ಉದ್ಯಮಿ ಕೊಲ್ಲಲು ಸುಪಾರಿ ಪಡೆದಿದ್ದ ಇಬ್ಬರು ಕಿಲ್ಲರ್​‌ಗಳ ಮೇಲೆ ಪೊಲೀಸ್ ಫೈರಿಂಗ್

[lazy-load-videos-and-sticky-control id=”pgVtlCuL2VA”] ಬೆಂಗಳೂರು: ಭಾನುವಾರದ ಬೆಳಂ ಬೆಳಗ್ಗೆ ಪೊಲೀಸರ ಗನ್ ಸದ್ದು ಮಾಡಿದೆ. ಇಬ್ಬರು ಸುಪಾರಿ ಕಿಲ್ಲರ್​‌ಗಳ ಮೇಲೆ ಪೊಲೀಸರು ಗುಂಡು ಹಾರಿಸಿರುವ ಘಟನೆ ಬೆಂಗಳೂರಿನ ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸುಪಾರಿ ಕಿಲ್ಲರ್ಸ್‌ಗಳಾದ ಭರತ್‌, ಅರುಣ್‌ ಮೇಲೆ ಫೈರಿಂಗ್ ಆಗಿದೆ. ಜಮೀನು ವಿಚಾರಕ್ಕೆ ಉದ್ಯಮಿ ರಾಜಶೇಖರ್‌ ಕೊಲೆಗೆ ಸುಪಾರಿ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಭರತ್‌ ಮತ್ತು ಅರುಣ್‌ ಇಬ್ಬರೂ ಉದ್ಯಮಿಯನ್ನು ಕೊಲ್ಲಲು 10 ಲಕ್ಷ ರೂಪಾಯಿಗೆ ಸುಪಾರಿ ಪಡೆದಿದ್ದರು. ಒಂದರ ನಂತರ ಒಂದು ಒಟ್ಟು […]

ಉದ್ಯಮಿ ಕೊಲ್ಲಲು ಸುಪಾರಿ ಪಡೆದಿದ್ದ ಇಬ್ಬರು ಕಿಲ್ಲರ್​‌ಗಳ ಮೇಲೆ ಪೊಲೀಸ್ ಫೈರಿಂಗ್
ಆಯೇಷಾ ಬಾನು Edited By:

Updated on: Jul 26, 2020 | 3:47 PM

[lazy-load-videos-and-sticky-control id=”pgVtlCuL2VA”]

ಬೆಂಗಳೂರು: ಭಾನುವಾರದ ಬೆಳಂ ಬೆಳಗ್ಗೆ ಪೊಲೀಸರ ಗನ್ ಸದ್ದು ಮಾಡಿದೆ. ಇಬ್ಬರು ಸುಪಾರಿ ಕಿಲ್ಲರ್​‌ಗಳ ಮೇಲೆ ಪೊಲೀಸರು ಗುಂಡು ಹಾರಿಸಿರುವ ಘಟನೆ ಬೆಂಗಳೂರಿನ ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸುಪಾರಿ ಕಿಲ್ಲರ್ಸ್‌ಗಳಾದ ಭರತ್‌, ಅರುಣ್‌ ಮೇಲೆ ಫೈರಿಂಗ್ ಆಗಿದೆ.

ಜಮೀನು ವಿಚಾರಕ್ಕೆ ಉದ್ಯಮಿ ರಾಜಶೇಖರ್‌ ಕೊಲೆಗೆ ಸುಪಾರಿ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಭರತ್‌ ಮತ್ತು ಅರುಣ್‌ ಇಬ್ಬರೂ ಉದ್ಯಮಿಯನ್ನು ಕೊಲ್ಲಲು 10 ಲಕ್ಷ ರೂಪಾಯಿಗೆ ಸುಪಾರಿ ಪಡೆದಿದ್ದರು. ಒಂದರ ನಂತರ ಒಂದು ಒಟ್ಟು 3 ಕೊಲೆ ನಡೆಸಲು ಪ್ಲ್ಯಾನ್‌ ಮಾಡಿಕೊಂಡಿದ್ದರು. ಹೀಗಾಗಿ ಆರೋಪಿಗಳ ಬಂಧನಕ್ಕೆ ಪೊಲೀಸರು ತೆರಳಿದ್ದಾಗ ಆರೋಪಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ಆತ್ಮರಕ್ಷಣೆಗಾಗಿ ಸೋಲದೇವನಹಳ್ಳಿ ಇನ್ಸ್‌ಪೆಕ್ಟರ್‌ ಶಿವಸ್ವಾಮಿ ಫೈರಿಂಗ್‌ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.

Published On - 7:26 am, Sun, 26 July 20

ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Loading...
Unable to load recommendations.
Follow Us