ತುಮಕೂರು: ಚಿಕ್ಕನಾಯಕನಹಳ್ಳಿ ತಾಲ್ಲೂಕು ಅಣೆಕಟ್ಟಿ ಕೆರೆಯಲ್ಲಿ ಗರ್ಭಿಣಿ ಶವ ಪತ್ತೆ

|

Updated on: Mar 27, 2023 | 8:47 PM

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಅಮ್ಮನಹಳ್ಳಿ ಗ್ರಾಮದ ಕೆರೆಯಲ್ಲಿ ಗರ್ಭಿಣಿ ಶವ ಪತ್ತೆಯಾಗಿದೆ.

ತುಮಕೂರು: ಚಿಕ್ಕನಾಯಕನಹಳ್ಳಿ ತಾಲ್ಲೂಕು ಅಣೆಕಟ್ಟಿ ಕೆರೆಯಲ್ಲಿ ಗರ್ಭಿಣಿ ಶವ ಪತ್ತೆ
ಮೃತ ಮಹಿಳೆ ಮಧುಶ್ರೀ ಕುಟುಂಬ
Follow us on

ತುಮಕೂರು: ತುಮಕೂರು (Tumakuru) ಜಿಲ್ಲೆಯ ಚಿಕ್ಕನಾಯಕನಹಳ್ಳಿ (Chikkanayaknhalli) ತಾಲ್ಲೂಕಿನ ಅಮ್ಮನಹಳ್ಳಿ ಗ್ರಾಮದ ಕೆರೆಯಲ್ಲಿ ಗರ್ಭಿಣಿ ಶವ (Pregnant Woman Body) ಪತ್ತೆಯಾಗಿದೆ. ಮಧುಶ್ರೀ (25) ಮೃತ ಗರ್ಭಿಣಿ. ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಖಲಾಗಿದೆ. ಚಿಕ್ಕನಾಯಕನಹಳ್ಳಿ ತಾಲ್ಲೂಕು ಅಣೆಕಟ್ಟಿ ಮಧುಶ್ರೀಯವರನ್ನು 4 ವರ್ಷಗಳ ಹಿಂದೆ ನಿಟ್ಟೂರು ಹೋಬಳಿ ಅಮ್ಮನಹಳ್ಳಿ ಗ್ರಾಮದ ಶಿಕ್ಷಕರಾಗಿದ್ದ ಯೋಗೀಶ್ ಎಂಬುವರಿಗೆ ಮದುವೆ ಮಾಡಿಕೊಡಲಾಗಿತ್ತು. ದಂಪತಿಗೆ 2 ವರ್ಷದ ಗಂಡು ಮಗು ಇದೆ.

ಭಾನುವಾರ (ಮಾ.26)ರ ಸಂಜೆ ಯೋಗೀಶ್, ಮೃತ ಮಧುಶ್ರೀ ತಂದೆ-ತಾಯಿಗೆ ಕರೆ ಮಾಡಿ ಹೆಂಡತಿ ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದ್ದಾರೆ. ವಿಷಯ ತಿಳಿದ ಕೂಡಲೆ ಅಮ್ಮನಹಳ್ಳಿ ಗ್ರಾಮಕ್ಕೆ ಆಗಮಿಸಿದ ಕುಟುಂಬಸ್ಥರು ಮಧುಶ್ರಿಗಾಗಿ ಹುಡುಕಾಟ ನಡೆಸಿದ್ದಾರೆ. ಕೆಲವು ಹೊತ್ತಿನ ನಂತರ ಗ್ರಾಮದ ಕೆರೆಯಲ್ಲಿ ಶವವೊಂದು ತೇಲುತ್ತಿರುವ ವಿಚಾರ ತಿಳಿದು ಬಂದಿದೆ. ಕೂಡಲೆ ಸ್ಥಳಕ್ಕೆ ಹೋಗಿ ನೋಡಿದಾಗ ಮಧಶ್ರೀ ಶವವಾಗಿತ್ತು. ಇದನ್ನು ಕಂಡ ಮಧುಶ್ರಿ ಕುಟುಂಬಸ್ಥರಿಗೆ ಆಕಾಶವೇ ಕಳಚಿ ತೆಲೆ ಮೇಲೆ ಬಿಂದಂತಾಗಿತ್ತು. ಅಲ್ಲದೇ 2 ವರ್ಷದ ಗಂಡುಮಗುವೂ ನಾಪತ್ತೆಯಾಗಿದ್ದು, ಎಲ್ಲಿದೆ, ಏನಾಗಿದೆ ಎಂಬ ಸುಳಿವು ಸಿಗುತ್ತಿಲ್ಲ ಎಂದು ಮಧುಶ್ರೀ ತಂದೆ-ತಾಯಿಗಳು ದೂರಿದ್ದಾರೆ.

ಇದನ್ನೂ ಓದಿ: ಗಂಡು ಮಗು ಆಗಿಲ್ಲ ಎಂದು ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ; ಪತಿ ಅರೆಸ್ಟ್, ತಲೆ ಮರೆಸಿಕೊಂಡಿರುವ ಅತ್ತೆ-ಮಾವ

ಯೋಗೀಶ್​ರನ್ನು ವಶಕ್ಕೆ ಪಡೆದ ಪೊಲೀಸರು

ಮೃತರ ತಂದೆ ತಾಯಿಗಳು ಗುಬ್ಬಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಮಗಳ ಸಾವಿಗೆ ಆಕೆಯ ಗಂಡ ಯೋಗೀಶ್ ಕಾರಣನಾಗಿದ್ದು, ಆತನ ಮೇಲೆ ಕೊಲೆ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಪ್ರಿಯತಮೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ, ನಂತರ ತಾನೂ ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ

ಬಾಗಲಕೋಟೆ: ಪ್ರಿಯತಮೆ ಮೇಲೆ ಪೆಟ್ರೋಲ್​​  ಸುರಿದು ಬೆಂಕಿ ಹಚ್ಚಿ, ನಂತರ ತಾನೂ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಗುಡೂರು ಗ್ರಾಮದಲ್ಲಿ ನಡೆದಿದೆ. ಪ್ರಿಯತಮೆ ನೇತ್ರಾವತಿ ವಡ್ಡರ್​(21), ಅಫ್ಜಲ್ ಸೊಲ್ಲಾಪುರ (27) ಗಾಯಾಳುಗಳು. ನೇತ್ರಾವತಿ ವಡ್ಡರ ಅವರ ದೇಹ ಶೇ 70 ರಷ್ಟು ಸುಟ್ಟಿದ್ದು, ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅಫ್ಜಲ್ ಸೊಲ್ಲಾಪುರ ಅವರನ್ನು ಹುಬ್ಬಳ್ಳಿ ಕಿಮ್ಸ್​  ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಿಯತಮೆಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ ಅಫ್ಜಲ್​​

ನೇತ್ರಾವತಿ ವಡ್ಡರ್ ಅವರನ್ನು, ಅಫ್ಜಲ್ ಸೊಲ್ಲಾಪುರ ಪ್ರೀತಿಸುತ್ತಿದ್ದರು. ಇತ್ತೀಚಿಗೆ ನೇತ್ರವಾತಿ ಬೇರೆ ಯುವಕನ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದರಿಂದ ಕ್ರೋದಿತನಾಗಿದ್ದ ಅಫ್ಜಲ್​, ಇಂದು (ಮಾ.27) ನೇತ್ರಾವತಿ ಕೋಳಿ ಫಾರಂಗೆ ತೆರಳುತ್ತಿದ್ದ ವೇಳೆ, ಎಳೆದೊಯ್ದು ಕೃತ್ಯ ಎಸಗಿದ್ದಾನೆ. ಇದನ್ನು ಕಂಡು ಸ್ಥಳಕ್ಕೆ ಧಾವಿಸಿದ ಸ್ಥಳಿಯರು ಇಬ್ಬರನ್ನೂ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ನೇತ್ರಾವತಿಯ ದೇಹ ಶೇ 70 ರಷ್ಟು ಸುಟ್ಟಿದೆ. ಘಟನಾ ಸ್ಥಳಕ್ಕೆ ಅಮೀನಗಡ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ