ಬಳ್ಳಾರಿ: ಡಿಎಆರ್​ ಪೇದೆಯ ಬರ್ಬರ ಕೊಲೆ; ಪತ್ನಿಯಿಂದಲೇ ಹತ್ಯೆಯಾದ್ನಾ ಇಬ್ಬರ ಹೆಂಡತಿಯರ ಮುದ್ದಿನ ಪೊಲೀಸ್?

ಆತ ಇಬ್ಬರ ಹೆಂಡತಿಯರ ಮುದ್ದಿನ ಪೊಲೀಸ್​. ಒಬ್ಬಳ ಜೊತೆ ಸರಿಯಾಗಿ ಸಂಸಾರ ಮಾಡಿದ್ರೆ ಆತ ಮರ್ಡರ್ ಆಗುತ್ತಿರಲಿಲ್ಲವೇನೋಮದುವೆಯಾಗಿ ಮಕ್ಕಳಿದ್ದರೂ ನರ್ಸ್ ಒಬ್ಬಳ ಪ್ರೀತಿಯಲ್ಲಿ ಬಿದ್ದ ಆ ಪೇದೆ ನರ್ಸ್ ಜೊತೆ ಎರಡನೇ ಮದುವೆಯಾಗಿದ್ದ. ಆದರೆ ಇದೀಗ ಆ ನರ್ಸ್ ಪತ್ನಿಯೇ ಪೇದೆಯನ್ನ ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಿದ್ದಾಳೆ ಎನ್ನುವ ಆರೋಪ ಕೇಳಿಬಂದಿದೆ.

ಬಳ್ಳಾರಿ: ಡಿಎಆರ್​ ಪೇದೆಯ ಬರ್ಬರ ಕೊಲೆ; ಪತ್ನಿಯಿಂದಲೇ ಹತ್ಯೆಯಾದ್ನಾ ಇಬ್ಬರ ಹೆಂಡತಿಯರ ಮುದ್ದಿನ ಪೊಲೀಸ್?
ಮೃತ ಪೊಲೀಸ್​ ಪೇದೆ, ಆತನನ್ನ ಕಳೆದುಕೊಂಡ ಪೋಷಕರ ಅಳಲು ಮುಗಿಲುಮುಟ್ಟಿದೆ
Follow us
ಕಿರಣ್ ಹನುಮಂತ್​ ಮಾದಾರ್
|

Updated on: Mar 24, 2023 | 12:08 PM

ಬಳ್ಳಾರಿ: ಹೀಗೆ ಪೊಲೀಸ್ ಯುನಿಫಾರ್ಮ್​ನಲ್ಲಿರುವ ಈ ಯುವಕನ ಹೆಸರು ಜಾಫರ್ ಸಾಹೀಬ್. ಮೂಲತಃ ಜಿಲ್ಲೆಯ ಚಿನ್ನಾಪುರ ಗ್ರಾಮದವನು, ಬಳ್ಳಾರಿಯಲ್ಲಿ ಡಿಎಆರ್ ಪೊಲೀಸ್ ಪೇದೆಯಾಗಿ ಕೆಲಸ ಮಾಡುತ್ತಿದ್ದ.‌ ನಿನ್ನೆ(ಮಾ.22) ರಾತ್ರಿ 10 ಗಂಟೆ ಹೊತ್ತಲ್ಲಿ ಡಿಎಆರ್ ಪೊಲಿಸ್ ಗ್ರೌಂಡ್ ಪಕ್ಕ ಇರುವ ಕ್ವಾಟ್ರಸ್​ನ ಮನೆಯಲ್ಲೇ ಜಾಫರ್ ಮಾರಕಾಸ್ತ್ರಗಳಿಂದ ಹತ್ಯೆಯಾಗಿದ್ದ. ಪೊಲೀಸ್​ ಕ್ವಾಂಟ್ರಸ್​ನಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಜಾಫರ್​ನ ಶವ ನೋಡಿ ಪತ್ನಿ ಮೊದ ಮೊದಲು ಅಕ್ಕಪಕ್ಕದ ಮನೆಯವರನ್ನಕರೆದು ಯಾರೋ ನನ್ನ ಗಂಡನನ್ನ ಕೊಲೆ ಮಾಡಿದ್ದಾರೆ ಎಂದು ಕಣ್ಣೀರಿಟ್ಟಿದ್ದಳು. ನಂತರ ಸ್ಥಳಕ್ಕೆ ಬಂದ ತನಿಖಾಧಿಕಾರಿಗಳು ಹತ್ಯೆಗೆ ಕಾರಣ ಹುಡುಕುತ್ತಾ ಇಬ್ಬರು ಹೆಂಡತಿಯರ ಮುದ್ದಿನ ಪೊಲೀಸ್​ ಪೇದೆ ಕಥೆ ಕೇಳಿ ದಂಗಾಗಿಬಿಟ್ಟಿದ್ದಾರೆ.

ಹೌದು ಹೀಗೆ ಕೊಲೆಯಾಗಿರುವ ಜಾಫರ್ ಪೇದೆಯಾಗಿ ಅದೆಷ್ಟು ಕೆಲಸ ಮಾಡಿದ್ದನೋ ಇಲ್ಲವೋ ಗೊತ್ತಿಲ್ಲ. ಆದರೆ ಇಬ್ಬರ ಹೆಂಡತಿಯರನ್ನ ಮ್ಯಾನೇಜ್ ಮಾಡಲು ಹೋಗಿಯೇ ಹೆಣವಾಗಿದ್ದಾನೆ. ಜಾಫರ್ ನನ್ನ ಎರಡನೇ ಮದುವೆಯಾಗಿದ್ದ ನರ್ಸ್ ಹನುಮಕ್ಕನೇ ಜಾಫರ್​ನನ್ನ ಕಬ್ಬಿಣದ ರಾಡ್​ನಿಂದ ಹೊಡೆದು ಹತ್ಯೆ ಮಾಡಿದ್ದಾಳಂತೆ. ಜಾಫರ್​ನನ್ನ ಕೊಲೆ ಮಾಡಿ ಹನುಮಕ್ಕ ಕಥೆ ಕಟ್ಟುತ್ತಿದ್ದಾಳೆಂದು ಜಾಫರ್ ಪೋಷಕರು ಆರೋಪಿಸುತ್ತಿದ್ದಾರೆ.

ಇದನ್ನೂ ಓದಿ:ಸಚಿವೆ ಶಶಿಕಲಾ ಜೊಲ್ಲೆ ಮನೆ ಮುಂದೆ ರೌಡಿಶೀಟರ್​ ಮೇಲೆ ಕಾರು ಹತ್ತಿಸಿ ಕೊಲೆಗೆ ಯತ್ನ, ಬಿಬಿಎಂಪಿ ಟ್ಯಾಕ್ಸ್ ಕಲೆಕ್ಟರ್ ಅರೆಸ್ಟ್

ಮುಸ್ಲಿಂ ಧರ್ಮದ ಜಾಫರ್ ಸಾಹೀಬ್ ಹಿಂದೂ ಧರ್ಮದ ನರ್ಸ್ ಹನುಮಕ್ಕಳನ್ನ 2ನೇ ಮದುವೆ ಆಗೋದಕ್ಕೂ ಮುನ್ನ ಮುಸ್ಲಿಂ ಮಹಿಳೆ ನವೀನ್ ತಾಜ್ ಜೊತೆ ಮದುವೆಯಾಗಿದ್ದ. ನವೀನ್ ತಾಜ್ ಗರ್ಭಿಣಿಯಾಗಿದ್ದಾಗ ಪತ್ನಿಯನ್ನ ಆಸ್ಪತ್ರೆಗೆ ಕರೆದುಕೊಂಡು ಓಡಾಡುವಾಗ ಅಲ್ಲಿದ್ದ ನರ್ಸ್ ಹನುಮಕ್ಕ ಜೊತೆ ಲವ್ವಿ ಡವ್ವಿ ನಡೆಸಿದ್ದ. ಇದು ಮೊದಲ ಪತ್ನಿ ನವೀನ್ ತಾಜ್​ಗೆ ಗೊತ್ತಾಗಿ ಜಾಫರ್​ನ ಬಿಟ್ಟು ತವರು ಮನೆ ಸೇರಿದ್ದಳು‌‌. ಅದೇ ಗ್ಯಾಪ್​ನಲ್ಲಿ ಹನುಮಕ್ಕ ಜೊತೆ ಜಾಫರ್ ಮದುವೆಯಾಗಿ ನಾಲ್ಕು ವರ್ಷ ಕಳೆದಿದ್ದ. ಆದರೆ ಈ ನಡುವೆ ಜಾಫರ್ ಮತ್ತೆ ಮೊದಲ ಪತ್ನಿ ಮನೆಗೆ ಓಡಾಟ ಶುರು ಮಾಡಿದ್ದ. ಇದನ್ನ ಸಹಿಸದ ಹನುಮಕ್ಕ ಮತ್ತು ಬರುವ ಇಂಜೆಕ್ಷನ್ ಮಾಡಿ ಪ್ರಜ್ಞೆ ತಪ್ಪಿಸಿ ಬಳಿಕ ರಾಡ್ ನಿಂದ ಹೊಡೆದು ಕೊಲೆ ಮಾಡಿದ್ದಾಳೆ ಎನ್ನುವ ಸಂಶಯ ಪೋಷಕರದ್ದು.

ಈ ಹಿನ್ನಲೆ ಹನುಮಕ್ಕಳೆ ಜಾಫರ್​ನನ್ನ ಕೊಲೆ ಮಾಡಿಸಿದ್ದಾಳೆ ಎಂದು ದೂರು ನೀಡಿದ ಬೆನ್ನಲ್ಲೆ ಪೊಲೀಸ್ ಕ್ವಾಟರ್ಸ್​ನಲ್ಲಿ ಹೊರಗಿನವರು ಬಂದು ಹೊಡೆಯಲು ಸಾಧ್ಯವಿಲ್ಲ. ಇದೊಂದು ಫ್ರೀ ಪ್ಲಾನ್ ಮರ್ಡರ್, ಅದರಿಂದ ಜಾಫರ್ ಪತ್ನಿ ಹನುಮಕ್ಕಳನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಇಬ್ಬರು ಪತ್ನಿಯರನ್ನ ಮ್ಯಾನೇಜ್ ಮಾಡಲು ಹೋಗಿ ಇಬ್ಬರ ಹೆಂಡಿರ ಮುದ್ದಿನ ಪೊಲೀಸ್​ ಹೆಣವಾಗಿದ್ದಾನೆ. ಆದರೆ ಪೊಲೀಸ ಕ್ವಾಂಟ್ರಸ್​ನಲ್ಲಿ ಪತ್ನಿಯೊಬ್ಬಳೇ ಕೊಲೆ ಮಾಡಲು ಸಾಧ್ಯವಾ ಅನ್ನೋದು ಪೊಲೀಸರ ಅನುಮಾನವಾಗಿದೆ.

ಇದನ್ನೂ ಓದಿ:ಕಾರು ಪಾರ್ಕಿಂಗ್ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಕಿರಿಕ್; ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಯುವಕನ ಬರ್ಬರ ಕೊಲೆ

ಹೀಗಾಗಿ 2ನೇ ಪತ್ನಿ ಹನುಮಕ್ಕಳನ್ನ ಪೊಲೀಸ್​ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದು. ಕೊಲೆಗೆ ಗಂಡ ಹೆಂಡಿರ ಜಗಳ ಕಾರಣವಾ. ಇಲ್ಲ ಬೇರೆಯವರು ಕೊಲೆ ಮಾಡಿದ್ರಾ ಅನ್ನೋದು ತನಿಖೆಯಿಂದ ಬೆಳಕಿಗೆ ಬರಬೇಕಾಗಿದೆ. ಆದರೆ ಜಾಫರ್ ಸಾವಿನಿಂದ ಇಬ್ಬರು ಹೆಂಡಿರ ಫೈಕಿ ಮೊದಲ ಪತ್ನಿಯ ಇಬ್ಬರು, 2ನೇ ಪತ್ನಿಯ ಮಗುವೊಂದು ಅನಾಥವಾಗಿದ್ದು ಮಾತ್ರ ದುರಂತವಾಗಿದೆ.

ವರದಿ: ವಿರೇಶ್​ ದಾನಿ ಟಿವಿ9 ಬಳ್ಳಾರಿ

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್