AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುಣೆ: ಸಲಿಂಗ ಸಂಗಾತಿಯಿಂದ 21 ವರ್ಷದ ವಿದ್ಯಾರ್ಥಿಯ ಹತ್ಯೆ

ಸಲಿಂಗ ಸಂಗಾತಿ 21 ವರ್ಷದ ವಿದ್ಯಾರ್ಥಿಯನ್ನು ಚೂರಿ ಇಂದ ತಿವಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಪುಣೆಯಲ್ಲಿ ನಡೆದಿದೆ. ಪುಣೆ ಸಿಟಿ ಪೊಲೀಸ್ ಅಧಿಕಾರಿಗಳ ಪ್ರಕಾರ, ಆರೋಪಿ ಬ್ಯಾಚುಲರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ (ಬಿಬಿಎ) ಕೋರ್ಸ್ ವ್ಯಾಸಂಗ ಮಾಡುತ್ತಿದ್ದ ಮತ್ತು ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದ ವಿದ್ಯಾರ್ಥಿ ಮೇಲೆ ವಘೋಲಿಯ ಬಾಕೋರಿ ರಸ್ತೆಯಲ್ಲಿ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾನೆ.

ಪುಣೆ: ಸಲಿಂಗ ಸಂಗಾತಿಯಿಂದ 21 ವರ್ಷದ ವಿದ್ಯಾರ್ಥಿಯ ಹತ್ಯೆ
ಸಲಿಂಗ್ ಸಂಗಾತಿ
ನಯನಾ ರಾಜೀವ್
|

Updated on: Nov 30, 2023 | 10:47 AM

Share

ಸಲಿಂಗ ಸಂಗಾತಿ 21 ವರ್ಷದ ವಿದ್ಯಾರ್ಥಿಯನ್ನು ಚೂರಿ ಇಂದ ತಿವಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಪುಣೆಯಲ್ಲಿ ನಡೆದಿದೆ. ಪುಣೆ ಸಿಟಿ ಪೊಲೀಸ್ ಅಧಿಕಾರಿಗಳ ಪ್ರಕಾರ, ಆರೋಪಿ ಬ್ಯಾಚುಲರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ (ಬಿಬಿಎ) ಕೋರ್ಸ್ ವ್ಯಾಸಂಗ ಮಾಡುತ್ತಿದ್ದ ಮತ್ತು ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದ ವಿದ್ಯಾರ್ಥಿ ಮೇಲೆ ವಘೋಲಿಯ ಬಾಕೋರಿ ರಸ್ತೆಯಲ್ಲಿ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾನೆ.

ದಾಳಿಯ ನಂತರ, ಆರೋಪಿ ಅಪರಾಧ ಸ್ಥಳದಿಂದ ಪರಾರಿಯಾಗಿದ್ದಾನೆ, ಅಲ್ಲಿ ರಸ್ತೆಯಲ್ಲಿ ಹೋಗುತ್ತಿರುವವರ್ಯಾರೋ ಆಸ್ಪತ್ರೆಗೆ ದಾಖಲಿಸಿದ್ದರು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

ಮೃತನ ಹೆಸರನ್ನು ಬಹಿರಂಗಪಡಿಸಿಲ್ಲ, ಪ್ರಾಥಮಿಕ ತನಿಖೆಯೊಂದಿಗೆ ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 302 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪ್ರತ್ಯೇಕ ತಂಡವನ್ನು ರಚಿಸಲಾಗಿದ್ದು, ಆರೋಪಿಗಳ ಪತ್ತೆಗೆ ಪ್ರಯತ್ನ ನಡೆಯುತ್ತಿದೆ ಎಂದು ಅವರು ಹೇಳಿದರು. ಸಂತ್ರಸ್ತೆ ಸಾವನ್ನಪ್ಪಿದ್ದರಿಂದ ಆರೋಪಿ ಪರಾರಿಯಾಗಿದ್ದಾನೆ ಎಂದು ಅವರು ತಿಳಿಸಿದ್ದಾರೆ. ಪ್ರೇಮ ಪ್ರಕರಣವಾಗಿರಬಹುದೆಂದು ಪೊಲೀಸರು ಶಂಕಿಸಿದ್ದು, ಅದೇ ದಿಕ್ಕಿನಲ್ಲಿ ತನಿಖೆ ಆರಂಭಿಸಿದ್ದಾರೆ.

GAY ಆ್ಯಪ್​​ ಮೂಲಕ ಕರೆಸಿಕೊಂಡಿದ್ದ ವ್ಯಕ್ತಿಯಿಂದ ಚಿನ್ನಾಭರಣಗಳ ಸುಲಿಗೆ ‘GAY’ ಆ್ಯಪ್​​​ನಲ್ಲಿ ‘ಆರ್ಡರ್’ ಮಾಡಿ ಕರೆಸಿಕೊಂಡಿದ್ದ ವ್ಯಕ್ತಿ ಇತರ ಆಗಂತುಕರ ಜತೆ ಸೇರಿ ಮನೆಯಲ್ಲಿದ್ದ ಚಿನ್ನಾಭರಣ ಸುಲಿಗೆ ಮಾಡಿ ಪರಾರಿಯಾದ ಘಟನೆ ಬೆಂಗಳೂರಿನ (Bengaluru) ಆಡುಗೋಡಿ (Adugodi) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿಗಳು ಫರ್ಹಾನ್ ಎಂಬಾತ ಮತ್ತು ಆತನ ಗ್ಯಾಂಗ್​ನವರು ಎಂದು ಹೇಳಲಾಗಿದ್ದು, ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

ನದೀಂ ಎಂಬಾತನಿಗೆ GRINDR ಎಂಬ GAY ಡೇಟಿಂಗ್ ಆ್ಯಪ್​​​ನಲ್ಲಿ ಫರ್ಹಾನ್ ಎಂಬಾತ ಪರಿಚಯವಾಗಿತ್ತು. ನಂತರ ನದೀಂ ಆ್ಯಪ್​ ಮೂಲಕ ‘ಆರ್ಡರ್’ ಮಾಡಿ ಫರ್ಹಾನ್​​ನನ್ನು ತನ್ನ ಮನೆಗೆ ಕರೆಸಿಕೊಂಡಿದ್ದ. ಸ್ವಲ್ಪ ಸಮಯ ಇಬ್ಬರೂ ಮಾತುಕತೆ ನಡೆಸಿದ್ದಾರೆ. ಬಳಿಕ ನದೀಂ ವಾಷ್ ರೂಂಗೆ ಹೋಗಿದ್ದರು. ಇದೇ ವೇಳೆ, ಏಕಾಏಕಿ ದೊಣ್ಣೆಗಳೊಂದಿಗೆ ನಾಲ್ವರು ಆಗಂತುಕರು ಮನೆಯೊಳಗೆ ನುಗ್ಗಿದ್ದಾರೆ. ಇವರನ್ನೆಲ್ಲ ಫರ್ಹಾನ್ ಕರೆ ತಂದಿದ್ದ ಎನ್ನಲಾಗಿದೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ