯಕ್ತಿ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಮರಸನಪಲ್ಲಿಯಲ್ಲಿ ಘಟನೆ ಸಂಭವಿಸಿದೆ. ಶ್ರೀನಾಥ್ (೫೦) ಎನ್ನುವ ವ್ಯಕ್ತಿ ಸರ್ಕಾರಿ ಬಸ್ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದಾರೆ.

ಕನ್ನಾ ಹಾಕೋದೇ ಇವರ ಕಾಯಕ; ಮನೆ ಬೀಗ ಮುರಿದು ಕಳ್ಳತನ ಮಾಡೋ ಖತರ್ನಾಕ್ ಗ್ಯಾಂಗ್ ಅರೆಸ್ಟ್
ಖತರ್ನಾಕ್ ಗ್ಯಾಂಗ್ ಅರೆಸ್ಟ್
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Mar 08, 2022 | 2:08 PM

ಬೆಂಗಳೂರು: ದೊಡ್ಡವರ ಮನೆ ಬೀಗ ಮುರಿದು ಕಳ್ಳತನ ಮಾಡೊ ಖತರ್ನಾಕ್ ಗ್ಯಾಂಗ್ (Gang Arrest) ಅಂದರ್ ಆಗಿದೆ. ಮೂರು ವರ್ಷದಲ್ಲಿ ೧೪ ಮನೆಗಳ್ಳತನವೆಸಗಿದ ಕಳ್ಳರ ಗ್ಯಾಂಗ್ ಬಂಧನ ಮಾಡಲಾಗಿದೆ. ಕರಾಟೆ ಸೀನಾ, ಕೊಕ್ರೆ ಸತೀಶ ಹಾಗೂ ತೇಜಸ್​ನ್ನು ನಂದಿನಿಲೇಔಟ್ ಪೊಲೀಸರು ಬಂಧಿಸಿದ್ದಾರೆ. ಬೀಗ ಹಾಕಿದ್ದ ಮನೆಗಳನ್ನು ಆರೋಪಿಗಳು ಟಾರ್ಗೆಟ್ ಮಾಡುತಿದ್ದು, ಬಳಿಕ ಅಕ್ಕಪಕ್ಕದ ನಿರ್ಮಾಣ ಹಂತದ ಕಟ್ಟಡದಲ್ಲಿ ಉಳಿದುಕೊಂಡು ವಾಚ್ ಮಾಡುತ್ತಿದ್ದರು. ಕತ್ತಲಾದ ಬಳಿಕ ಎಂಟ್ರಿ ಕೊಟ್ಟು ಮನೆಯ ದೋಚಿ ಎಸ್ಕೇಪ್ ಆಗುತಿದ್ದರು. ಬಳಿಕ ಬಂದ ಹಣದಲ್ಲಿ ಮೋಜಿನ ಜೀವನ ನಡೆಸುತಿದ್ದರು.  ಬಳಿಕ ಮಾಡಿದ ಪಾಪ ತೀರಲಿ ಅಂತ ದೇವಸ್ಥಾನಕ್ಕೆ ತೆರಳಿ ಸೇವೆ ಕೂಡ ಸಲ್ಲಿಸುತಿದ್ದರು. ಜೈಲು ವಾಸ ಅನುಭವಿಸದರೂ ಕಳ್ಳತನ ವೃತ್ತಿ ಬಿಟ್ಟಿರಲಿಲ್ಲ. ಸದ್ಯ ಬಂಧಿತರಿಂದ ೧.೨ ಕೆಜಿ ಚಿನ್ನ, ೨ ಕೆಜಿ ಬೆಳ್ಳಿ ವಶಕ್ಕೆ ಪಡೆದಿದ್ದು, ಆರೋಪಿಗಳನ್ನು ನಂದಿನಿಲೇಔಟ್ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಬಸ್ ಹತ್ತಲು ಹೋಗಿ ಕೆಳಗೆ ಬಿದ್ದ; ಬಸ್ ಚಕ್ರಕ್ಕೆ ಸಿಲುಕಿ ವ್ಯಕ್ತಿ ಸಾವು:

ಕೋಲಾರ:  ಬಸ್ ಹತ್ತಲು ಹೋಗಿ ಕೆಳಗೆ‌ ಬಿದ್ದು ವ್ಯಕ್ತಿ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಮರಸನಪಲ್ಲಿಯಲ್ಲಿ ಘಟನೆ ಸಂಭವಿಸಿದೆ. ಶ್ರೀನಾಥ್ (೫೦) ಎನ್ನುವ ವ್ಯಕ್ತಿ ಸರ್ಕಾರಿ ಬಸ್ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಸಾರಿಗೆ ಬಸ್​ಗೆ ಹತ್ತುವಾಗ ಕಾಲು ಜಾರಿ ವ್ಯಕ್ತಿ ಕೆಳಗೆ ಬಿದಿದ್ದಾರೆ. ಗೌನಿಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕೌಟುಂಬಿಕ ಕಲಹಕ್ಕೆ ಮನನೊಂದು ತಾಯಿ ಮಗಳು ಆತ್ಮಹತ್ಯೆ:

ಮೈಸೂರು: ಕೌಟುಂಬಿಕ ಕಲಹದಿಂದ ಮನನೊಂದು ತಾಯಿ ಮಗಳು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ. ನಂದಿನಿ (35) ಸಿಂಚನ (9) ಮೃತ ದುರ್ದೈವಿಗಳಾಗಿದ್ದಾರೆ. ಟಿ.ನರಸೀಪುರ ತಾಲೂಕು ಮುಳ್ಳೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ಪತಿಯಿಂದ ದೂರವಿದ್ದ ನಂದಿನಿ ಕೌಟುಂಬಿಕ ಕಲಹದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗ್ಯಾಸ್​ ಸಿಲಿಂಡರ್ ಸೋರಿಕೆ 12ಕ್ಕೂ ಹೆಚ್ಚು ಮಕ್ಕಳಿಗೆ ಅಪಾಯ:

ಮೈಸೂರು: ಕ್ಲೋರಿನ್ ಲಿಕ್ವಿಡ್ ಗ್ಯಾಸ್ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕ್ಲೋರಿನ್ ಸಿಲಿಂಡರ್ ಸ್ಥಳಾಂತರ ಮಾಡಲಾಗಿದೆ. ಮೈಸೂರಿನ ಯಾದವಗಿರಿ ರೈಲ್ವೇ ವಸತಿ ಗೃಹದಲ್ಲಿದ್ದ ಸಿಲಿಂಡರ್, ನೆನ್ನೆ ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ ಅನಾಹುತ ಸಂಭವಿಸಿದೆ. 12 ಮಕ್ಕಳು ಸೇರಿ 15ಕ್ಕೂ ಹೆಚ್ಚು ಜನರಿಗೆ ಸಮಸ್ಯೆಯಾಗಿದ್ದು, ಆಸ್ಪತ್ರೆಗೆ ದಾಖಲಾಗಿ ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಬೆಳಗಿನ ಜಾವ ಸಿಲಿಂಡರ್ ಚಿಕ್ಕಮಗಳೂರಿಗೆ ತೆಗೆದುಕೊಂಡ ಹೋದ ಬಗ್ಗೆ ಮಾಹಿತಿ ನೀಡಲಾಗಿದೆ.

ಇದನ್ನೂ ಓದಿ:

Women‘s Day 2022: ವಿಷಯ ಸತ್ಯವೆಂದು ಖಾತರಿಯಾಯಿತು, ನನ್ನ ಬಗ್ಗೆ ನನಗೇ ಅತೀವ ಬೇಸರವಾಯಿತು