AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಮೊಗ್ಗ: ತಾಯಿಯ ಜೊತೆ ಅನೈತಿಕ ಸಂಬಂಧ ಹೊಂದಿದವನನ್ನು ಬರ್ಬರವಾಗಿ ಕೊಂದ ಮಗ

ಮದುವೆಯಾಗಿದ್ದ ಪತ್ನಿಯು ಸಂಸಾರ ಮಾಡದೇ ತವರು ಮನೆ ಸೇರಿದ್ದಳು. ಈ ನಡುವೆ ಆ ವ್ಯಕ್ತಿಗೆ ಓರ್ವ ಮಹಿಳೆಯ ಜೊತೆ ಪರಿಚಯವಾಗಿತ್ತು. ಇದೇ ಪರಿಚಯವು ಇಬ್ಬರ ನಡುವಿನ ಅನೈತಿಕ ಸಂಬಂಧಕ್ಕೆ ದಾರಿ ಮಾಡಿಕೊಟ್ಟಿತ್ತು. ಹೀಗೆ ಮಹಿಳೆಯ ಹಿಂದೆ ಬಿದ್ದ ವ್ಯಕ್ತಿಯು ಕೊನೆಗೆ ಹೆಣವಾಗಿದ್ದಾನೆ.

ಶಿವಮೊಗ್ಗ: ತಾಯಿಯ ಜೊತೆ ಅನೈತಿಕ ಸಂಬಂಧ ಹೊಂದಿದವನನ್ನು ಬರ್ಬರವಾಗಿ ಕೊಂದ ಮಗ
ಯುವಕನನ್ನ ಕಳೆದುಕೊಂಡು ಗೋಳಾಡುತ್ತಿರುವ ಕುಟುಂಬ
ಕಿರಣ್ ಹನುಮಂತ್​ ಮಾದಾರ್
|

Updated on:Mar 27, 2023 | 7:23 AM

Share

ಶಿವಮೊಗ್ಗ: ಮಾರ್ಚ್ 2 ರಂದು ಶಿಕಾರಿಪುರ ತಾಲೂಕಿನ ಇನಾಮ್ ಮುತ್ತಳ್ಳಿಯ ಗ್ರಾಮದಲ್ಲಿ 30 ವರ್ಷದ ವಿವಾಹಿತ ಸೋಮಪ್ಪ ಎನ್ನುವ ವ್ಯಕ್ತಿಯು ಮೃತಪಟ್ಟಿದ್ದ. ಸೋಮಪ್ಪ ಮತ್ತು ಆತನ ಸ್ನೇಹಿತ ಹನುಮಂತಪ್ಪ ಇಬ್ಬರಿಗೂ ಹಿಗ್ಗಾಮುಗ್ಗಾ ಥಳಿಸಿದ ದುಷ್ಕರ್ಮಿಗಳು  ಗ್ರಾಮದ ಬಳಿ ಇಬ್ಬರನ್ನು ಬಿಟ್ಟು ಹೋಗಿದ್ದರು. ಥಳಿತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸೋಮಪ್ಪನನ್ನು ಗ್ರಾಮಸ್ಥರು ಶಿಕಾರಿಪುರ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅಷ್ಟರಲ್ಲೇ ಸೋಮಪ್ಪ ಮೃತಪಟ್ಟಿದ್ದನು. ಇನ್ನು ಹನುಮಂತಪ್ಪನಿಗೆ ಗಂಭೀರವಾಗಿ ಗಾಯಗಳಾಗಿದ್ದು, ಆತ ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದಾನೆ. ಅಷ್ಟಕ್ಕೂ ಒಂದು ಸಾವು ಮತ್ತು ಓರ್ವ ವ್ಯಕ್ತಿಯನ್ನು ಥಳಿಸಿದ್ದು ಯಾರು, ಯಾಕೆ ಎಂದು ನೋಡಿದ್ರೆ ಅಲ್ಲೊಂದು ಅನೈತಿಕ ಸಂಬಂಧದ ಕಹಾನಿ ಶುರುವಾಗಿತ್ತು.

ಹೌದು ಇದೇ ಗ್ರಾಮದ ಗಂಗಮ್ಮ ಎನ್ನುವ 45 ವಯಸ್ಸಿನ ಅಂಟಿಯ ಜೊತೆ 30ರ ಹರೆಯದ ಸೋಮಪ್ಪನ ನಡುವೆ ಅನೈತಿಕ ಸಂಬಂಧವಿತ್ತು. ಕಳೆದ ವರ್ಷ ಗಂಗಮ್ಮ ಮತ್ತು ಸೋಮಪ್ಪ ವಿಚಾರವಾಗಿ ಗಲಾಟೆ ಆಗಿತ್ತು. ಭೋವಿ ಸಮಾಜದ ಮುಖಂಡರು ಸೋಮಪ್ಪಗೆ 19 ಸಾವಿರ ದಂಡ ಹಾಕುವ ಮೂಲಕ ರಾಜೀ ಪಂಚಾಯಿತಿ ಮಾಡಿದ್ದರುಈ ಘಟನೆ ಬಳಿಕ ಗಂಗಮ್ಮ ತನ್ನ ಮಕ್ಕಳೊಂದಿಗೆ ಹಿರೇಕೆರೂರು ತಾಲೂಕಿನ ಬಲ್ಡೆಕಟ್ಟೆ ಗ್ರಾಮದಲ್ಲಿ ಮನೆ ಮಾಡಿಕೊಂಡು ವಾಸವಾಗಿದ್ದಳು. ಪಂಚಾಯತಿ ಬಳಿಕವೂ ಸೋಮಪ್ಪನ ಮತ್ತು ಗಂಗಮ್ಮನ ಅನೈತಿಕ ಸಂಬಂಧ ಮುಂದುವರೆದಿತ್ತು. ಮಾ. 2ರ ರಾತ್ರಿ ಸೋಮಪ್ಪನಿಗೆ ಗಂಗಮ್ಮ ಚಿಕನ್ ಊಟಕ್ಕೆ ಆಹ್ವಾನ ಕೊಟ್ಟಿದ್ದಳು. ರಾತ್ರಿ ಬೆಳಗಾಗುವುದರಲ್ಲಿ ಅಲ್ಲಿ ನಡೆದಿದ್ದೇ ಬೇರೆ. ಆಂಟಿ ಮನೆಗೆ ಚಿಕನ್ ಊಟ ಮಾಡಲು ಹೋದ ಸೋಮಪ್ಪ ಮತ್ತು ಆತನ ಸ್ನೇಹಿತ ಹನುಮಂತಪ್ಪನ ಮೇಲೆ ಮರ್ಡರ್ ಅಟ್ಯಾಕ್ ನಡೆದಿತ್ತು.

ಇದನ್ನೂ ಓದಿ:ಬೆಂಗಳೂರು: ನಿರ್ಜನ ಪ್ರದೇಶದಲ್ಲಿ ವಿದ್ಯಾರ್ಥಿನಿಯ ಬರ್ಬರ ಕೊಲೆ; ನಾಲ್ವರಿಂದ ಅತ್ಯಾಚಾರ ಶಂಕೆ

ಈ ಇಬ್ಬರಿಗೂ ಗಂಗಮ್ಮಳ ಮಗ ಸುದೀಪ್, ನಾಗರಾಜ್ ಮತ್ತು ರಮೇಶ್ ಇವರೆಲ್ಲರೂ ಸೇರಿ ಸಮೀಪದ ಅರಣ್ಯಕ್ಕೆ ಕರೆದೊಯ್ದು ಅಲ್ಲಿಯೇ ಹಿಗ್ಗಾಮುಗ್ಗಾ ಥಳಿಸುತ್ತಾರೆ. ಇನ್ನೇನು ಸೋಮಪ್ಪನ ಕಥೆ ಮುಗಿಯಿತು ಎನ್ನುವುದು ಗೊತ್ತಾಗುತ್ತಿದ್ದಂತೆ ಮಾ. 3ರ ಬೆಳಗ್ಗೆ ಗ್ರಾಮಕ್ಕೆ ಸೋಮಪ್ಪ ಮತ್ತು ಹನುಮಂತಪ್ಪನನ್ನು ಬಿಟ್ಟು ಹೋಗಿದ್ದಾರೆ. ಈ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸೋಮಪ್ಪನು ಇದೀಗ ಮೃತಪಟ್ಟಿದ್ದಾನೆ. ಮರ್ಡರ್ ಅಟ್ಯಾಕ್ ಮಾಡಿದ ಸುದೀಪ್, ನಾಗರಾಜ್ ಮತ್ತು ರಮೇಶ್ ಮೂವರ ವಿರುದ್ಧ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಆಗಿದೆ.

ಸೋಮಪ್ಪನ ಹತ್ಯೆಗೆ ಮೊದಲೇ ಪ್ಲ್ಯಾನ್​ ರೂಪಿಸಿದ್ದ ಸುದೀಪ್​

ಚಿಕನ್ ಊಟಕ್ಕೆ ಕರೆದಿರುವ ವಿಚಾರ ಮಗ ಸುದೀಪ್​ಗೆ ಗೊತ್ತಾಗಿದೆ. ಹೀಗೆ ಸೋಮಪ್ಪ ಮನೆಗೆ ಬರುತ್ತಾನೆ ಎನ್ನುವುದು ಆಂಟಿಯ ಮಗನಿಗೆ ಗೊತ್ತಾಗುತ್ತಿದ್ದಂತೆ ಆತ ಸೋಮಪ್ಪನ ಮರ್ಡರ್​ಗೆ ಪ್ಲ್ಯಾನ್ ಮಾಡಿಕೊಂಡಿದ್ದನು. ರಮೇಶ್ ಮತ್ತು ನಾಗರಾಜ್ ಇಬ್ಬರು ಸ್ನೇಹಿತರನ್ನು ಬಳಸಿಕೊಂಡಿದ್ದಾನೆ. ಹೀಗೆ ಚಿಕನ್ ಊಟಕ್ಕೆಂದು ಬಂದ ಸೋಮಪ್ಪ ಮತ್ತು ಆತನ ಸ್ನೇಹಿತ ಹನುಮಂತಪ್ಪನನ್ನು ಸಮೀಪದ ಅರಣ್ಯಕ್ಕೆ ಕರೆದುಕೊಂಡು ಹೋಗಿ ಸರಿಯಾಗಿ ಥಳಿಸಿದ್ದಾರೆ. ತಾಯಿ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡ ಸೋಮಪ್ಪನ ಕಥೆ ಮುಗಿಸುವುದಕ್ಕೆ ಮಗ ಸುದೀಪ್ ಹವಣಿಸುತ್ತಿದ್ದನು. ಕೊನೆಗೂ ಸಮಯಕ್ಕೆ ಕಾದು ಕುಳಿತಿದ್ದ ಸುದೀಪ್​ಗೆ ಒಂದು ಒಳ್ಳೆಯ ಅವಕಾಶ ಸಿಕ್ಕಿತ್ತು.

ಇದನ್ನೋ ಓದಿ:9 ವರ್ಷಗಳ ಬಳಿಕ ಗಿಳಿ ನೀಡಿದ ಸಾಕ್ಷಿಯಿಂದ 2014ರ ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ!

ಯಾವಾಗ ಹನುಮಂತಪ್ಪ ಮತ್ತು ಸೋಮಪ್ಪ ಬುಲ್ಡಿಕಟ್ಟೆ ಗ್ರಾಮಕ್ಕೆ ಊಟಕ್ಕೆಂದು ಹೋಗುತ್ತಾರೋ. ಮಗ ಸುದೀಪ್​, ರಮೇಶ್ ಮತ್ತು ನಾಗರಾಜ್ ಪ್ಲ್ಯಾನ್ ಮಾಡಿ ಇಬ್ಬರ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದರು. ಕಬ್ಬಿಣದ ಸಲಾಕೆಯಿಂದ ಹಲ್ಲೆ ಮಾಡಿದ್ದಾರೆ. ಬುಲ್ಡಿಕಟ್ಟೆಯ ಗ್ರಾಮದಿಂದ ದೂರದಲ್ಲಿರುವ ಕಾಡಿನಲ್ಲಿ ರಮೇಶ್, ಗಂಗಮ್ಮನ ಮಗ ಸಂದೀಪ್ ಮತ್ತು ನಾಗರಾಜ್ ಹನುಮಂತಪ್ಪ ಮತ್ತು ಸೋಮಪ್ಪರಿಗೆ ಬಟ್ಟೆ ಬಿಚ್ಚಿ ಥಳಿಸಿದ್ದಾರೆ. ಹೊಡೆತ ತಾಳಲಾರದೆ ಸೋಮಪ್ಪ ಅಸು ನೀಗಿದ್ದಾನೆ.

ಮರಣೋತ್ತರ ಪರೀಕ್ಷೆ ಮುಗಿಸಿಕೊಂಡು ಸೋಮಪ್ಪನ ಮೃತದೇಹವನ್ನ ಇನಾಮ್ ಮುತ್ತಳ್ಳಿ ಗ್ರಾಮಕ್ಕೆ ತೆಗೆದುಕೊಂಡು ಹೋಗಿದ್ದಾರೆ. ‌ ಮೃತನ ಕುಟುಂಬ ಆರೋಪಿಗಳನ್ನ ಬಂಧಿಸುವ ತನಕ ಅಂತ್ಯಕ್ರಿಯೆ ಮಾಡುವುದಿಲ್ಲವೆಂದು ಪಟ್ಟು ಹಿಡಿದಿದ್ದರು. ಪೊಲೀಸರು ಈಗಾಗಲೇ ಇಬ್ಬರ ಬಂಧನವಾಗಿದೆ ಎಂದು ಸಮಜಾಯಿಷಿ ಕೊಟ್ಟ ಬಳಿಕ ಮೃತನ ಸಂಬಂಧಿಕರು ಮತ್ತು ಗ್ರಾಮಸ್ಥರು ಅಂತ್ಯಕ್ರಿಯೆ ಮಾಡಿದ್ದಾರೆ. ಹೀಗೆ ಗ್ರಾಮದಲ್ಲಿ ಶುರುವಾದ ಅನೈತಿಕ ಸಂಬಂಧವು ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ. ಇನ್ನು ಚಿಕ್ಕವಯಸ್ಸಿನ ಸೋಮಪ್ಪ ಅಂಟಿಯ ಮೋಹಕ್ಕೆ ಒಳಗಾಗಿ ದಾರಿ ತಪ್ಪಿ, ತನ್ನ ಸುಂದರ ಬದುಕು ಹಾಳು ಮಾಡಿಕೊಂಡು ತನ್ನ ಜೀವವನ್ನೇ ಕಳೆದುಕೊಂಡಿದ್ದಾನೆ.

ಇದನ್ನೂ ಓದಿ:ಶರತ್ ಶೆಟ್ಟಿ ಕೊಲೆ ಪ್ರಕರಣ‌: ಕೊಲೆಗಾರರ ವಿರುದ್ಧ ಕ್ರಮಕ್ಕೆ ದೈವದ ಮೊರೆ ಹೋದ ಕುಟುಂಬ, ಸರ್ವನಾಶ ಮಾಡುವುದಾಗಿ ದೈವ ಅಭಯ

ವಯಸ್ಸಿಗೆ ಬಂದ ಮಗ ಇದ್ದರು ತಾಯಿ ಮಾತ್ರ 30 ವಯಸ್ಸಿನ ವಿವಾಹಿತನ ಮೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದೇ ಇಲ್ಲಿ ದೊಡ್ಡ ಯಡವಟ್ಟು ಆಗಿತ್ತು. ತಾಯಿ ಜೊತೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯ ಕಥೆ ಮುಗಿಸುವ ಮೂಲಕ ಮಗ ಮತ್ತು ಆತನ ಸ್ನೇಹಿತರು ಸೇಡು ತೀರಿಸಿಕೊಂಡಿದ್ದಾರೆ. ಆವೇಷ ಮತ್ತು ಸಿಟ್ಟು ಸೇಡಿನ ಭರದಲ್ಲಿ ಕಾನೂನು ಕೈಗೆತ್ತಿಕೊಂಡು ವಿನಾಕಾರಣ ಇವೆಲ್ಲರೂ ಸದ್ಯ ಕೊಲೆ ಕೇಸ್​ನಲ್ಲಿ ಅಂದರ್ ಆಗಿದ್ದು ಮಾತ್ರ ವಿಪರ್ಯಾಸ.

ವರದಿ: ಬಸವರಾಜ್ ಯರಗಣವಿ ಟವಿ9 ಶಿವಮೊಗ್ಗ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:21 am, Mon, 27 March 23